23. ಆದಿ ಬೊಪ್ಪಗೊಂಡನ ಪುರದಲ್ಲಿ ಪಾಂಚಾಳದವರು.
ಸ್ವಾಮಿ ಸಿದ್ದಯ್ಯ ಆ ಏಳುಾ ಮಂದಿಗೆ ಆಗಲೇ ಸ್ನಾನ ಮಾಡಿಸುತ್ತಾರೆ. ಮಡಿ ತೊಡಿಸುತ್ತಾರೆ. ಲಾಂಛನ ಕಟ್ಟಿಸುತ್ತಾರೆ. ಗುರುಭೋದೆ ಮಾಡುತ್ತಾರೆ. ಅವರೆಲ್ಲರಿಗೆ ಧಣಿಗಳೆನ್ನುವ ಹೆಸರನ್ನು ತೆಗೆದು ಹೊಸ ಶಿವಭಕ್ತರ ಹೆಸರನ್ನು ಕರುಣಿಸುತ್ತಾರೆ. ಮುಂದೆ ಈ ಏಳು ಜನರುಾ ನೀಲಗಾರರಾಗಿ ಸ್ವಾಮಿಯ ಶಕ್ತಿಯನ್ನು ಜಗತ್ತಿಗೆ ಪ್ರಕಾಶಪಡಿಸುತ್ತಾರೆ.
ಈ ಏಳೂ ಜನರನ್ನು ಕರೆದುಕೊಂಡು ಹೋಗಿ ಹೊಲದಲ್ಲಿ ಹೆಣವಾಗಿ ಬಿದ್ದಿದವರೆಲ್ಲಾ ತೀರ್ಥ ಪ್ರೋಕ್ಷಣೆಯಿಂದ ಜೀವಕೊಟ್ಟು ಮೇಲೇಳಿಸಿ ಹಲಗೂರಿಗೆ ಸ್ವಾಮಿ ಕಳುಹಿಸಿಕೊಡುತ್ತಾರೆ.
ಆಗ ಏಳು ಜನ ಘನ ನೀಲಗಾರರುಾ ಕಾಳಿಕಾ ಮತ್ತು ಭವಾನಿ ಎನ್ನುವ ಕುಲುಮೆಗಳನ್ನು ಸಾರಿಸಿ ಗುಡಿಸಿ. ಪೂಜಿಸಿ ಹತ್ತಿಸಿ' ಪರಮ ಜ್ಯೋತಿಯವರಿಗಾಗಿ ನಗಾದಿಗಳನ್ನು ಮಾಡಲು ಹೊರಟು, ಬೇಳೆ, ಬಿರುವಿನ ಕೊಂಬು ಕಹಳೆ, ನಗರಿ, ಹುಯ್ಯಿಲು ದಮ್ಮಟೆ ಇತ್ಯಾದಿಗಳನ್ನೆಲ್ಲಾ ಎರಕ ಹುಯ್ಯುತ್ತಾರೆ ಮತ್ತು ಅವುಗಳನ್ನು ಭಯ ಭಕ್ತಿಗಳಿಂದ ತಂದು ಸ್ವಾಮಿ ಸಿದ್ದಯ್ಯನವರಿಗೆ ಚಿನ್ನದ ತೊಟ್ಟಿಲು ಬೆಳ್ಳಿಯ ಸರಪಳಿಯ ಸಮೇತ ಅರ್ಪಿಸುತ್ತಾರೆ.
ಆಗ ಸ್ವಾಮಿ ಸಿದ್ದಯ್ಯ ಆ ಏಳುನೂರೈವತ್ತ ಪಾಂಚಾಳರ ಕೈಯಲ್ಲೂ ಅವುಗಳನ್ನೆಲ್ಲಾ ಹೊರಸಿಕೊಂಡು, ಏಳು ಜನ ನೀಲಗಾರರನ್ನು ಕರೆದುಕೊಂಡು ಆದಿಯ ಬೊಪ್ಪಣಪುರಕ್ಕೆ ಬರುತ್ತಾರೆ, ಸ್ವಾಮಿಯ ಹೊಸ ಒಕ್ಕಲನ್ನು ಕಂಡು ತೋಪಿನ ದೊಡ್ಡಮ್ಮ ತಾಯಿಗೆ ಅಪಾರವಾದ ಸಂತೋಷವಾಗುತ್ತದೆ.
