17. ಕೊಪ್ಪರಿಗೆ ಹರಿದು ನೀರಾಗಿ ಹೋಗಿ ಬಿಡುತ್ತದೆ.
ಗಡ್ಡದಾಗಿ ಉಂಡು ತಿಂದು ಬಂದ ಏಳು ಜನ ಧಣಿಗಳನ್ನು ದಾರಿಯಲ್ಲೇ ಎದುರಾದ ಸಿದ್ದಯ್ಯ "ನಮ್ಮಿಂದ ಮೂರು ಪವಾಡಗಳನ್ನು ಮಾಡಿಸಿ ನೋಡಿದಿರಿ, ಈಗಲಾದರೂ ನಮಗೆ ನಾವು ಕೇಳಿದ ಭಿಕ್ಷೆ ಕೊಡಬಾರದೆ?" ಎಂಬುದಕ್ಕೆ ಅವರು ಉತ್ತರವಾಗಿ "ಇವುಗಳೆಲ್ಲಾ ಪವಾಡವಲ್ಲ, ನಮ್ಮ ಹೆತ್ತ ಮುತ್ತ೦ದಿರ ಕಾಲದಿಂದ ನಮ್ಮ ಪಾಲಿಗೆ ಬಂದ ಕೊಪ್ಪರಿಗೆ, ಇದೆ. ಅದನ್ನು ನಾವು ಹನ್ನೆರಡು ದಿನ ಕಾಯಿಸಿ, ನಂತರ ನಿನ್ನನ್ನು ಅದರಲ್ಲಿ ನೂಕಿ ಮತ್ತೆ ಹನ್ನೆರಡು ದಿನ ಉರಿಯನ್ನು ಹಾಕುತ್ತೇವೆ ಆಗಲೂ ನೀನು ನಿನ್ನ ನಿಜವನ್ನು ತೋರಿಸಿದ್ದೇ ಆದರೆ ಮುಂದೆ ವಿಚಾರ ಮಾಡುತ್ತೇವೆ" ಎನ್ನುತ್ತಾರೆ. ಸಿದ್ದಯ್ಯನ ಉತ್ತರಕ್ಕೆ ಕಾಯದೆ ಕೊಪ್ಪರಿಗೆಯನ್ನು ಕಾಯಿಸಿ, ಅದರಲ್ಲಿ ಸಿದ್ದಯ್ಯನನ್ನು ಕೈಕಾಲು ಬಿಗಿದು ಹಾಕುತ್ತಾರೆ. ಸಿದ್ದಯ್ಯ ಆರಾಮವಾಗಿ ಆ ಕೊಪ್ಪರಿಗೆಯಲ್ಲಿ ಪಡಿಸುತ್ತಾನೆ. ಹನ್ನೆರಡು ದಿನ ಕೊಪ್ಪರಿಗೆ ಏನೋ ಕಾಯುತ್ತದೆ. ಆದರೆ ಸಿದ್ದಯ್ಯನಿಗೆ ಏನೂ ತೊಂದರೆಯೇ ಆಗುವುದಿಲ್ಲ, ಕೊಪ್ಪರಿಗೆಯ ತಾಲೆದಸಯಲಾವದ ಹಕ್ಕಿಗೆ ಕೂಡ ಏನು ಆಗುದಿರುವುದನ್ನು ಕಂಡು ಪಾಂಚಾಳರು ಸಿದ್ದಯ್ಯನನ್ನು ಜಾದೂಗಾರನೆಂದು ಜರಿಯುತ್ತಾರೆ. ಹನ್ನೆರಡನೆಯ ದಿನ ನಿದ್ದೆಯಿಂದ ಎಚ್ಚೆತ್ತ ಸ್ವಾಮಿ, ತಾನು ಪವಡಿಸಿರುವ ಕೊಪ್ಪರಿಗೆ ಬೇರೊಂದು ಕೊಪ್ಪರಿಕೆಯನ್ನು ದಬ್ಬಾಕಿಬಿಟ್ಟಿರುವುದನ್ನು ಕಂಡು, ಮುಂದೆ ಬಸವಣ್ಣನವರು ಇತ್ತ ಬಂದಾಗ ಅವರ ಕುದುರೆಗೆ ಉರುಳಿ ಬೇಯಿಸಲು ಕೊಪ್ಪರಿಗೆ ಕೇಳುತ್ತಾರೆ. ಆಗ ಕೊಡಲು ಬೇಕಾಗುವುದರಿಂದ ನಿರ್ಧರಿಸಿ, ಒಂದು ಗುಟುರು ಹಾಕುತ್ತಾರೆ. ಬೋರಲಾಗಿದ್ದ ಕೊಪ್ಪರಿಗೆ ಆಕಾಶಕ್ಕೆ ಜಿಗಿದು