ಶ್ರೀ ಧರೆಗೆ ದೊಡ್ಡವರ ಚರಿತೆ (ಸಂಚಿಕೆ 24)

24. ಶ್ರೀ ರಾಚಪ್ಪಾಜಿಗೆ ಕಲ್ಯಾಣವನ್ನು ಅಪ್ಪಣೆ ಕೊಡಿಸುತ್ತಾರೆ ಮತ್ತು ಫಲಾರದಯ್ಯನವರಿಗೆ ಸ್ವಾಮಿ ಆದಿರೂಪಿ ಕೊಡಿಸಿದ ಅಪ್ಪಣೆ.

ಇನ್ನೆನು ಸ್ವಾಮಿ ಮಂಟೇದ ಅಯ್ಯ ಬಾವಿಗೆ ಇಳಿದು ಹೋಗಿ ಪವಡಿಸಿಬಿಡಬೇಕು ಆಗ ರಾಚಪ್ಪಾಜಿ ಬಂದು, ಸ್ವಾಮಿಯ ಪಾದಕ್ಕೆ ಎರಗಿ, "ನಮಗೆ ಕಲ್ಯಾಣದ ಅಪ್ಪಣೆ ಕೊಡಿಸುವುದಾಗಿ ತಿಳಿಸಿದ್ದೀರಿ. ಪ್ರಭು ಅದನ್ನು ತಾವು ಮಾಡಿಕೊಟ್ಟು ಉಪಕರಿಸಬೇಕು."__ ಎನ್ನುತ್ತಾರೆ. ಆಗ ಸ್ವಾಮಿ ಆಗಲೆಂದು ಮನಸಾ ಒಪ್ಪಿ ತೋಪಿನ ದೊಡ್ಡಮ್ಮ ತಾಯಿಗೆ ಕೆಂಡಗಣ್ಣ ರಾಚಪ್ಪಯ್ಯನಿಗೆ ಸ್ನಾನ ಮಡಿಗಳನ್ನು ಮಾಡಿಸಿ, ಉರಿಗದ್ದಿಗೆಯ ಎದುರಿನಲ್ಲೇ ಸೀತಾಳೆ ಚಪ್ಪರ ಹಾಕಿಸಿ. ಹಸೆಮಣೆ, ಕಳಸ ಕನ್ನಡಿಗಳನ್ನು ಇಡಿಸಿ, ರಾಚಪ್ಪ ಅಯ್ಯನಿಗೂ ತೋಪಿನ ದೊಡ್ಡಮ್ಮ ತಾಯಿಗೂ ವೀರಕಂಕಣ ಕಟ್ಟಿಸಿ ದೂಪದೀಪಗಳನ್ನು ಬೆಳಗಿ, ಶುಭ ಲಗ್ನವನ್ನು ನೆರವೇರಿಸುತ್ತಾರೆ. ರಾಚಪ್ಪನ ಹಸ್ತದಿಂದ ದೊಡ್ಡಮ್ಮ ತಾಯಿಯ ಕೊರಳಿಗೆ, ದೊಡ್ಡಮ್ಮತಾಯಿಯ ಹಸ್ತದಿಂದ ರಾಚಪ್ಪನ ಕೊರಳಿಗೆ ಸಂಬಂಧಮಾಲೆಯನ್ನು ನೆರೆದ ಶಿವಗಣಗಳ ಮಧ್ಯೆ ಹಾಕಿಸಿ- ರಾಚರಾಯರ ಕೈಗಳಿಂದ ದೊಡ್ಡಮ್ಮ ತಾಯಿಯ ಕೊರಳಿಗೆ ಮಾಂಗಲ್ಯ ಸೂತ್ರವನ್ನು ಕಟ್ಟಿಸಿ, ಆಶೀರ್ವಚನ ನುಡಿಯುತ್ತಾರೆ.

"ನಿಮ್ಮ ಸ್ಥಳ ಕಪ್ಪಡಿ ಎನ್ನುವ ಪವಿತ್ರ ಸ್ಥಳ. ಅದು ಕಾವೇರಿ ಚದುರ ಮಧ್ಯೆ ತಿಪ್ಪುರು ರಾಮಸಮುದ್ರದ ಬಳಿ ಇದೇ ನೀವುಗಳಿಬ್ಬರೂ ಅಲ್ಲಿ ಹೋಗಿ, ಆ ಕ್ಷೇತ್ರದ ಮಹಿಮೆಯನ್ನು ಪ್ರಜ್ವಲಿಸಿ ಬಾಳಿ."
  ಎಲ್ಲರಿಗೂ ಅಪರಿಮಿತವಾದ ಆನಂದವಾಗುತ್ತದೆ.