ಉರಿಗದ್ದುಗೆಯ ಮೇಲೆ ಪವಡಿಸಿದ್ದ ಆದಿ ಪರಮ ಪರ೦ಜ್ಯೋತಿಗೆ ಎಲ್ಲರೂ ನಮಸ್ಕರಿಸಿ ಆಶೀರ್ವಾದ ಪಡೆಯುತ್ತಾರೆ ಸ್ವಾಮಿ ಆದಿಮೂರ್ತಿ ಆ ಕ್ಷಣವೇ ಎಳಂದೂರು ಲಿಂಗೇಗೌಡನನ್ನು ಕರೆಸಿ, ಹನ್ನೆರಡು ಕಂಡುಗ ಸಣ್ಣಕ್ಕಿ, ಆರು ಕಂಡುಗ ತೊಗರಿಬೇಳೆ ಮೊದಲಾದವನ್ನೆಲ್ಲಾ ತರಿಸಿ ಅಡುಗೆ ಮಾಡಿಸುತ್ತಾರೆ.
ತೋಪಿನ ತಾಯಿ ಗದ್ದಿಗೆಯ ಬಳಿಯಿಂದ ಮಠದವರಿಗೆ ಏಳು ಪಂಕ್ತಿ ಮಾಡಿ ಕೂರಿಸುತ್ತಾರೆ ರಾಚರಾಯ ಎಲೆ ಬಡಿಸುತ್ತಾನೆ. ಫಲಾರದಯ್ಯ ಅಗ್ಗಣಿ ಹಾಕಿಕೊಂಡು ಹೋಗುತ್ತಾನೆ. ಹಿರಿಗುರು ರಾಜೇಂದ್ರಸ್ವಾಮಿ ಮತ್ತು ರಾಜ ಪಟ್ಟದ ಈರಭದ್ರಸ್ವಾಮಿ ಭಕ್ಷಗಳನ್ನು ಬಡಿಸುತ್ತಾರೆ, ಹತ್ತಾರು ವಾದ್ಯಗಳನ್ನು ಬಡಿಸಿ, ಸಾಂಬ್ರಾಣಿ ಹತ್ತಿಸಿ ಹಿಡಿದು, ಆದಿ ಮೂಲನನ್ನು ಧ್ಯಾನಿಸಿ, ಎಲ್ಲರನ್ನೂ ಊಟಮಾಡಲು ಕೇಳಿಕೊಳ್ಳುತ್ತಾರೆ. ಏಳು ಮಂದಿ ಧಣಿಗಳೂ ಒಂದೇ ಕಡೆ ಕುಳಿತಿದ್ದವರು, "ಯಾರು ಎಲೆಗೆ ಕೈ ಹಾಕಬೇಡಿ, ನಾವು ಮಾಡುತ್ತಿದ್ದ ಪದಾರ್ಥಗಳೆಲ್ಲಾ ತುಂಬ ಶ್ರೀಮಂತವಾಗಿದ್ದುವು." ಇವು ಶುದ್ಧಾ೦ಗವಾಗಿ ಬಡವರದಾಗಿವೆ, ನಡೆಯಿರಿ ಊರಲ್ಲೇ ಊಟ ಮಾಡೋಣ," ಎಂದು ಮೇಲೆದ್ದು, ಪಾಂಚಾಳರನ್ನೆಲ್ಲಾ ಏಳಿಸಿಕೊಂಡು ಹಲಗೂರಿನ ಕಡೆಗೆ ಹೊರಟುಹೋಗಿ ಬಿಡುತ್ತಾರೆ.
ಆದಿ ಪರಮ ಪರಂಜ್ಯೋತಿಗೆ ಎಂತಹದ್ದೋ ಅನುಮಾನ ಬಂದು, ಯಾಕೋ ಕಾಣೆ ಕಡೆಯ ಬಾಗಿಲಲ್ಲಿ ಪಾಂಚಾಳದವರ ಸದ್ಧೇ ಇಲ್ಲವಲ್ಲಾ ಎಂದುಕೊಂಡು ಹೊರಬಂದು ನೋಡುತ್ತಾರೆ. ಹೆಸರಿಗೆ ಎಂದು ಒಬ್ಬ ಪಾಂಚಾಳನೂ ಅಲ್ಲಿ ಇರುವುದಿಲ್ಲ. ಸ್ವಾಮಿ ಸಿದ್ದಯ್ಯನನ್ನು ಕರೆಸಿ "ಏಕೆ ಹೀಗಾಯಿತು?_ ನಿನ್ನ ಬೋಧೆಯಿಂದಾಗಿ ಅವರು ಇನ್ನೂ ಭಕ್ತರಾದ೦ತೆ ಕಾಣುತ್ತಿಲ್ಲ" ಎನ್ನುತ್ತಾರೆ.
