ಶ್ರೀ ಧರೆಗೆ ದೊಡ್ಡವರ ಚರಿತೆ (ಸಂಚಿಕೆ 22)

22. ಆದಿಬೀದಿಯಲ್ಲಿ ಹೆಣಗಳು, ಆಕಾಶದ ತುಂಬ ಹದ್ದುಗಳು ರಾಶಿಯಲ್ಲಿ ಪಾಂಚಾಳರ ಕೇರಿಗಳು.

ಏಳು ಜನ ದುರ್ಗಿಯರೂ ಪಾಂಚಾಳರ ಕೇರಿಗಳಿಗೆ ನುಗ್ಗಿ ನಿದ್ದೆಯಲ್ಲಿ ಕಣ್ಣುಜ್ಜಿಕೊಳ್ಳುದವರನ್ನು, ಕನಸ ಕಾಣುವವರನ್ನೂ, ಎಂದು ರಾಗಿ ಬಿಡಿಸಲು ಬಂದವರನ್ನು, ಸೌದೆ ಬೇಕೆಂದು ತರ ಹೊರಟವರನ್ನು ಬೀದಿ ಬೀದಿಗಳಲ್ಲಿ ಮನೆ ಮನೆಗಳಲ್ಲಿ ಹುಡುಕಿ ಭೇಟೆಯಾಡುತ್ತಾರೆ. ಇವರೊಡನೆ ಸೇರಿದ ಹಲಗೂರಿನ ಕುರುಡು ಮಾರಿ ಮೂಲೆ ಮೂಲೆ ತಡಕುತ್ತಾಳೆ ಎಲ್ಲಿ ನೋಡಿದರೆ ಅಲ್ಲಿ ಜನ ವಾಂತಿ ಬೇದಿಯೇ ಮೊದಲಾದ ತರತರಹದ ರೋಗಗಳಿಗೆ ಸಿಕ್ಕು ಸತ್ತು ಬೀಳುತ್ತಾ ಇರುತ್ತಾರೆ. ಏಳು ಮಂದಿ ದಣಿಗಳಿಗೂ ಹೆಣಗಳನ್ನು ಹೊತ್ತು ಹೇಗಲೆಲ್ಲಾ ಊದಿಕೊಳ್ಳುತ್ತದೆ. ಹೊಲಗಳೆಲ್ಲಾ ಹೆಣದ ರಾಶಿಯಿಂದ ತುಂಬಿ ಹೋಗುತ್ತದೆ. ಸೋಮವಾರ ಊರಿಗೆ ಮಾರಿ ಬಂದು ಆಕಾಶದಲ್ಲಿ ಹದ್ದು ಕಾಗೆ ಹಾರಾಡುತ್ತಿವೆ. ಏಳು ಜನ ಧಣಿಗಳಿಗೂ ತಾವು ಮಾಡಿದ ತಪ್ಪು ಅರಿವಾಗುತ್ತಿಲ್ಲವಾಗಿ, ಅವರುಗಳು ಕುಲದೇವರಿಗೆ ಕಾಣಿಕೆಯನ್ನಾದರೂ ಕಟ್ಟೋಣವೆಂದು ಬಂಗಾರದ ಪೆಟ್ಟಿಗೆಗಳನ್ನು ಹೊರ ತೆಗೆದರೆ, ಬಂಗಾರವೆಲ್ಲಾ ಗೆಜ್ಜೆಕಲ್ಲುಗಳಾಗಿವೆ ಏಳು ಕೊಪ್ಪರಿಗೆಯ ಹೊನ್ನು ಬೆಣಚುಕಲ್ಲಾಗಿವೆ. ಮುತ್ತುರತ್ನ ವಜ್ರ ವೈಡೂರ್ಯಗಳೆಲ್ಲಾ ನೀರಿನ ಪಾಲಾಗಿವೆ. ಊಟಮಾಡಲು ಅನ್ನವಿಲ್ಲ, ಉಡಲು ಬಟ್ಟೆಯಿಲ್ಲ; ನಿದ್ದೆ ಮಾಡುವುದಂತೂ ಸಾಧ್ಯವೇ ಇಲ್ಲ, ಕಡೆಗೆ ಸಿದ್ದಪ್ಪಾಜಿ ಏಳು ಜನ ದಣಿಗಳ ಹೆಂಡಿರ ಮೈಮೇಲಿನ ಚಿನ್ನವನ್ನು ಹಾಗೆಯೇ ಬಿಟ್ಟುಕೊಟ್ಟಿರುತ್ತಾರೆ. ಅದರ ನೆನಪಾದ ಏಳು ಜನ ಧಣಿಗಳು ಮನೆಗೆ ಬಂದು ಹೆಂಡತಿಯರ ಒಡವೆ ಪಡೆದು, ಊರ ಹೊರಗಲ ತೊರೆಗೆ ಬಂದು ನಡುಮಟ್ಟ ನೀರಲ್ಲಿ ಮುಳುಗಿ, ಸ್ನಾನಮಾಡಿ ಮೊತ್ತಕಾಣಿಕೆಯನ್ನು ಕಟ್ಟುತ್ತಾರೆ.

