ಶ್ರೀ ಧರೆಗೆ ದೊಡ್ಡವರ ಚರಿತೆ (ಸಂಚಿಕೆ 20)

20. ಏಳುಜನ ದುರ್ಗಿಯರಿಗೆ ಬರಹೇಳು ಸಿದ್ದಪ್ಪಾಜಿ.

ಅಪಾರವಾದ ದುಃಖದಿಂದ ತಪ್ತನಾದ ಸಿದ್ದಪ್ಪಾಜಿ 'ಸ್ವಾಮಿ ಪರಂಜ್ಯೋತಿಯವರಿಗೆ ಹೇಗೆ ಮುಖ ತೋರಿಸಲಿ_ಅವರು ಅಪ್ಪಣೆಕೊಡಿಸಿದ ಭಿಕ್ಷೆಯನ್ನು ತರಲು ಆಗಲೇ ಇಲ್ಲವಲ್ಲ ಎಂದುಕೊಳ್ಳುತ್ತಾ ಬೊಪ್ಪಗೊ೦ಡನ ಪುರಕ್ಕೆ ಹಿಂದಿರುಗಿ, ಉರಿಗದ್ದಿಗೆ ಮೇಲೆ ಪವಡಿಸಿರುವ ಮಂಟೇಸ್ವಾಮಿಯ ಮುಂದೆ ಮುಖ ಅಡಿಯಾಗಿ ಬೊರಲು ಬಿದ್ದು, ಅಳುತ್ತಾ ದುಃಖಿಸುತ್ತಾ ಇರುತ್ತಾರೆ.
ಸ್ವಾಮಿ ಪರಂಜ್ಯೋತಿಗೆ ಸಿದ್ದಪ್ಪಾಜಿಯ ದುಃಖ ಅರಿವಾಗಿ ಮಗುಲಾಗಿ ಹೊರಳಿ, ಉರಿಗದ್ದಿಗೆಯ ಮೇಲೆ ಎದ್ದು ಕುಳಿತುಕೊಂಡು ತಮಾಷೆ ಮಾಡುತ್ತಾರೆ; ಮೂರು ದಿನದಲ್ಲಿ ಭಿಕ್ಷೆ ತರಲು ಹೋದವನು. ಪಾಂಚಾಳಗೇರಿ ಸಕಲ ಐಶ್ವರ್ಯದಿಂದ ತುಂಬಿ ತೊನೆಯುತ್ತಿದೆಯಾಗಿ. ಪುಷ್ಕಳವಾಗಿ ಅಲ್ಲೇ ಉಂಡು ತಿಂದು ಮೂರು ತಿಂಗಳು ಉಳಿದುಬಿಟ್ಟೆಯಲ್ಲವೆ? ಸನ್ಯಾಸಿಗೆ ಈ ಬಗೆಯ ಸುಖಲೋಲಾಪ್ತೆ ಸರಿಯೇನು ಸಿದ್ದಪ್ಪಾಜಿಯವರೆ?"