ಸಿದ್ದಯ್ಯ ಸ್ವಾಮಿ "ಗುರುವೇ, ತಪ್ಪು ಅವರದಲ್ಲ, ನನ್ನನ್ನು ನೀವು ದೊಡ್ಡ ಮನಸ್ಸು ಮಾಡಿ ಕ್ಷಮಿಸಿ." ಎಂದು ಕ್ಷಮೆ ಕೇಳುತ್ತಾರೆ. ತೋಪಿನ ದೊಡ್ಡಮ್ಮ ತಾಯಿ ಪ್ರಸಾದ ಹಾಳಾಗಬಾರದೆಂದು ಆದಿ ಪರ೦ಜ್ಯೋತಿಗೆ ನಮಸ್ಕಾರಮಾಡಿ, ಎಲ್ಲವನ್ನು ಒಂದೆಡೆ ಸೇರಿಸಿ, ಸ್ವೀಕಾರ ಮಾಡಿ ಕೆರೆಗೆಹೋಗಿ ಕೈತೊಳೆದು ಬಂದು ಮತ್ತೆ ಸ್ವಾಮಿ ಆದಿರೂಪನಿಗೆ ನಮಸ್ಕರಿಸಿ, "ಅಪ್ಪಣೆ ಪಾಲಿಸು ತಂದೆ, ಮಾರಿ ಹಿಂಡನ್ನು ಪಾಂಚಾಳ ಗೇರಿಗೆ ಅಟ್ಟಿ ಅವರಿಗೆ ತಕ್ಕ ಬುದ್ಧಿ ಕಲಿಸುತ್ತೇನೆ." ಎನ್ನುತ್ತಾರೆ.
ಆದಿಮೂರ್ತಿ ನಕ್ಕು ಸುಮ್ಮನಾಗುತ್ತಾರೆ, ಸಿದ್ದಯ್ಯ ಮುತ್ತಿನ ಕಮಂಡಲವನ್ನು ತರುವ ನೆಪಹೇಳಿ ದುರ್ಗಿಯರ ಹಿಂಡನ್ನೇ ಕರೆದು ಕೇರಿಯತ್ತ ಕರೆದುಕೊಂಡು ಹೋಗುತ್ತಾ "ಅವರೂಪದ ಪ್ರಸಾದ ಸ್ವೀಕರಿಸದೆ ಹೋದ ಇವರಿಗೆ ಹುಣ್ಣಿಲ್ಲದ ಗಾಯ ಮಾಡಿ, ನೋವಿಲ್ಲದ ಬಂಧನಕೊಡಿ." ಎನ್ನುತ್ತಾರೆ.
ಏಳು ದುರ್ಗೆಯರೂ ಪಾಂಚಾಳಗೇರಿ ನುಗ್ಗಿ ಆನಂದಿಸುತ್ತಾ ಹೋಗುತ್ತಾರೆ. ಪಾಂಚಾಳರಿಗೆ ಹುಣ್ಣಿಲ್ಲದ ಗಾಯ ನೋವಿಲ್ಲದ ಬಂಧನ ಸಹಿಸಲಾಗದೇ "ಅಯ್ಯೋ ತಪ್ಪು ಮಾಡಿವೆವು ಮತ್ತೆ!_ ಸತ್ತರೂ ಅಲ್ಲೇ ಬದುಕಿದರೂ ಅಲ್ಲೇ ಇರುತ್ತೇವೆ ಇನ್ನು ಮುಂದೆ" ಎಂದುಕೊಂಡು ಮತ್ತೆ ಆದಿ ಬೊಪ್ಪಣಪುರಕ್ಕೆ ಬರುತ್ತಾರೆ, ಬಂದು ಆದಿರೂಪರಿಗೆ ದೀರ್ಘ ಪ್ರಣಾಮಮಾಡಿ. "ತಪ್ಪನ್ನು ಮನ್ನಿಸಿ ಕೃಪೆಮಾಡಿ ಕಾಪಾಡಿ ಎನ್ನುತ್ತಾರೆ. ಆದಿ ಮೂಲರು ಮತ್ತೆ ನಕ್ಕು ಹಾಗಾದರೆ" ಮತ್ತೆ ಅಡುಗೆ ಮಾಡಿಡುತ್ತೇವೆ, ಊಟಮಾಡಿ ಎನ್ನುತ್ತಾರೆ ಪಾಂಚಾಳದವರೆಲ್ಲ ತಮ್ಮ ನೀಲಗಾರರೊಡನೆ ಒಪ್ಪುತ್ತಾರೆ.
