ಶ್ರೀ ಧರೆಗೆ ದೊಡ್ಡವರ ಚರಿತೆ (ಸಂಚಿಕೆ 21)

21. ಏಳು ದುರ್ಗಿಯರು ಪಾಂಚಾಳರ ಕೇರಿಯ ಸುಡುತ್ತಾರೆ.

ಬೆಟ್ಟದ ಬುಡದಲ್ಲಿ ನಿಂತು ಸ್ವಾಮಿ ಕರೆದದಕ್ಕೆ ತಡವಾಗಿ, ಮೈಮೇಲೆ ಪ್ರಜ್ಞೆತಪ್ಪಿ ತೂರಾಡುವ, ಬಿಟ್ಟಮಂಡೆ ಬಿಟ್ಟಂತೆಯೇ ಇರುವ ಚಂಡಿ ಚಾಮುಂಡಿ ತನ್ನ ಆರು ಜನ ತಂಗಿಯರಾದ ಉತ್ತನಳ್ಳಿ ಉರುಕಾರೆ, ಕೊತ್ತತ್ತಿ ಜ್ವಾಲವನಮ್ಮ, ಕೋಡಂಬಳ್ಳಿ ಬಿಸಿಲಿಮಾರಿ, ಕಬ್ಬಾಳ ಕರಿಯ ದುರ್ಗಿ, ಹೆಚ್ಚೆಟ್ಟಿದ ಹಿರಿಯಮಾರಿ, ಸಾಸಲ ಹೊನ್ನಾದೇವಿ ಮತ್ತು ಮೂಗೂರಿನ ತಿಬ್ಬಾದೇವಿಯವರನ್ನು ಕರೆದುಕೊಂಡು ಏಳುವುದು ಬೀಳುವುದನ್ನೂ ಕಾಣದೇ ಓಡೋಡಿ ಬರುತ್ತಾಳೆ, ಬಂದು, ಸ್ವಾಮಿ ಸಿದ್ದಯ್ಯನ ಪಾದಗಳಿಗೆ ಎರಗಿ "ಅಪ್ಪಣೆಯಾಗಲಿ" ಎನ್ನುತ್ತಾಳೆ. ಸಿದ್ದಯ್ಯ ಆಗ ಬೊಪ್ಪೆಗೊ೦ಡಪುರದ ಮಠದ ಮಹಾ ಪರಂಜ್ಯೋತಿಯ ಕರೆಯನ್ನು ತಿಳಿಸಿ ಆಕೆಯನ್ನೂ ಆಕೆಯ ಸೋದರಿಯರೊಡನೆ ಕರೆದು ತರುತ್ತಾರೆ.
  ರಾಜಬೊಪ್ಪನ ಪುರಕ್ಕೆ ಬಂದ ದುರ್ಗಿಯರು ಮಂಟೇದಸ್ವಾಮಿಗೆ ನಮಸ್ಕರಿಸಿ ನಮ್ಮ ಪಾಲಿನ ಕರ್ತವ್ಯವನ್ನು "ಹೇಳು ಸ್ವಾಮಿ" ಎನ್ನುತ್ತಾರೆ. ಸ್ವಾಮಿ ಕಾರ್ಯವನ್ನು ನೇಮಿಸುತ್ತಿದ್ದಂತೆಯೇ ಛಲದ ಚಾಮುಂಡಿ" ನೀನೂ ಸರಿಯಾಗಿಯೇ ಹೇಳಿದೇ_ಪಾಂಚಾಳಗೇರಿಯ ಮಕ್ಕಳು ನನ್ನ ಶಿಶು ಮಕ್ಕಳು, ನನ್ನ ಒಕ್ಕಲಿನವರು, ನನಗಾಗಿ ನಡೆದುಕೊಳ್ಳುತ್ತಾರೆ. ನನ್ನ ಹೆಸರನ್ನು ತಮ್ಮ ಮಕ್ಕಳಿಗೆ ಇಡುತ್ತಾರೆ. ವರ್ಷಕ್ಕೆ ಒಮ್ಮೆ ಜಾತ್ರೆಮಾಡಿ, ನನ್ನ ನೆನೆದು ನನಗಾಗಿ ತಮ್ಮದೆಲ್ಲವನ್ನು ಅರ್ಪಿಸುತ್ತಾರೆ. ನಾನು ಹೇಗೆ ತಾನೆ ನನ್ನ ಮನೆಗೆ ನಾನೇ ಬೆಂಕಿ ಹಚ್ಚಲಿ?_ ಬೇರೆ ಊರನ್ನು ತೋರಿಸಿ, ಕ್ಷಣದಲ್ಲಿ ಉರಿನೆತ್ತಿಯಲ್ಲಿ ಹದ್ದು ಕಾಗೆಗಳು ಕಾಣಿಸುತ್ತೇನೆ"_ಎನ್ನುತ್ತಾಳೆ.

