ಶ್ರೀ ಧರೆಗೆ ದೊಡ್ಡವರ ಚರಿತೆ (ಸಂಚಿಕೆ 18)

18. ಮುಳ್ಳಿನ ಉಕ್ಕಿನ ಕುದುರೆಯನ್ನು ನೀರಾಗಿ ಹರಿಸಿದರು ಮತ್ತು ಗುಳಿಯಿಂದ ಸಿಡಿದು ಎದ್ದುಬಂದರು ಸಿದ್ದಯ್ಯ ಸ್ವಾಮಿ.

ಮತ್ತೆ ಸ್ವಾಮಿ_ಏಳು ಜನದಣಿಗಳ ಮುಂದೆ ಬಂದು ಢಮರುಗ ನಾದಗೈದು "ನಾನು ಈಗಾಗಲೇ ನಾಲ್ಕು ಪವಾಡಗಳನ್ನು ಮಾಡಿದ್ದಾಯಿತು ಈಗಲೂ ನೀವು ಭಿಕ್ಷೆಯನ್ನು ಕೊಡುತ್ತಿಲ್ಲ. ಹೀಗೆ ನೀವು ಮಾಡುವುದು ತರವೆ?" ಎನ್ನುತ್ತಾರೆ. ಆಗ ದಣಿಗಳು "ನೀನು ಇದುವರೆಗೂ ಮಾಡಿದ್ದನೆಲ್ಲಾ ಪವಾಡವೆಂದು ಒಪ್ಪಲು ನಾವು ಸಿದ್ಧರಿಲ್ಲ ನಾವು ಈಗ ಏಳು ಸಾವಿರ ವರಹಗಳ ಖರ್ಚಿನಲ್ಲಿ ಉಕ್ಕಿನಲ್ಲಿ ಕುದುರೆಯೊಂದನ್ನು ಮಾಡುತ್ತೇವೆ. ಆ ಕುದುರೆಯ ಮೈಯನ್ನೆಲ್ಲಾ ಉಕ್ಕಿನ ಮುಳ್ಳುಗಳಿಂದ ಸಂಪೂರ್ಣವಾಗಿ ಅಲಂಕರಿಸುತ್ತೇವೆ, ನೊಣ ಅದರ ಮೇಲೆ ಕುಳಿತರೆ ನೊಣ ಕತ್ತರಿಸಿ ಹೋಗಬೇಕು. ಉಕ್ಕಿನ ಕಡಲೆಯನ್ನು ತಯಾರಿಸುತ್ತೇವೆ. ಆ ನಂತರ ಅದನ್ನು ಏಳು ದಿವಸಗಳ ಕಾಲ ಗಣಗಣನೆ ಕಾಯಿಸಿ ಬಿಡುತ್ತೇವೆ, ನೀನು ಆ ಕುದುರೆಯನ್ನು ಏರಿ ಏಳು ಕೇರಿಗಳಲ್ಲೂ ಸವಾರಿ ಮಾಡಿ, ಅದಕ್ಕೆ, ಉಕ್ಕಿನ ಕಡಲೆಯನ್ನು ತಿನ್ನಿಸಿದ್ದೇ ಆದರೆ ನಿನಗೆ ನಾವು ಒಂಭತ್ತರ ಬದಲಿಗೆ ಹತ್ತು ನಗಗಳನ್ನು ಮಾಡಿಕೊಡುತ್ತೇವೆ. ಇಲ್ಲವಾದರೆ ನಿನಗೆ ಮತ್ತಷ್ಟು ತೊಂದರೆ ತಪ್ಪಿದ್ದಲ್ಲ" ಎನ್ನುತ್ತಾರೆ.