ಯಳಂದೂರು ಲಿಂಗೇಗೌಡನಿಗೆ ಮತ್ತೆ ಅವಸರದ ಕರೆ ಹೋಗುತ್ತದೆ. ಆರು ಕ೦ಡುಗ ಮುಗ್ಗಲು ಹುರುಳಿ ಹನ್ನೆರಡು ಕಂಡುಗ ಹುಚಾರ್ಕವಟ್ಟೆ ಮೇಲಣ ಮುದಿಯಾಲದ ಸೊಪ್ಪನ್ನು ತರಿಸುತ್ತಾರೆ, ಎರಡು ಅಡಿಗೆ ಮೆಣಸಿನಕಾಯಿ ತರಿಸಿ ಹುಬ್ಬಾರ್ಕದ ಹಿಟ್ಟನ್ನು ಮಾಡಿಸೀ ಮುದ್ದಾಲೆ ಸೊಪ್ಪಿನ ಮುಗ್ಗಲ ಹುರುರ್ಲಿಯ ಸಾರನ್ನು ಮಾಡಿಸುತ್ತಾರೆ.
ಪಾಂಚಾಳದವರು ಸ್ನಾನ ಮಡಿ ಮಾಡಿಕೊಂಡು ಏಳು ಪ೦ಙಯಾಗಿ ಊಟಕ್ಕೆ ಕೂರುತ್ತಾರೆ. ಹಿರಿಯ ಶರಣರೇ ಊಟಕ್ಕೆ ಬಡಿಸುತ್ತಾರೆ. ಪ್ರತಿಯೊಬ್ಬನ ಎಲೆಗೂ ಎರಡು ಬೇಲದ ಕಾಯಿ ಗಾತ್ರಕ್ಕೆ ಆರ್ಕದ ಹಿಟ್ಟನ್ನು ಬಡಿಸುವಂತೆ ಸ್ವಾಮಿ ಪ್ರಭುದೇವರು ಆಜ್ಞೆ ಮಾಡುತ್ತಾರೆ. ಮುದಾಲೆ ಸೊಪ್ಪು ಮುಗ್ಗಲು ಹುರುಳಿಯ ಉಪ್ಪೆಸರನ್ನೇ ಎಲ್ಲರಿಗೂ ಎರಡೆರಡು ಮೆಣಸಿನಕಾಯಿನ ಜೊತೆಯಲ್ಲಿ ಬಡಿಸುವಂತೆ ಆಜ್ಞೆಯಿತ್ತರು. ಧೂಪ ಹಾಕಿ, ಪ೦ಙಗೆ ಕೈ ಮುಗಿದು "ಊಟಮಾಡಿ ನನ್ನ ಪ್ರೀತಿಯ ಕಂದಮ್ಮಗಳೇ; ಎಂದು ಶತೆಯ ಬಾಗಿಲಿಗೆ ಒರಗಿ ಸ್ವಾಮಿ ನಿಲ್ಲುತ್ತಾರೆ. ಪಾ೦ಚಾಳದವರು ಊಟಮಾಡಿ ಎಷ್ಟೋ ದಿನಗಳಾಗಿ ಹೋಗಿವೆ. "ನಮ್ಮ ಅಪ್ಪಂದಿರ ಕಾಲದಲ್ಲೂ ನಾವು ಇ೦ತಹ ಊಟ ಕಂಡು ಅರಿಯವ್ವ" ಎಂದು ಅವರುಗಳು ಹೇಳುತ್ತಾ ಹಸಿದ ಬರದಲ್ಲಿ ತಿನ್ನುವಂತೆ ಆ ಊಟವನ್ನು ತಿನ್ನುತ್ತಾರೆ, ನಂತರ ಕೈ ತೊಳೆದು ಅಗ್ಗಣಿಯನ್ನು ಪ್ರವೇಶಿಸಿ, ಸ್ವಾಮಿ ಪ್ರಭುದೇವರ ಕಾಲುಗಳಿಗೆ ಸಾಷ್ಟಾಂಗ ಎರಗುತ್ತಾರೆ. ಅಹಂಕಾರವನ್ನು ಒಪ್ಪಿಸಿಕೊಳ್ಳಿ ಸ್ವಾಮಿ, ನಮ್ಮ ಬರುದ೦ದಿ ಹಿರಿಮೆಗಳನ್ನೆಲ್ಲಾ ನಿಮ್ಮ ಪಾದಗಳ ತಲದಲ್ಲಿ ಸಮರ್ಪಿಸಿದ್ದೇವೆ ನಮಗೆ ನಿಮ್ಮ ಆಶೀರ್ವಾದದ ಶ್ರೀರಕ್ಷೆ ಬೇಕು' ಎನ್ನುತ್ತಾರೆ. ಆಗ ಗುರು "ಓ ಪಾಂಚಾಳದವರೇ, ಸಿದ್ದಪ್ಪಾಜಿಯ ಹೊಟ್ಟೆ ಉರಿಸಿದ ತಪ್ಪಿಗೆ ನಾವು ಪವಡಿಸುವುದಕ್ಕೆ೦ದೇ ಹನ್ನೆರಡಾಳುದ್ದ ಜಲದೇವಿ ತೆಗೆಯಿರಿ" ಎಂದು ಹೇಳುತ್ತಾರೆ.
ಅವರ ಮಾತಿಗೆ ಪ್ರಕಾರ ಒಂದು ಶುಭ ಸೋಮವಾರ ಗುದ್ದಲಿ ಪೂಜೆಮಾಡಿ, ಹನ್ನೆರಡಾಳುದ್ದದ ಜಲಬಾವಿಯನ್ನು ಪಾಂಚಾಳದವರು ತೆಗೆಯುತ್ತಾರೆ. ನಾಲ್ಕು ನಂದಾದೀವಿಗೆಯ ಗೂಡನ್ನು ತೆಗೆಯುತ್ತಾರೆ. ಲೀಲೆದ್ದು ಬಂದು ಸ್ವಾಮಿಯ ಸಿರಿ ಪಾದಕ್ಕೆ ಅಡ್ಡಬಿದ್ದು ಆಶೀರ್ವಾದ ಮಾಡಿ, ಧರ್ಮಗುರುವೇ," ಎನ್ನುತ್ತಾರೆ.
"ಏಯ್ ಪಾಂಚಾಳಿಗರೇ, ನಿಮಗೇನು ಭಾಗ್ಯಬೇಕು?
ನೀವು ಸಾವಿರ ತಂದರೂ ಸಂಜೆಗೆ ಲಯವಾಗಿ ಹೋಗಲಿ, ಹಗಲಿಗೆ ಇದ್ದರೆ ರಾತ್ರಿಗೆ ಇಲ್ಲವಾಗಲಿ, ರಾತ್ರಿಗೆ ಇದ್ದರೆ ಹಗಲಿಗೆ ಮುಗಿಯಲಯ್ಯ, ನಿಮ್ಮ ಹೆಂಡಂದಿರು ರೈತರ ಮನೆಮನೆಗೆ ಹೋಗಿ ಭಿಕ್ಷೆ ಬೇಡಲಿ. ಊರಿಗೊಂದು ಬಿಕ್ಕಲಾಗಿ ಸೀಮೆಸೀಮೆ ಮೇಲೆ ಜೀವನ ಮಾಡಿ ಹೋಗಿ_' ಎಂದು ಶ'ಪಿಸಿ ಬಿಡುತ್ತಾರೆ. ಅದರಂತೆಯೇ ಶಾಪ ಸ್ವೀಕರಿಸಿದ ಪಾಂಚಾಳದವರು ಊರಿಗೊಂದು ಒಕ್ಕಲಾಗಿ ಪಂಚೆ ಹರಡಿ ಹೋಗುತ್ತಾರೆ.