  ಧರೆಗೆ ದೊಡ್ಡವರು ನೀಡಿದ ಬೇಗ ಹರಕೆ ಕಟ್ಟಿದ್ದರಿಂದ ಮತ್ತಷ್ಟು ಹೆಚ್ಚುತ್ತದೆ, ಕಾರಣ, ಅವರೇ ಬಂದು ಶಾಂತಿ ಶಮನ ನೀಡಬೇಕು ಪರಮ ಪರಂಜ್ಯೋತಿಗಳು ನೀಡಿದ್ದನ್ನು ಅವರೇ ಉಣಬೇಕು!
  ಸ್ವಾಮಿ ಸಿದ್ದಪ್ಪಾಜಿ ದುರ್ಗಿಯರನ್ನು ಹಿಡಿದು ನಾಗಬೆತ್ತದಿ೦ದ ಮುಟ್ಟಿ ಹಸ ಮಕ್ಕಳಾಗಿ ಮಾಡಿ. ತಮ್ಮ ದಂಡೇಯ ಒಳಗೆ ಆಡಸತೊಡಗುತ್ತಾರೆ.
  ಧರೆಗೆ ದೊಡ್ಡವರಿಗೆ ತಾವೇ ಪಾಂಚಾಳದವರಲ್ಲಿಗೆ ಹೋಗಿ ಶಾಸ್ತ್ರ ಹೇಳಿ, ಅವರ ಧಗೆಯನ್ನು ಶಮನ ಮಾಡಬೇಕೆಂದು ಅನ್ನಿಸಿ ಹಲಗೂರ ಪಾಂಚಾರಗೇರಿಯ ಸುತ್ತ ಆರೇಳು ಮೈಲಿ ಎಲ್ಲಿಯೂ ಶಾಸ್ತ್ರ ಹೇಳುವವರು ಸಿಗದ ಹಾಗೆ ಅವರಿಗೆ ಹುಚ್ಚು ಬೆಪ್ಪು, ಹಿಡಿಸಿ, ತಾವೇ ನಮ್ಮ ಧರೆಯ ಹಿರಿಯ ಗುರುಗಳು ತಾವೇ ಕಣಿ ಹೇಳುವ ವೇಷ ಧರಿಸುತ್ತಾ, ಕಾವಿಯ ದೇವಾಂಗವನ್ನು ಸೀರೆಯಾಗೆ ಉಟ್ಟು, ಜಡೆಯನ್ನು ಬಿಚ್ಚಿದ ಮ೦ಡೆಯಾಗಿ, ಧರಿಸಿ, ರುದ್ರಾಕ್ಷಿೆಯನ್ನು ಗುಂಡಾಗಿ ಮಾಡಿಕೊಂಡು ಐದನೇ ರುದ್ರಾಕ್ಷಿಯಲ್ಲಿ ಹರನ ಹಾರ ಮಾಡಿಕೊಂಡು. ಹಕ್ಕಿಗೂಡಲ್ಲಿ ಕೊರವಂಜಿಯ ಗೂಡೆ ಮಾಡಿಕೊಂಡು, ಕಾಡುಗಲ್ಲಿ ಅಳುವ ಕೂಸನ್ನಾಗಿ ಮಾಡಿಕೊಂಡು ಪಾಂಚಾಳ ಕೇರಿಗಳಲ್ಲನ್ನೇ ಅಳುವ ಕೂಸನ್ನಾಗಿ ಮಾಡಿಕೊಂಡು ಪಾಂಚಾಳ ಕೇರಿಗಳಲ್ಲಿ ಕಣಿಯನ್ನು ಹೇಳುವುದಾಗಿ ಸಾರುತ್ತಾ ಬರುತ್ತಾರೆ.