ಸಿದ್ದಪ್ಪಾಜಿ ಸ್ವಾಮಿ ಮಂಟೇದ ಅಯ್ಯನಿಗೆ ಮತ್ತೊಮ್ಮೆ ನಮಸ್ಕರಿಸಿ, ಪ್ರಭು ಎಲ್ಲ ಅರಿತವನು ನೀನು ನಿನ್ನ ಇಚ್ಛೆ ಇರುವಂತೆ ಸಚರಾಚರ ನಡೆಯ ಬಲ್ಲುವೇ ಹೊರತು. ನಮ್ಮ ಇಚ್ಛೆ ಸಾಧ್ಯವೆ? ಸದ್ಯಕ್ಕೆ ಏಳು ಜನ ಧಣಿಗಳಿಂದ ನನಗೆ ಆಗಿರುವ ದುಃಖವನ್ನು ಕಳೆಯಿರ" ಎಂದು ಬೇಡುತ್ತಾನೆ.
ನಮ್ಮ ಶಿಶುಮಗ ಸಿದ್ದಪ್ಪಾಜಿಯ ಹೊಟ್ಟೆ ಉರಿಸಿರುವ ಈ ಪಾಂಚಾಳರ ಊರನ್ನೇ ಉರಿಸಬೇಕು_ ಎಂದು ತೀರ್ಮಾನಿಸಿದ ಪ್ರಭು "ಹೆದರಬೇಡಿ ಕಂದಯ್ಯಾ_ ನಿಮ್ಮ ಮಹಿಮೆ ಮೆರೆಯಲು ಮತ್ತಷ್ಟು ಒಳ್ಳೆಯ ಅವಕಾಶ ಇದಾಗಿದೆ ನೀವು ಕುಂದೂರು ಬೆಟ್ಟಕ್ಕೆ ಹೋಗಿ, ಅಲ್ಲಿ ಪಾಂಚಾಳರ ಏಳೂ ಕೇರಿಯ ಏಳು ಜನ ಮನೆ ದೇವತೆಗಳಾದ ದುರ್ಗಿಯರಿದ್ದಾರೆ, ಅವರನ್ನು ನಾನು ಕರೆದನೆನ್ನುವ ವಿಚಾರ ತಿಳಿಸಿ. ಆದಿ ಬೊಪ್ಪಣಪುರಕ್ಕೆ ಬರಲು ಹೇಳಿ," ಎನ್ನುತ್ತಾರೆ.
ಸಿದ್ದಯ್ಯಸ್ವಾಮಿ ಬಹಳ ಸಂತೋಷದಿಂದ ದುರ್ಗಿಯರು ಇರುವ ಕುಂದೂರಿಗೆ ತೆರಳುತ್ತಾರೆ.

ಮುಂದುವರಿಯುತ್ತದೆ ..
ಓದಿದ ಗುರುತಾಗಿ ಒಂದು ಲೈಕ್ ಮತ್ತು ಶೇರ್ ಮಾಡಿ.
ನಿಮ್ಮ ಪ್ರೋತ್ಸಾಹವಿರಲಿ.. ಧನ್ಯವಾದಗಳು 🙏

👇ಮುಂದಿನ ಸಂಚಿಕೆಯಲ್ಲಿ (೨ ದಿನಗಳಲ್ಲಿ)
21. ಏಳು ದುರ್ಗಿಯರು ಪಾಂಚಾಳರ ಕೇರಿಯ ಸುಡುತ್ತಾರೆ. 

👈 ಹಿಂದಿನ ಸಂಚಿಕೆ:
19. ಸ್ವಾಮಿ ಸಿದ್ದಯ್ಯನನ್ನು ಊರಅಂಕದಿಂದ ಕತ್ತು ಹಿಡಿದು ಆಚೆಗೆ ದಬ್ಬುತ್ತಾರೆ.
ನಮ್ಮ ಬ್ಲಾಗ್ ನಲ್ಲಿ ಓದಲು:
👉 https://goo.gl/ffeHgG
ಹಿಂದಿನ ಸಂಚಿಕೆ ನಮ್ಮ ವೆಬ್ಸೈಟ್ ನಲ್ಲಿ ಓದಲು:
👉 https://goo.gl/gyFhRg
ಹಿಂದಿನ ಸಂಚಿಕೆ ನಮ್ಮ ಫೇಸ್ಬುಕ್ ಪೇಜಲ್ಲಿ ಓದಲು:
👉 https://goo.gl/BHPpqF
<-------------------------->
Website: Siddappaji.com
Email: Lordsiddappaji@gmail.com

Find us: Siddappaji Lord (Admin)
Www.facebook.com/lord.siddappaji
Www.facebook.com/sri.manteswamy
Also on Twitter, Instagram & Google+

ಸಂಪೂರ್ಣ ಕಥೆ ತಿಳಿಯುವ ಆಸಕ್ತರು 👇 ಲಿಂಕ್ ಓಪನ್ ಮಾಡಿ
📓Read: https://goo.gl/aBBDN1 https://goo.gl/QYVt7o
🔊listen: https://goo.gl/hXvMdD https://goo.gl/BuXToJ https://goo.gl/e4hWAh 

No comments:

Post a Comment