19. ಸ್ವಾಮಿ ಸಿದ್ದಯ್ಯನನ್ನು ಊರಅಂಕದಿಂದ ಕತ್ತು ಹಿಡಿದು ಆಚೆಗೆ ದಬ್ಬುತ್ತಾರೆ.
ಏಳು ಜನ ಧಣಿಗಳೂ ತಮ್ಮತಮ್ಮಲ್ಲೇ ವಿಧವಿಧವಾಗಿ ಚಿಂತಿಸಿ ಕೊಳ್ಳುತ್ತಾ "ಇದ್ದಕ್ಕಿದ್ದಂತೆಯೇ ಬಂದ ಪರದೇಶಿ ಎಲ್ಲ ಪವಾಡಗಳನ್ನು ಗೆದ್ದುಬಿಟ್ಟ, ಕಬ್ಬಿಣದ ಭಿಕ್ಷೆಯನ್ನು ಬೇಡುವುದ ನಿಲ್ಲಿಸುತ್ತಲೇ ಇಲ್ಲ ಶ್ರೀ ರಂಗದ ದೇವರು ಏನು ಸಂಖ್ಯೆಯನ್ನು ಕಳುಹಿಸುತ್ತಾರೋ, ತಲಕಾಡ ದೊರೆಗಳು ಏನು ಆಕ್ಷೇಪಣೆ ಎತ್ತುತ್ತಾರೋ__. ಎಂದೆಲ್ಲಾ ಹೇಳಿಕೊಳ್ಳುತಾ ಚಿಕ್ಕದಣಿಯ ಅರಮನೆಯಲ್ಲಿ ಕುಳಿತಿರುವಾಗಲೇ ಸಿದ್ದಯ್ಯಸ್ವಾಮಿ ಇವರನ್ನೇ ಹುಡುಕಿಕೊಂಡು ಬರುತ್ತಾರೆ. ಅವರುಗಳ ಮಾತುಗಳು ಸ್ವಾಮಿಯ ಕಿವಿಯ ಮೇಲೆ ಬೀಳುತ್ತದೆ. ಯಾವುದೂ ಬೇಗ ತೀರ್ಮಾನವಾಗಿ ಬಿಡಲಿ ಎಂದು ಸ್ವಾಮಿಗಳು ಅವರುಗಳ ಮುಂದೆ ಮೂರ್ತಗೊಂಡು ಹೇಳುತ್ತಾರೆ:
"ಏಯ್ ಏಳು ಜನ ಧಣಿಗಳೇ ನನ್ನನ್ನು ಒಂದಲ್ಲ ಎಂದು ಐದು ತರಹದ ಶಿಕ್ಷೆ ಕೊಟ್ಟು, ಎಲ್ಲವನ್ನು ನಾನು ಪವಾಡವಾಗಿ ಗೆದ್ದ ಪರಿಯನ್ನೆಲ್ಲಾ ಕಂಡಿದ್ದೀರಿ ಈಗಲಾದರೂ ಕಾವಿ ತೊಟ್ಟು ಶಿವ ಲಾಂಛನವ ಧರಿಸಿರುವ ನನಗೆ ಭಿಕ್ಷೆಯಾಗಿ ಕಬ್ಬಿಣಕೊಡಿ, ಕೊಡಲೊಪ್ಪಿದ ನಗಗಳನ್ನು ಮಾಡಿಕೊಡಿ. ಇಲ್ಲವಾದರೆ ನೀವು ತೊಂದರೆಗೆ ಸಿಗುವಿರಿ," ಸ್ವಾಮಿಯ ಮಾತಿಗೆ ಸಿಡಿದೆದ್ದ ಏಳೂ ಜನ ಧಣಿಗಳು "ಕೇಳುವುದು ಭಿಕ್ಷೆ_ನೀನು ಕೊಟ್ಟೇಕೊಡಿ ಎಂದು ಕೇಳುವುದಕ್ಕೆ ಅದನ್ನು ನೀನಾಗಲಿ, ನಿನ್ನ ಅಪ್ಪಂದಿರಾಗಲಿ ನಮಗೆ ಕೊಟ್ಟಿರಲಿಲ್ಲ ಕಬ್ಬಿಣ ಎಂದರೆ ನಮ್ಮ ಪಾಲಿಗೆ ಕರಿಯ ಚಿನ್ನ ಚಿನ್ನದ ತೊಟ್ಟಿಲನ್ನು ಬೆಳ್ಳಿಯ ಸರಪಣಿಯನ್ನು ನೀನು ಕೇಳಿದೆ ಎಂದು ಕೊಡಲು ನಿನ್ನ ಪೂರ್ವಜರಾರೂ ನಮಗೆ ದುಡಿದು ಕೊಟ್ಟಿರಲಿಲ್ಲ" ಎಂದು ಹೇಳಿ. ಪಹರೆಯವರ ಕಡೆ ತಿರುಗಿ, "ಕತ್ತಿನ ಮೇಲೆ ನಾಲ್ಕು ಝಾಡಿಸಿ. ಈ ಪರದೇಶಿಯನ್ನು ಎಳೆದುಕೊಂಡು ಹೋಗಿ, ಊರಿಂದ ಆಚೆ ಎಳೆದು ಎಸೆದು ಬನ್ನಿ ಎನ್ನುತ್ತಾರೆ.