ಪಾಂಚಾಳ ಧಣಿಗಳಿಗೆ ಜೀವ ಬಂದಂತಾಗಿ ಓಡೋಡಿ ಬಂದು, ಏನು ಕಣಿಯಮ್ಮ, ಕಂಡ ಕನಸ ಹೇಳುವೆ ಏನೇ, ಉಂಡ ಊಟವ ಏಳುವೆ ಏನೇ ಹಾಗಾದರೆ ನಿನ್ನ ಹಸಗೆ ಏನು ಬೇಕೇ?" ಎಂದು ಕೇಳುತ್ತಾರೆ ಸ್ವಾಮಿ ಅವರೆಲ್ಲರ ಮಡದಿಯರ ಮೈಮೇಲಿನ ಒಡವೆಗಳನ್ನು ಕೇಳಿದ್ದೆ ತಡವೆನ್ನುವ೦ತೆ ಆ ಏಳುಾ ಜನಧಣಿಗಳು ಒಡವೆಗಳನ್ನುಾ ತಂದು ಸ್ವಾಮಿಯ ಮುಂದೆ ಇಡುತ್ತಾರೆ. ಸ್ವಾಮಿ ಮನದಲ್ಲೆ ನಕ್ಕು ಚಿನ್ನದ ತೊಟ್ಟಿಲಿಗೆ, ಬಳ್ಳಿಯ ಲ್ಯಾಕಿಗೆ ಎಂದು ಕೊಂಡು ಅಳೆದು ನೋಡಿದರೆ ಎಳು ಕೊಳಗ ಆಗುತ್ತದೆ.

  ಆಗಲೂ ಧಣಿಗಳು ಕಣಿಯಮ್ಮನಿಗೆ "ನೀನು ಸರಿಯಾಗಿ ಕಣಿಯನ್ನು ಹೇಳದೇ ಹೋದರೆ ನಿನ್ನ ಎದೆಯ ಮೇಲೆ ಒದೆಯುತ್ತೇವೆ" ಎನ್ನುತ್ತಾರೆ. ರೇಗಿದ ಸ್ವಾಮಿ,"ನಿಮ್ಮ ಅಹಂಕಾರ ಮುರಿದಿಲ್ಲವೇ ಇನ್ನೂ_ಊರಿಗೆ ಊರೇ ಸತ್ತು ನೀವು ಮಾತ್ರ ಉಳಿದಿದ್ದರೂ." ಎಂದಕೂಡಲೇ ಧಣಿಗಳು ಏಳು ಜನವೂ ಕಣಿಯಮ್ಮನ ಕಾಲಿಗೆ ಬೀಳುತ್ತಾರೇ. ಆಗ ಸ್ವಾಮಿ ಮೂರು ತಿಂಗಳ ಹಿಂದೆ ನಿಮ್ಮಲ್ಲಿಗೆ ಸಿದ್ದಯ್ಯ ಬಂದು, ಧರೆಗೆ ದೊಡ್ಡವರಿಗೆ ಬಾವಿ ತೆಗೆಯಲು ಒಂಬತ್ತು ನಗಗಳನ್ನು ಭಿಕ್ಷೆಬೇಡಿದರೂ ನೀವು ಕೊಡದೇ ಅವನಿಂದ ಪವಾಡಗಳನ್ನು ಮಾತ್ರ ಮಾಡಿಸಿ. ಅವನನ್ನು ಕತ್ತಿನ ಮೇಲೆ ಝಾಡಿಸಿ ಊರಿಂದ ಹೊರಗೆ ಹಾಕಿದ್ದರಿಂದ ಈ ಬೇನೆ ಬಂದಿದೆ. ಅದನ್ನು ಪರಿಹರಿಸಬಲ್ಲವರು ಅವರು ಮಾತ್ರ. ನೀವು ಬೇಗ ಹೋಗಿ ಅವರನ್ನೇ ಹಿಡಿದು ಕ್ಷಮೆ ಕೇಳಿ ಹೋಗಿ ಎಂದು ಬಿಡುತ್ತಾರೆ. "ಅವರು ಎಲ್ಲಿದ್ದಾರೆಂದು ನಮಗೆ ತಿಳಿಯದು, ಕಣಿಯಮ್ಮ ಅವರ ಇರುವದನ್ನು ಹೇಳಿದೇವಿ" ಎಂದು ಧಣಿಗಳು ಏಳುಜನ ಅಂಗಲಾಚುತ್ತಾರೆ. ಸ್ವಾಮಿ ಸಿದ್ದಯ್ಯ ಇರುವ ಸ್ಥಳವನ್ನು ಹೇಳುತ್ತಾರೆ. ಸಿದ್ದಯ್ಯ ಈಗ ಹುಲಿ, ಕರಡಿಗಳೊಡನೆ ಸರಸವಾಡುತ್ತಲಿದ್ದ ಏಳು ಧಣಿಗಳನ್ನು ಕಂಡು ಅವರಿಗೆ ಬೈಯ್ದು "ನೀವು ಧರೆಗೆ ದೊಡ್ಡವರ ಪರವಾಗಿ ನಾವು ಬಂದರೆ ನೀವು ಹೀಗೆ ಮಾಡುವುದೇ?"_ಎನ್ನುತ್ತಾರೆ. ಆಗ ಏಳು ಧಣಿಗಳು "ಗೊತ್ತಿಲ್ಲದೇ ತಪ್ಪಾಯಿತು ಸ್ವಾಮಿ, ಇನ್ನು ಮುಂದೆ ನಾವು ಏಳುನೂರಐವತ್ತು ಒಕ್ಕಲೂ ನಿಮ್ಮ ಶಿಶು ಮಕ್ಕಳಾಗಿ ಸೇವೆ ಮಾಡುತ್ತೇವೆ, ಹರಸಿ, ಆಶೀರ್ವದಿಸಿ" ಎಂದು ಬೇಡಿ, ಉದ್ದಂಡ ನಮಸ್ಕಾರ ಮಾಡುತ್ತಾರೆ. ಸ್ವಾಮಿ ಮಂಟೇದ ಅಯ್ಯನ ಆಶೀರ್ವಾದ ನೆನೆದ ಸಿದ್ದಯ್ಯ ಅವರನ್ನು ಕ್ಷಮಿಸಿ, ಅವರಿಗೆ ಅವರ ದುರ್ಗಿದೇವತೆಯರನ್ನು ತೋರುತ್ತಾರೆ "ಧರೆಗೆ ಹಿರಿಯರೇ ನಮ್ಮ ಸ್ವಾಮಿಯಾದ ಮೇಲೆ ಈ ದುರ್ಗಿಯರ ಹಂಗು ನಮಗಿಲ್ಲ"__ ಎಂದು ಪಾಂಚಾಳದ ಏಳು ಧಣಿಗಳು ಹೇಳಿ, ಸ್ವಾಮಿಗೆ ಮತ್ತೆ ನಮಸ್ಕರಿಸುತ್ತಾರೆ.
  ಸಿದ್ದಯ್ಯಸ್ವಾಮಿ ದುರ್ಗಿಯರಿಂದ ಇನ್ನೂ ಕೆಲಸವಿರುವುದನ್ನು ಗುರ್ತಿಸಿ ಅವರನ್ನು ಕುಂದೂರು ಬೆಟ್ಟಕ್ಕೆ ಹಿಂದಿರುಗಿಸಿಬಿಡುತ್ತಾರೆ.

ಮುಂದುವರಿಯುತ್ತದೆ ..
ಓದಿದ ಗುರುತಾಗಿ ಒಂದು ಲೈಕ್ ಮತ್ತು ಶೇರ್ ಮಾಡಿ.
ನಿಮ್ಮ ಪ್ರೋತ್ಸಾಹವಿರಲಿ.. ಧನ್ಯವಾದಗಳು 🙏

👇ಮುಂದಿನ ಸಂಚಿಕೆಯಲ್ಲಿ (೨ ದಿನಗಳಲ್ಲಿ)
23. ಆದಿ ಬೊಪ್ಪಗೊಂಡನ ಪುರದಲ್ಲಿ ಪಾಂಚಾಳದವರು. 

👈 ಹಿಂದಿನ ಸಂಚಿಕೆ:
21. ಏಳು ದುರ್ಗಿಯರು ಪಾಂಚಾಳರ ಕೇರಿಯ ಸುಡುತ್ತಾರೆ.
ನಮ್ಮ ಬ್ಲಾಗ್ ನಲ್ಲಿ ಓದಲು:
👉 https://goo.gl/dm38nX
ಹಿಂದಿನ ಸಂಚಿಕೆ ನಮ್ಮ ವೆಬ್ಸೈಟ್ ನಲ್ಲಿ ಓದಲು:
👉 https://goo.gl/gfuWkk
ಹಿಂದಿನ ಸಂಚಿಕೆ ನಮ್ಮ ಫೇಸ್ಬುಕ್ ಪೇಜಲ್ಲಿ ಓದಲು:
👉 https://goo.gl/XQJSnM
<-------------------------->
Website: Siddappaji.com
Email: Lordsiddappaji@gmail.com

Find us: Siddappaji Lord (Admin)
Www.facebook.com/lord.siddappaji
Www.facebook.com/sri.manteswamy
Also on Twitter, Instagram & Google+

ಸಂಪೂರ್ಣ ಕಥೆ ತಿಳಿಯುವ ಆಸಕ್ತರು 👇 ಲಿಂಕ್ ಓಪನ್ ಮಾಡಿ
📓Read: https://goo.gl/aBBDN1 https://goo.gl/QYVt7o
🔊listen: https://goo.gl/hXvMdD https://goo.gl/BuXToJ https://goo.gl/e4hWAh 

No comments:

Post a Comment