ಶ್ರೀ ಧರೆಗೆ ದೊಡ್ಡವರ ಚರಿತೆ (ಸಂಚಿಕೆ 16)

16. ಪಂಚಲೋಹದ ಗಟ್ಟಿ ಪರಂಜ್ಯೋತಿಯ ಸೇವೆಗೆ ಮೀಸಲಾಗು.

ಪಂಚಲೋಹದ ಗಟ್ಟಿ ಕಾದು ಕರಗಿ ಸಾವಕ್ಕಿಯಂತೆ ಮರಳಲು ಆರಂಭವಾಗಿ ಹನ್ನೆರಡು ದಿನ ಉರುಳಿಹೋಗಿದೆ. ಪರದೇಶಿ ಸಿದ್ದಯ್ಯನನ್ನು ಹಿಡಿದು, ಕಾದಗಟ್ಟಿಯ ಮೇಲೆ ಎಸೆಯಲೆ೦ದು ಕಾಳಿಯ ಗುಡಿಗೆ ಬರುತ್ತಾರೆ. ಕಾಳಿಯ ಗುಡಿಯಲ್ಲಿ ಅಯ್ಯ ಇಲ್ಲದಿರುವುದನ್ನು ಕಂಡು ಬಿಚ್ಚುಗತ್ತಾಯನರನ್ನು ಬೈದು, ಹುಡುಕಿ ತರಲು ಕಳುಹಿಸುತ್ತಾರೆ. ಇದನ್ನು ಅರಿತ ಅಯ್ಯ ಸಿದ್ದಯ್ಯ ತಾನೇ ಓಡೋಡಿ ಕಾದಗಟ್ಟಿಯ ಬಳಿಗೆ ಬರುತ್ತಾನೆ. ಊರು ಕೇರಿಯವರನ್ನೆಲ್ಲಾ ಕರೆಯುತ್ತಾರೆ. ಎಲ್ಲರ ಮುಂದೆ ಸಿದ್ದಯ್ಯ ಮಂಟೇಸ್ವಾಮಿಯನ್ನು ನೆನೆದು ಗಟ್ಟಿಯ ನೆತ್ತಿಯ ಮೇಲೆ ಕಾಲೊ೦ದನು ಊರಿ, ಜಿಗಿದು ಧಗಧಗಿಸುತ್ತಿರುವ ಗಟ್ಟಿಯ ಮೇಲೆ ಮೂರ್ತಗೊಳ್ಳುತ್ತಾರೆ. ಡಮರುಗವನ್ನು ಕೊಡುಮಾಡಿ ಭಾರಿಸುತ್ತಾರೆ. ಕಂಡೆವು ಎನ್ನಬೇಡಿ; ಕಾಣಲಿಲ್ಲ ಎನ್ನಬೇಡಿ ಎಂದು ಸಿದ್ದಯ್ಯ ಗಟ್ಟಿಯ ಮೇಲೆ ಹುಲಿಯ ಚರ್ಮ ಹಾಸಿಹೊದ್ದು ಪವಡಿಸಿ ನಿದ್ದೆಮಾಡುತ್ತಾರೆ. ಉರಿ ನಕ್ಷತ್ರಮಾಡುತ್ತಾರೆ ಉರಿ ನಕ್ಷತ್ರ ಲೋಕಕ್ಕೆಲ್ಲಾ ತುಂಬುತ್ತದೆ. ಆದರೂ ಹಕ್ಕಿ ಪಕ್ಷಿಗಳೆಲ್ಲಾ ಉರಿಯಲ್ಲೇ ಹಾರಾಡುತ್ತಿರುತ್ತವೆ! ಉರಿ ನಿರಪಾಯಕಾರಿಯಾಗಿ ಬಿಟ್ಟಿದೆ!! ಸಿದ್ದಯ್ಯನನ್ನು ಸುಟ್ಟು ಭಸ್ಮಮಾಡಲು ನಿರ್ಧರಿಸಿದ ಪಾಂಚಾಳದ ಜನ ಎಲ್ಲ ತಿದಿಗಳನ್ನು ಬಿತ್ತುತ್ತಾರೆ. ಎಲ್ಲ ಇದ್ದಿಲನ್ನೂ ಚೆಲ್ಲಿ ಉರಿ ಹೆಚ್ಚಿಸುತ್ತಾರೆ. ಪ್ರಯತ್ನ ವಿಫಲವಾಗುತ್ತದೆ; ಉರಿ ಜಗದಗಲ ಮುಗಿಲಗಲ ಎಳುತ್ತದೆಯೇ ವಿನಾ ಸಿದ್ದಯ್ಯನ ಕೂದಲನ್ನೂ ಕೊಂಕಿಸದು, ಕಾದಗಟ್ಟಿಯಿಂದ ಸ್ವಾಮಿ ಸಿದ್ದಯ್ಯ ನಗುನಗುತಾ ಮೇಲೆದ್ದು_ ಗಟ್ಟಿಯನ್ನು ಕಾಲಿನಲ್ಲಿ ಮೆಟ್ಟಿ "ತಣ್ಣಗಾಗು ಪಂಚಲೋಹದ ಮಿಶ್ರಣವೇ, ತಣ್ಣಗಾಗು. ನೀನು ಧರೆಗೆ ದೊಡ್ಡೋರಿಗೆ ಮಾತ್ರ ಉಪಯೋಗವಾಗು ಪರಮ ಪರಂಜ್ಯೋತಿಯವರು ಮಾಡುವ ಶಿವಪೂಜೆಗೆ ಗಂಟೆ ಜಾಗಟವಾಗು, ಚೀರಿಮೆ ನಿಶಾನಿ ಆಗು, ಕೊಂಬಿನ ಕಹಳೆ ಉಯಿಲ ದಮ್ಮಟೆಯಾಗು, ಸ್ವಾಮಿಯ ಸೇವೆಯ ನಗಾರಿಯಾಗು ಹೋಗು ಪಂಚ ಲೋಹವೇ, ನೀರಂತೆ ಹರಿದುಹೋಗಿ ಪರಂಜ್ಯೋತಿಯವರ ಪಾದಸ್ಪರ್ಶ ಸ್ವೀಕರಿಸು ಹೋಗು" ಎಂದು ಹೇಳುತ್ತಾ ಕೆಳಗಿಳಿಯುತ್ತಾರೆ.