ಮಂಟೇದಸ್ವಾಮಿಗೆ ಭಗಭಗನೆ ಕೋಪ ಬರುತ್ತದೆ, ತಮ್ಮ ಜೋಳಿಗೆಯನ್ನು ತೆಗೆದು ಉರಸಂಗಿ ಕೊರಡ ತೆಗೆದು ಅವಳ ಮೈಮೇಲೆ ಆಡಿಸುತ್ತಾರೆ, ದೇವಿ ಚಾಮುಂಡಿಯ ಮೈಚರ್ಮ ಸುಲಿದಾಡಿ, ಕರುಳೆಲ್ಲಾ ಹೊರಗಾಡಿ, ಅವಳು ಮೂರ್ಛೆಹೋಗಿ ಬಿಡುತ್ತಾಳೆ, ಆಗ ಉಳಿದ ಆರು ಜನ ಅಂಜಿ ಸ್ವಾಮಿಯ ಪಾದಕ್ಕೆ ಬಿದ್ದು "ತಪ್ಪಾಯಿತು ಸ್ವಾಮಿ_ಹಲಗೂರಿಗೆ ಹೋಗಲು ಅಪ್ಪಣೆ ಕೊಡಿ ಅರಿಯದೇ ಆದ ತಪ್ಪನ್ನು ಮನ್ನಿಸಿ ಬಿಡಿ-ನೀವು ಈಗಿಂದೀಗಲೇ ಪಾಂಚಾಳರಕೇರಿಗೆ ಹೋಗಿ ಸ್ವಾಮಿಯ ಅಪ್ಪಣೆಯನ್ನು ತಲೆಯಮೇಲೆ ಹೊತ್ತು ಮೆರೆಸುತ್ತೇವೆ" ಎನ್ನುತ್ತಾರೆ.
ಸ್ವಾಮಿ" ಈ ಮಾತನ್ನು ನೀವು ಮೊದಲೇ ಆಡಿದ್ದರೆ ಶಿಕ್ಷೆಯಾದರೂ ತಪ್ಪುತ್ತಿತ್ತಲ್ಲ, ಆಗಿರುವ ಗಾಯ ಮಾಯವಂತಹ ಊಟವನ್ನು ನೀವು ಹಲಗೂರಿನಲ್ಲಿ ಮಾಡಿ ಹೋಗಿ" ಎನ್ನುತ್ತಾರೆ. ದೇವಿ ಚಾಮುಂಡಿ ನಿದ್ದೆ ತಿಳಿಯಾಗಿ ಎದ್ದವಳ೦ತೆ ಏಳುತ್ತಾ, ಸ್ವಾಮಿಯ ಪಾದಕ್ಕೆ ಎರಗಿ. "ವೈರಿಯನ್ನು ತೋರಿ_ಹುರಿದು ಮುಕ್ಕುವೆ" ಎನ್ನುತ್ತಾಳೆ.
  ಮಂಟೇಸ್ವಾಮಿ "ಈ ದುರ್ಗಿಯರ ಹಿಂಡನ್ನು ನೇರವಾಗಿ ಪಾಂಚಾಳರ ಕೇರಿಗೆ ಹೊಡೆಯಬೇಕು. ಇವರ ದೃಷ್ಟಿ ಬೇರೆ ಯಾವುದೇ ಊರಿನ ಮೇಲೂ ಬೀಳುವಂತಾಗಬಾರದು", ಎಂಬುದಕ್ಕೆ ಸಿದ್ದಯ್ಯ ಸ್ವಾಮಿ ಆ ಏಳು ಜನ ದುರ್ಗಿಯರನ್ನು ಏಳು ಕುರಿಗಳನ್ನಾಗಿ ಮಾಡಿಕೊಂಡು, ತಾನು ಕುರುಬ ಗೌಡನಾಗಿ, ತೊಟ್ಟಿದ್ದ ಕಾವಿಯನ್ನು ಕರಿಯ ಕಂಬಳಿಯಾಗಿ ಮಾಡಿಕೊಂಡು, ನಾಗಬೆತ್ತವನ್ನು ಕುರಿ ಕಾಯುವ ಕಡ್ಡಿಯಾಗಿ ಮಾಡಿಕೊಂಡು, ಸೋಮವಾರ ಮಧ್ಯಾಹ್ನ ಪಾಂಚಾಳರ ಊರ ಅಂಕವನ್ನು ಹೊಕ್ಕು ಚಾಮುಂಡಿಗೆ ಹೇಳುತ್ತಾರೆ; "ಏಳು ಜನ ಧಣಿಗಳ ಜೀವದ ತಂಟೆಗೆ ಹೋಗಬೇಡಿ-ಉಳಿದವರು ಒಬ್ಬರನ್ನೂ ಬಿಡಬೇಡಿ".
   ಹಲಗೂರಿನ ಚಿಕ್ಕ ದಣಿಯ ಓಣೆಗೆ ಬಂದ ಸಿದ್ದಯ್ಯಸ್ವಾಮಿ ಹೊಂಗೆಯ ತೋಪಿನಲ್ಲಿದ್ದ ಹುಲಿ ಮತ್ತು ಕರಡಿಯೊಡನೆ ಆಟವಾಡಲು ತೊಡಗಿ, ಭಂಗಿಯ ಫಲಹಾರ ಸ್ವೀಕರಿಸಿ, ಹಲಗೂರಿನ ಒಟ್ಟು ಐಶ್ವರ್ಯ ಎಷ್ಟೊಂದು ತಮ್ಮ ದಿವ್ಯ ದೃಷ್ಟಿಯಲ್ಲಿ ಕಾಣತೊಡಗುತ್ತಾರೆ.