ಹನ್ನೆರಡಾಳುದ್ದ ಜಲಬಾವಿಗೆ ಕಂಡುಗ ಸಾಂಬ್ರಾಣಿ ಹಚ್ಚಿ "ಓಂ ನಮೋ ಹರಿಹರ" ಎಂದು ಶಿವಪೂಜೆ ಮಾಡುತ್ತಾರೆ. ಸ್ವಾಮಿ ಪ್ರಭು ದೇವರು ಗುರುಭೊಧೆ ಗುರುಮಂತ್ರವನ್ನು ವಿತರಣ ಮಾಡುತ್ತಾರೆ. ಚಿನ್ನದ ತೊಟ್ಟಿಲನ್ನು ಬೆಳ್ಳಿಯ ಸರಪಳಿಗಳಿಂದ ಕಟ್ಟಿ ಹನ್ನೆರಡಾಳುದ್ದದ ಬಾವಿಗೆ ಇಳಿಬಿಡುತ್ತಾ, ನಾಲ್ಕು ಗೂಡಲ್ಲೂ ದೀಪ ಹಚ್ಚಿ ಇಡುತ್ತಾರೆ.
ಎಲ್ಲ ನೆರೆದ ಭಕ್ತರೂ ಉಘೆ ಉಘೇ ಎಂದು ಘೋಹಮಾಡುತ್ತಾರೆ.
ಮುಂದುವರಿಯುತ್ತದೆ ..
ಓದಿದ ಗುರುತಾಗಿ ಒಂದು ಲೈಕ್ ಮತ್ತು ಶೇರ್ ಮಾಡಿ.
ನಿಮ್ಮ ಪ್ರೋತ್ಸಾಹವಿರಲಿ.. ಧನ್ಯವಾದಗಳು 🙏
👇ಮುಂದಿನ ಸಂಚಿಕೆಯಲ್ಲಿ (೨ ದಿನಗಳಲ್ಲಿ)
24. ಶ್ರೀ ರಾಚಪ್ಪಾಜಿಗೆ ಕಲ್ಯಾಣವನ್ನು ಅಪ್ಪಣೆ ಕೊಡಿಸುತ್ತಾರೆ ಮತ್ತು ಫಲಾರದಯ್ಯನವರಿಗೆ ಸ್ವಾಮಿ ಆದಿರೂಪಿ ಕೊಡಿಸಿದ ಅಪ್ಪಣೆ.
👈 ಹಿಂದಿನ ಸಂಚಿಕೆ:
22. ಆದಿಬೀದಿಯಲ್ಲಿ ಹೆಣಗಳು, ಆಕಾಶದ ತುಂಬ ಹದ್ದುಗಳು ರಾಶಿಯಲ್ಲಿ ಪಾಂಚಾಳರ ಕೇರಿಗಳು.
ನಮ್ಮ ಬ್ಲಾಗ್ ನಲ್ಲಿ ಓದಲು:
👉 https://goo.gl/cyf2nd
ಹಿಂದಿನ ಸಂಚಿಕೆ ನಮ್ಮ ವೆಬ್ಸೈಟ್ ನಲ್ಲಿ ಓದಲು:
👉 https://goo.gl/eD2fTF
ಹಿಂದಿನ ಸಂಚಿಕೆ ನಮ್ಮ ಫೇಸ್ಬುಕ್ ಪೇಜಲ್ಲಿ ಓದಲು:
👉 https://goo.gl/M1TVhL
<-------------------------->
Website: Siddappaji.com
Email: Lordsiddappaji@gmail.com
Find us: Siddappaji Lord (Admin)
Www.facebook.com/lord.siddappaji
Www.facebook.com/sri.manteswamy
Also on Twitter, Instagram & Google+
ಸಂಪೂರ್ಣ ಕಥೆ ತಿಳಿಯುವ ಆಸಕ್ತರು 👇 ಲಿಂಕ್ ಓಪನ್ ಮಾಡಿ
📓Read: https://goo.gl/aBBDN1 https://goo.gl/QYVt7o
🔊listen: https://goo.gl/hXvMdD https://goo.gl/BuXToJ https://goo.gl/e4hWAh
No comments:
Post a Comment