ಮುಂದುವರಿಯುತ್ತದೆ ..
ಓದಿದ ಗುರುತಾಗಿ ಒಂದು ಲೈಕ್ ಮತ್ತು ಶೇರ್ ಮಾಡಿ.
ನಿಮ್ಮ ಪ್ರೋತ್ಸಾಹವಿರಲಿ.. ಧನ್ಯವಾದಗಳು 🙏

👇ಮುಂದಿನ ಸಂಚಿಕೆಯಲ್ಲಿ (೨ ದಿನಗಳಲ್ಲಿ)
17. ಕೊಪ್ಪರಿಗೆ ಹರಿದು ನೀರಾಗಿ ಹೋಗಿ ಬಿಡುತ್ತದೆ. 

👈 ಹಿಂದಿನ ಸಂಚಿಕೆ:
15. ಬೇಟೆರಾಯ ಮುತ್ತತ್ತಿರಾಯನ ಮನ್ನಣೆ.
ನಮ್ಮ ಬ್ಲಾಗ್ ನಲ್ಲಿ ಓದಲು:
👉 https://goo.gl/Jt9bBt
ಹಿಂದಿನ ಸಂಚಿಕೆ ನಮ್ಮ ವೆಬ್ಸೈಟ್ ನಲ್ಲಿ ಓದಲು:
👉 https://goo.gl/gR1bXz
ಹಿಂದಿನ ಸಂಚಿಕೆ ನಮ್ಮ ಫೇಸ್ಬುಕ್ ಪೇಜಲ್ಲಿ ಓದಲು:
👉 https://goo.gl/cprSjq
<-------------------------->
Website: Siddappaji.com
Email: Lordsiddappaji@gmail.com

Find us: Siddappaji Lord (Admin)
Www.facebook.com/lord.siddappaji
Www.facebook.com/sri.manteswamy
Also on Twitter, Instagram & Google+

ಸಂಪೂರ್ಣ ಕಥೆ ತಿಳಿಯುವ ಆಸಕ್ತರು 👇 ಲಿಂಕ್ ಓಪನ್ ಮಾಡಿ
📓Read: https://goo.gl/aBBDN1 https://goo.gl/QYVt7o
🔊listen: https://goo.gl/hXvMdD https://goo.gl/BuXToJ https://goo.gl/e4hWAh 

No comments:

Post a Comment