ಮುಂದುವರಿಯುತ್ತದೆ ..
ಓದಿದ ಗುರುತಾಗಿ ಒಂದು ಲೈಕ್ ಮತ್ತು ಶೇರ್ ಮಾಡಿ.
ನಿಮ್ಮ ಪ್ರೋತ್ಸಾಹವಿರಲಿ.. ಧನ್ಯವಾದಗಳು 🙏

👇ಮುಂದಿನ ಸಂಚಿಕೆಯಲ್ಲಿ (೨ ದಿನಗಳಲ್ಲಿ)
22. ಆದಿಬೀದಿಯಲ್ಲಿ ಹೆಣಗಳು, ಆಕಾಶದ ತುಂಬ ಹದ್ದುಗಳು ರಾಶಿಯಲ್ಲಿ ಪಾಂಚಾಳರ ಕೇರಿಗಳು. 

👈 ಹಿಂದಿನ ಸಂಚಿಕೆ:
20. ಏಳುಜನ ದುರ್ಗಿಯರಿಗೆ ಬರಹೇಳು ಸಿದ್ದಪ್ಪಾಜಿ.
ನಮ್ಮ ಬ್ಲಾಗ್ ನಲ್ಲಿ ಓದಲು:
👉 https://goo.gl/omSCdU
ಹಿಂದಿನ ಸಂಚಿಕೆ ನಮ್ಮ ವೆಬ್ಸೈಟ್ ನಲ್ಲಿ ಓದಲು:
👉 https://goo.gl/m7u5fn
ಹಿಂದಿನ ಸಂಚಿಕೆ ನಮ್ಮ ಫೇಸ್ಬುಕ್ ಪೇಜಲ್ಲಿ ಓದಲು:
👉 https://goo.gl/Yj19ZV
<-------------------------->
Website: Siddappaji.com
Email: Lordsiddappaji@gmail.com

Find us: Siddappaji Lord (Admin)
Www.facebook.com/lord.siddappaji
Www.facebook.com/sri.manteswamy
Also on Twitter, Instagram & Google+

ಸಂಪೂರ್ಣ ಕಥೆ ತಿಳಿಯುವ ಆಸಕ್ತರು 👇 ಲಿಂಕ್ ಓಪನ್ ಮಾಡಿ
📓Read: https://goo.gl/aBBDN1 https://goo.gl/QYVt7o
🔊listen: https://goo.gl/hXvMdD https://goo.gl/BuXToJ https://goo.gl/e4hWAh 

No comments:

Post a Comment