ಅಯ್ಯ ಸಿದ್ದಯ್ಯ ಒಪ್ಪುತ್ತಾರೆ. ಕಮ್ಮಾರರನ್ನೂ ಕರೆಸಿ ಉಕ್ಕಿನ ಕುದುರೆಯನ್ನೂ, ಅದಕ್ಕೆ ಮುಳ್ಳಿಗೆ ಮೈಯನ್ನು, ಅದು ತಿನ್ನಲೆಂದು ಉಕ್ಕಿನ ಕಡಲೆಯನ್ನು ಎರಕ ಹುಯ್ಯಿಸುತ್ತಾರೆ. ಅದರ ಮೇಲೆ ಕುಳಿತ ನೊಣ ಕತ್ತರಿಸಿ ಬೀಳುವಷ್ಟು ಅದು ಹರಿತವಾಗಿ ಬಿಡುತ್ತದೆ. ಅದನ್ನು ಊರ ಮಧ್ಯದ ಅಂಕಕ್ಕೆ ಹೊತ್ತು ತಂದು ಏಳು ದಿನಗಳ ಕಾಲ ಕಾಯಿಸುತ್ತಾರೆ, ಸಿದ್ದಯ್ಯಸ್ವಾಮಿಯನ್ನು ಬಿಚ್ಚುಗತ್ತಿಯ ಪಹರೆಯವರು ಕುದುರೆಯ ಬಳಿಗೆ ಎಳೆದು ತರುತ್ತಾರೆ.

ಸಿದ್ದಯ್ಯ ಪರಮ ಪರಂಜ್ಯೋತಿಯವರನ್ನು ನೆನೆದು. ಇದೇ ಹಿಂದೆ ರಾಚಪ್ಪಯ್ಯನವರು ಏರಿದ್ದ ಕೆಂದಗ ಕುದುರೆ. ನಮ್ಮ ಭಾಗ್ಯದ ಕುದುರೆ ಎಂದು ನಂಬಿ, ನೆನದು ಕುದುರೆಯ ಬೆನ್ನಿಗೆ ಬ೦ದು ಮೂರ್ತರಾಗುತ್ತಾರೆ. ಸಿದ್ದಯ್ಯನವರ ಪ್ರಾರ್ಥನೆ ತೋಪಿನ ದೊಡ್ಡಮ್ಮ ತಾಯಿಗೆ ಅರಿವಾಗಿ ಆಕೆ ಥಟ್ಟನೆ ಆ ಕುದುರೆಯನ್ನು ನಿಜವಾದ ಕುದುರೆಯಾಗಿ ಮಾರ್ಪಡಿಸುತ್ತಾಳೆ, ಉಕ್ಕಿನ ಮುಳ್ಳೆಲ್ಲಾ ಮಕಮಲ್ ಬಟ್ಟೆಯಾಯಿತಂತೆ. ಕೆಳಗಿನ ಪಾತಾಳ ಮೇಲಿನ ಸೂರ್ಯಲೋಕಗಳನ್ನು ದಾಟದ ನಕ್ಷತ್ರ ಲೋಕದಲ್ಲಿ ಕುದುರೆ ಗರಗರನೆ ಸುತ್ತಿ ಸಿದ್ದಯ್ಯನಿಗೆ ಮೂರು ಲೋಕದ ಪವಾಡವನ್ನೂ ಈಗೊಮ್ಮೆ ದರ್ಶಿಸುತ್ತದೆ. ನಂತರ ಕುದುರೆ ಓಡೋಡಿ ಬಂದು ಬಸವನ ಕಟ್ಟೆಯ ಬಳಿ ನಿಲ್ಲುತ್ತದೆ. ಅದಾಗಿ ಅದೇ ಉಕ್ಕಿನ ಕಡಲೆಯನ್ನು ತಿಂದು ತೇಗಿ ಬಿಡುತ್ತದೆ. ಆಗ ಸಿದ್ದಯ್ಯಸ್ವಾಮಿ ಉಕ್ಕಿನ ಕುದುರೆಗೆ ಆಜ್ಞಾಪಿಸುತ್ತಾರೆ. "ನಾನು ಏರಿದ ಲೋಹ ನಮ್ಮ ಸ್ವಾಮಿಯ ಸೇವೆಗೇ ಮೀಸಲು. ಓ ಕುದುರೆ ನೀನು ನೀರಾಗಿ ಹರಿದು, ಬೊಪ್ಪಣಪುರಕ್ಕೆ ಹರಿದುಹೋಗು" ಎನ್ನುತ್ತಾರೆ. ಆಗ ಆ ಉಕ್ಕಿನ ಕುದುರೆ ನೀರಾಗಿ ಹರಿದು ಪರಮ ಪರಂಜ್ಯೋತಿಯ ಪಾದದತ್ತ ಸಾಗತೊಡಗುತ್ತದೆ.