:: ಫಲಾರದಯ್ಯನವರಿಗೆ ಸ್ವಾಮಿ ಆದಿರೂಪಿ ಕೊಡಿಸಿದ ಅಪ್ಪಣೆ ::

ಫಲಾರದಯ್ಯನವರು ಬಂದು ಆದಿರೂಪಿಗೆ ನಮಸ್ಕರಿಸಿ "ನನಗೆ ಏನನ್ನು ಅಪ್ಪಣೆಕೊಡುವಿರಿ?" ಎಂದು ಕೇಳುತ್ತಾರೆ. ಆಗ ಸ್ವಾಮಿ, "ಎಲೈ ಫಲಾರದಯ್ಯ, ನಿನ್ನ ಸ್ಥಳ ಇದಲ್ಲ, ಮಲ್ಲಿಗೆಕಾನ ಎಂಬುವನು ಏಳು ಒಂಟೆಗಳ ಮೇಲೆ ದೇವ ಪುರಾಣದಿಗಳನ್ನು ಏರಿಕೊಂಡು ದೇವ ಮಾನವರನೆಲ್ಲಾ ಸೆರೆಹಿಡಿದು ಕರೆದುಕೊಂಡು ಬರುತ್ತಿರುತ್ತಾನೆ. ನೀನು ಅವನ ಏಳು ಒಂಟೆ ಪುರಾಣಗಳನ್ನೆಲ್ಲಾ ನೀನು ಸುಟ್ಟು ಭಸ್ಮಮಾಡಿ ಆ ಮಲ್ಲಿಗೆಕಾವನನ್ನು ಗೆಲ್ಲಬೇಕು. ಅದಕ್ಕಾಗಿ ನೀನು ಮುಟ್ಟನ ಹಳ್ಳಿ ತೋಪಿನಲ್ಲಿ ಪವಡಿಸು ಹೋಗು" ಎಂದು ಹೇಳಿ ಆತನ ಮೈ ದಡವಿ ಆಶೀರ್ವಾದ ಮಾಡುತ್ತಾರೆ.

ಮುಂದುವರಿಯುತ್ತದೆ ..
ಓದಿದ ಗುರುತಾಗಿ ಒಂದು ಲೈಕ್ ಮತ್ತು ಶೇರ್ ಮಾಡಿ.
ನಿಮ್ಮ ಪ್ರೋತ್ಸಾಹವಿರಲಿ.. ಧನ್ಯವಾದಗಳು 🙏

👇ಮುಂದಿನ ಸಂಚಿಕೆಯಲ್ಲಿ (೨ ದಿನಗಳಲ್ಲಿ)
25. ಶ್ರೀ ಚನ್ನಾಜಮ್ಮನಿಗೆ ಆಶೀರ್ವಾದ ಮತ್ತು ಶ್ರೀ ಸಿದ್ದಪ್ಪಾಜಿಯವರಿಗೆ ಚರಮ ಉಪದೇಶ.  

👈 ಹಿಂದಿನ ಸಂಚಿಕೆ:
23. ಆದಿ ಬೊಪ್ಪಗೊಂಡನ ಪುರದಲ್ಲಿ ಪಾಂಚಾಳದವರು.
ನಮ್ಮ ಬ್ಲಾಗ್ ನಲ್ಲಿ ಓದಲು:
👉 https://goo.gl/AAbcwb
ಹಿಂದಿನ ಸಂಚಿಕೆ ನಮ್ಮ ವೆಬ್ಸೈಟ್ ನಲ್ಲಿ ಓದಲು:
👉 https://goo.gl/nxgY4J
ಹಿಂದಿನ ಸಂಚಿಕೆ ನಮ್ಮ ಫೇಸ್ಬುಕ್ ಪೇಜಲ್ಲಿ ಓದಲು:
👉 https://goo.gl/5RyKHN
<-------------------------->
Website: Siddappaji.com
Email: Lordsiddappaji@gmail.com

Find us: Siddappaji Lord (Admin)
Www.facebook.com/lord.siddappaji
Www.facebook.com/sri.manteswamy
Also on Twitter, Instagram & Google+

ಸಂಪೂರ್ಣ ಕಥೆ ತಿಳಿಯುವ ಆಸಕ್ತರು 👇 ಲಿಂಕ್ ಓಪನ್ ಮಾಡಿ
📓Read: https://goo.gl/aBBDN1 https://goo.gl/QYVt7o
🔊listen: https://goo.gl/hXvMdD https://goo.gl/BuXToJ https://goo.gl/e4hWAh 

No comments:

Post a Comment