ಸಿದ್ದಪ್ಪಾಜಿಗೂ ಬಹಳ ಕೋಪವೇ ಬರುತ್ತದೆ. ವೃಥಾ ನಮ್ಮನ್ನು ಇಲ್ಲಿ ಉಳಿಸಿ. ನಮ್ಮಿಂದ ಪವಾಡಗಳ ಮೇಲೆ ಪವಾಡಗಳನ್ನು ಮಾಡಿಸಿ. ಕೊನೆಯಲ್ಲಿ ಕೇಳಿದ ಭಿಕ್ಷೆ ಕೊಡುವ ಭರವಸೆ ಹುಟ್ಟಿಸಿ, ತೊಂದರೆ ಕೊಟ್ಟಿರಲ್ಲ_ಎಂದು ದುಃಖವೂ ಆಗುತ್ತದೆ.
ಬಹಳ ಹಾಸ್ಯಗಾರರು, ಮೋಸಗಾರರು ನೀವು, ನಿಮಗೆ ಶ್ರೇಯಸ್ಸು ಖಂಡಿತ ಸಿಗಲಾರದು!" ಎನ್ನುತ್ತಿರುವಂತೆಯೇ ಧಣಿಗಳ ಚಿತ್ರದ೦ತೆ ಪಾಠವುವಗರು ಬಂದು ಸಿದ್ದಪ್ಪಾಜಿಗೆ ಎಡಮುರಿ ಬಲಮುರಿ ಕಟ್ಟಿ, ಕತ್ತಿನ ಮೇಲೆ ಕೈಹಾಕಿ ನೂಕುತ್ತಾ ಊರಿ೦ದ ಹೊರಕ್ಕೆ ಎಳೆದು ತಂದು, ನಂತರ ಝಾಡಿಸಿ ನೂಕಿಬಿಡುತ್ತಾರೆ.
ಸಿದ್ದಪ್ಪಾಜಿಗೆ ಅಸಾಧಾರಣ ದುಃಖವಾಗಿಬಿಡುತ್ತದೆ.
ಮುಂದುವರಿಯುತ್ತದೆ ..
ಓದಿದ ಗುರುತಾಗಿ ಒಂದು ಲೈಕ್ ಮತ್ತು ಶೇರ್ ಮಾಡಿ.
ನಿಮ್ಮ ಪ್ರೋತ್ಸಾಹವಿರಲಿ.. ಧನ್ಯವಾದಗಳು 🙏
👇ಮುಂದಿನ ಸಂಚಿಕೆಯಲ್ಲಿ (೨ ದಿನಗಳಲ್ಲಿ)
20. ಏಳುಜನ ದುರ್ಗಿಯರಿಗೆ ಬರಹೇಳು ಸಿದ್ದಪ್ಪಾಜಿ.
👈 ಹಿಂದಿನ ಸಂಚಿಕೆ:
18. ಮುಳ್ಳಿನ ಉಕ್ಕಿನ ಕುದುರೆಯನ್ನು ನೀರಾಗಿ ಹರಿಸಿದರು ಮತ್ತು ಗುಳಿಯಿಂದ ಸಿಡಿದು ಎದ್ದುಬಂದರು ಸಿದ್ದಯ್ಯ ಸ್ವಾಮಿ.
ನಮ್ಮ ಬ್ಲಾಗ್ ನಲ್ಲಿ ಓದಲು:
👉 https://goo.gl/YpsKAF
ಹಿಂದಿನ ಸಂಚಿಕೆ ನಮ್ಮ ವೆಬ್ಸೈಟ್ ನಲ್ಲಿ ಓದಲು:
👉 https://goo.gl/HQPrGY
ಹಿಂದಿನ ಸಂಚಿಕೆ ನಮ್ಮ ಫೇಸ್ಬುಕ್ ಪೇಜಲ್ಲಿ ಓದಲು:
👉 https://goo.gl/KadHqf
<-------------------------->
Website: Siddappaji.com
Email: Lordsiddappaji@gmail.com
Find us: Siddappaji Lord (Admin)
Www.facebook.com/lord.siddappaji
Www.facebook.com/sri.manteswamy
Also on Twitter, Instagram & Google+
ಸಂಪೂರ್ಣ ಕಥೆ ತಿಳಿಯುವ ಆಸಕ್ತರು 👇 ಲಿಂಕ್ ಓಪನ್ ಮಾಡಿ
📓Read: https://goo.gl/aBBDN1 https://goo.gl/QYVt7o
🔊listen: https://goo.gl/hXvMdD https://goo.gl/BuXToJ https://goo.gl/e4hWAh
No comments:
Post a Comment