:: ಗುಳಿಯಿಂದ ಸಿಡಿದು ಎದ್ದು ಬಂದು ಸಿದ್ದಯ್ಯ ಸ್ವಾಮಿ ::

ಮತ್ತೆ ಸ್ವಾಮಿ ಸಿದ್ದಯ್ಯ ಏಳು ದಣಿಗಳ ಬಳಿಗೆ ಬಂದು "ನಮ್ಮ ಸತ್ಯವನು ಸಾಕಾದಷ್ಟು ತೋರಿಸಿದ್ದೇವೆ. ಈಗಲಾದರೂ ನೀವು ನಮ್ಮ ಸತ್ಯವನ್ನು ಗೌರವಿಸಿ, ನಮಗೆ ಕಬ್ಬಿಣದ ಭಿಕ್ಷೆಯನ್ನು ಕೊಡಬೇಕು." ಎಂದು ಹೇಳುತ್ತಾರೆ, ಅದಕ್ಕೆ ಉತ್ತರವಾಗಿ ಏಳು ಧಣಿಗಳು, ನೀನು ಇಲ್ಲಿನವರೆಗೆ ಎಸಗಿದ್ದು ಸತ್ಯವಲ್ಲ, ಪವಾಡವಲ್ಲ, ನಾವು ನಿನ್ನನ್ನು ನಂಬಬೇಕಾದರೆ ನಮ್ಮ ಹೆತ್ತಯ್ಯನ ಕಾಲವ ಇಲಿಗುಳಿ ಮುಸುಗನ್ನೆ ನಾವು ತೆಗೆಯಿಸಿ, ಅದಕ್ಕೆ ಹನ್ನೆರಡು ಖಂಡುಗ ಸುಣ್ಣವನ್ನು ಸುರಿಸಿ, ಅಷ್ಟೇ ಪ್ರಮಾಣದ ಮೆಣಸಿನಕಾಯಿ, ಕಳ್ಳಿ ಹಾಲು, ಎಕ್ಕದ ಹಾಲು, ಹುಣಸೆಯ ತೆರಗೆ೦ಡ ಹಾಕಿಸುತ್ತೇವೆ, ನಿನ್ನನ್ನು ಅದರ ಒಳಕ್ಕೆ ತಳ್ಳಿ, ಅದರ ನೆತ್ತಿಯನ್ನು ಕಟ್ಟಾನೆಕಲ್ಲು ಹಾಕಿ ಮುಚ್ಚಿಬಿಡುಸುತ್ತೇನೆ. ಅದರ ಮೇಲೆ ವಜ್ರದ ಗಾರೆಯನ್ನು ಬಳಿಸುತ್ತೇವೆ, ಏಳು ದಿನಗಳ ವಾಯಿದೆ, ನೀನು ಏಳು ದಿನಗಳ ಕಾಲ ಅದರ ಒಳಗಿಂದ್ದ ಹೊರಗೆ ಬಂದದ್ದೆ ಆದರೆ ನಿನಗೆ ಹತ್ತಿಪ್ಪತ್ತ ನಗಗಳನ್ನೇ ಕೊಡುತ್ತೇವೆ." ಎನ್ನುತ್ತಾರೆ. ಸ್ವಾಮಿ ಒಪ್ಪುತ್ತಾರೆ.
ಎಲ್ಲವೂ ಸಿದ್ಧವಾಗುತ್ತದೆ ಬಿಚ್ಚುಗತ್ತಿಯವರು ಸಿದ್ದಯ್ಯನನ್ನು ತಂದು ಆ ಇಲಿಗುಳದಳ್ಳಿ ಹಾಕಿ ಬಿಡುತ್ತಾರೆ. ಆಗ ನಮ್ಮ ಘನಲೀಲೆಯ ಸಿದ್ದಯ್ಯನವರು ಆ ಗುಳಿಯಲ್ಲಿ ತುಂಬಿರುವ ಪದಾರ್ಥಗಳನ್ನೆಲ್ಲಾ ಫಲಾಹಾರವಾಗಿ ಸ್ವೀಕರಿಸಿ ತೇಗಿಬಿಡುತ್ತಾರೆ. ನಂತರ ತಲೆ ಎತ್ತಿ ನೋಡಿ ಗುಟುರೆ ಹಾಕುತ್ತಾರೆ. ಗುಳಿಯ ಬಾಯಿಗೆ ಹಾಕಿದ್ದ ಕಟ್ಟನೆಯ ಕಲ್ಲು ಆಕಾಶಕ್ಕೆ ಸಿಡಿದು ಹೋಗಿ ಬಿಡುತ್ತದೆ. ಸ್ವಾಮಿ ಸಿಡಿಲಾಗಿ ಚಿಮ್ಮಿ ಹೊರಬರುತ್ತಾರೆ. ಏಳು ಮಂದಿಯ ಅರಮನೆಯತ್ತ ಬರುತ್ತಾರೆ.