ಮುಡುಕುತೊರೆಯ ದೊಡ್ಡ ಮಡುವಿಗೆ ಹೋಗಿ ಕುಳಿತು ಬಿಟ್ಟಿತಂತೆ ತಾವು ಜಿಗಿದು ಹೊರಗೆ ಬಂದ ಕೊಪ್ಪರಿಗೆಯನ್ನು ಕರಗಿ ನೀರಾಗಿ ಹರಿದು ಬೊಪ್ಪಗೊ೦ಡನ ಪುರ ಸೇರಿ ಬಿಡು-ಎಂದು ಅಪ್ಪಣೆ ಕೊಡಿಸುತ್ತಾರೆ. ಆ ಕೊಪ್ಪರಿಗೆ ಹಲಗೂರಿನ ನಡ೦ಕಣದಲ್ಲೇ ಕರಗಿ ನೀರಾಗಿ ಹರಿದು ಹೋಗಿ ಬಿಡುತ್ತದೆ.
ಮುಂದುವರಿಯುತ್ತದೆ ..
ಓದಿದ ಗುರುತಾಗಿ ಒಂದು ಲೈಕ್ ಮತ್ತು ಶೇರ್ ಮಾಡಿ.
ನಿಮ್ಮ ಪ್ರೋತ್ಸಾಹವಿರಲಿ.. ಧನ್ಯವಾದಗಳು 🙏
👇ಮುಂದಿನ ಸಂಚಿಕೆಯಲ್ಲಿ (೨ ದಿನಗಳಲ್ಲಿ)
18. ಮುಳ್ಳಿನ ಉಕ್ಕಿನ ಕುದುರೆಯನ್ನು ನೀರಾಗಿ ಹರಿಸಿದರು ಮತ್ತು ಗುಳಿಯಿಂದ ಸಿಡಿದು ಎದ್ದುಬಂದರಾ ಸಿದ್ದಯ್ಯ ಸ್ವಾಮಿ.
👈 ಹಿಂದಿನ ಸಂಚಿಕೆ:
16. ಪಂಚಲೋಹದ ಗಟ್ಟಿ ಪರಂಜ್ಯೋತಿಯ ಸೇವೆಗೆ ಮೀಸಲಾಗು.
ನಮ್ಮ ಬ್ಲಾಗ್ ನಲ್ಲಿ ಓದಲು:
👉 https://goo.gl/iNepnB
ಹಿಂದಿನ ಸಂಚಿಕೆ ನಮ್ಮ ವೆಬ್ಸೈಟ್ ನಲ್ಲಿ ಓದಲು:
👉 https://goo.gl/i5QW9E
ಹಿಂದಿನ ಸಂಚಿಕೆ ನಮ್ಮ ಫೇಸ್ಬುಕ್ ಪೇಜಲ್ಲಿ ಓದಲು:
👉 https://goo.gl/S2vXQ2
<-------------------------->
Website: Siddappaji.com
Email: Lordsiddappaji@gmail.com
Find us: Siddappaji Lord (Admin)
Www.facebook.com/lord.siddappaji
Www.facebook.com/sri.manteswamy
Also on Twitter, Instagram & Google+
ಸಂಪೂರ್ಣ ಕಥೆ ತಿಳಿಯುವ ಆಸಕ್ತರು 👇 ಲಿಂಕ್ ಓಪನ್ ಮಾಡಿ
📓Read: https://goo.gl/aBBDN1 https://goo.gl/QYVt7o
🔊listen: https://goo.gl/hXvMdD https://goo.gl/BuXToJ https://goo.gl/e4hWAh
No comments:
Post a Comment