ಮುಂದುವರಿಯುತ್ತದೆ ..
ಓದಿದ ಗುರುತಾಗಿ ಒಂದು ಲೈಕ್ ಮತ್ತು ಶೇರ್ ಮಾಡಿ.
ನಿಮ್ಮ ಪ್ರೋತ್ಸಾಹವಿರಲಿ.. ಧನ್ಯವಾದಗಳು 🙏

👇ಮುಂದಿನ ಸಂಚಿಕೆಯಲ್ಲಿ (೨ ದಿನಗಳಲ್ಲಿ)
19. ಸ್ವಾಮಿ ಸಿದ್ದಯ್ಯನನ್ನು ಊರಅಂಕದಿಂದ ಕತ್ತು ಹಿಡಿದು ಆಚೆಗೆ ದಬ್ಬುತ್ತಾರೆ. 

👈 ಹಿಂದಿನ ಸಂಚಿಕೆ:
17. ಕೊಪ್ಪರಿಗೆ ಹರಿದು ನೀರಾಗಿ ಹೋಗಿ ಬಿಡುತ್ತದೆ.
ನಮ್ಮ ಬ್ಲಾಗ್ ನಲ್ಲಿ ಓದಲು:
👉 https://goo.gl/366eLo
ಹಿಂದಿನ ಸಂಚಿಕೆ ನಮ್ಮ ವೆಬ್ಸೈಟ್ ನಲ್ಲಿ ಓದಲು:
👉 https://goo.gl/Y5wKRn
ಹಿಂದಿನ ಸಂಚಿಕೆ ನಮ್ಮ ಫೇಸ್ಬುಕ್ ಪೇಜಲ್ಲಿ ಓದಲು:
👉 https://goo.gl/BnXSqu
<-------------------------->
Website: Siddappaji.com
Email: Lordsiddappaji@gmail.com

Find us: Siddappaji Lord (Admin)
Www.facebook.com/lord.siddappaji
Www.facebook.com/sri.manteswamy
Also on Twitter, Instagram & Google+

ಸಂಪೂರ್ಣ ಕಥೆ ತಿಳಿಯುವ ಆಸಕ್ತರು 👇 ಲಿಂಕ್ ಓಪನ್ ಮಾಡಿ
📓Read: https://goo.gl/aBBDN1 https://goo.gl/QYVt7o
🔊listen: https://goo.gl/hXvMdD https://goo.gl/BuXToJ https://goo.gl/e4hWAh 

No comments:

Post a Comment