15. ಬೇಟೆರಾಯ ಮುತ್ತತ್ತಿರಾಯನ ಮನ್ನಣೆ.
ಊಟಾದಿಗಳಾದ ಸಿದ್ದಯ್ಯ ನೂರೊಂದು ಬಿರುದುಗಳನ್ನೆಲ್ಲಾ ಧರಿಸಿಕೊಂಡು ಕನಸಿನಲ್ಲಿ ಮಂಟೇಸ್ವಾಮಿ ಅಪ್ಪಣೆ ಕೊಡಿಸಿದಂತ ಮುತ್ತತ್ತಿರಾಯನ ಗುಡಿಗೆ ಬರುತ್ತಾನೆ, ಮೂರು ಸೊಲ್ಲು ಹಾಕಿ ಕರೆಯುತ್ತಾನೆ ಉತ್ತರವೇ ಬರಲಿಲ್ಲ. ಸಿದ್ದಯ್ಯಸ್ವಾಮಿಗೆ ಕೋಪಬಂತು. ಆಗ "ನೀನು ಉತ್ತರ ಕೊಡದೇ ಹೋದರೆ ನಿನ್ನನ್ನು ಸುಟ್ಟು ಬಿಡುವೆ" ಎನ್ನುತ್ತಾರೆ.
ಆಗ ಮುತ್ತತ್ತಿರಾಯ ಓಡೋಡಿ ಬಂದು, ಕಾಲಿಗೆ ಎರಗಿ ಏನಾಗಬೇಕು ಈ ಕಿಂಕರನಿಂದ?" ಎನ್ನುತ್ತಾನೆ. ಅದಕ್ಕೆ ಸ್ವಾಮಿ "ನೀನು ಸಾಕಷ್ಟು ಸಿದ್ಧನಾಗಿದ್ದೀಯೆ. ನಿನ್ನ ಗುಡಿಯ ಹದಿನೆಂಟೂ ಜಾತಿಯನ್ನು ಒಂದೇ ಭಾ೦ಡದಲ್ಲಿ ಅಟ್ಟಿಣಿಸೇವ೦ತ ನಿನಗೆ ಅಡವಿನಿದ್ರೆ ಕೊಟ್ಟಿರುವವರು ಯಾರು? ಈ ಅರಣ್ಯದ ಅಧಿಕಾರವನ್ನು ಕೊಟ್ಟವರು ಯಾರು? ಎಂದು ಕೇಳುತ್ತಾರೆ. ಆಗ ಮುತ್ತತ್ತಿರಾಯ ಉತ್ತರಿಸುತ್ತಾನೆ.
"ನಾನು ಅಂಚಿನಾದೇವಿಯ ಮಗ, ಲೀಲಾ ವೇಗದ ಸಂಜೀವಿ ಸಂಚಾರಿ ರಾಮದೇವನ ಪ್ರೀತಿಯ ಭಯ, ರಾವಣನ ಕಡು ವೈರಿ, ಲಂಕೆಯನ್ನು ನನ್ನ ಬಾಲ್ಯದಲ್ಲಿ ಧಾಮ್ ಧಾಮ್ ಮಾಡಿದ ವೀರಾಧಿವೀರ. ನಮ್ಮ ತಾಯಿ ಸೀತಮ್ಮನವರು ಸಮುದ್ರದ ತೀರದಲ್ಲಿ ಕುಳಿತು ಸ್ನಾನ ಮಾಡುತ್ತಿರುವಾಗ ಅವರ ಕೊರಳಿನ ಪದಕ ಕಳಚಿ ಸಾಗರದಲ್ಲಿ ಹೋಗಿ ಬಿಟ್ಟಾಗ ನಾನು ನನ್ನ ಬಾಲವನ್ನು "ಸಮುದ್ರದ ಉದ್ದ ಅಗಲಕ್ಕೂ ಬಿಚ್ಚಿ ಆಳ ಎತ್ತರಕ್ಕೂ ಚಾಚಿ ಹುಡುಕಿ ತೆಗೆದುಕೊಟ್ಟೆ, ಆಗ ಅವರು ನನಗೆ ಮುತ್ತೂರಾಯ ಎನ್ನುವ ಅಭಿದಾನವನ್ನು ಕೊಟ್ಟರು. ಈ ಅಡವಿಯನ್ನು ಕೊಟ್ಟರು, ಈ ಅರಣ್ಯದ ತಬಸ ಕೊಟ್ಟರು."
ಆಗ ಸಿದ್ದಯ್ಯ ನನ್ನ ಇತಿಹಾಸವನ್ನು ಹೇಳಿ, ತನಗೆ ಈಗ ಬಂದಿರುವ ವಿಪತ್ತನ್ನು ವಿವರಿಸುತ್ತಾನೆ. ಮುತ್ತತ್ತಿರಾಯ ಆ ಕ್ಷಣವೇ ಸಹಾಯ ಮಾಡಲು ಸಿದ್ಧನಾಗಿ ಕಾಲಲ್ಲಿ ಗಗ್ಗರ ತಿರುಮಣಿ ಧರಿಸಿ, ಜಗದಗಲದ ಜಾಗಟೆ ಮುಗಿಉದ್ದದ ತ್ರಿಶಂಕು ಧರಿಸಿ, ಎತ್ತಲಾರದ ರಾಮ ಭಾಣವನೆ ತೊಟ್ಟು ನೀಲ ಸಿದ್ದಯ್ಯನೊಡನೆ ಹೊರಡುತ್ತಾನೆ.
ಸಿದ್ದಯ್ಯ ಬರಬರುತ್ತಾ ಯೋಚಿಸಿ, ಈತನೊಡನೆ ಕಾದಗಟ್ಟಿಯ ಪವಾಡಗೆದ್ದರೆ ಈತನಿಗೂ ಪಾಲು ಕೊಡಬೇಕಾಗುತ್ತದೆ. ಆಗ ಸ್ವಾಮಿ ಮಂಟೇದಯ್ಯ ನನ್ನ ಬಗ್ಗೆ ಕೋಪಗೊಳ್ಳುತ್ತಾರೆ_ಎಂದು ಯೋಚಿಸಿ, ಮುತ್ತತ್ತಿರಾಯನಿಗೆ ತನ್ನ ಗುಡಿಯಲ್ಲೇ ಇರಲು ತಿಳಿಸಿ ಸ್ನೇಹವಾದ ಕಾರಣ ಗೋಕುಲಾಷ್ಟಮಿಯಲ್ಲಿ ಕೊನೆದಿನ ಸಿದ್ದಪ್ಪಾಜಿಯ ಸೇವೆ ಮಾಡಿಸಲು ತಿಳಿಸಿ, ತಾನು ಚಿಕ್ಕಲ್ಲೂರು ಜಾತ್ರೆಯಲ್ಲಿ ಮುತ್ತತ್ತಿರಾಯನ ಸೇವೆ ಮಾಡುವುದಾಗಿ ಮನ್ನಣೆಯ ವಚನ ಕೊಟ್ಟು ಬೇಟೆರಾಯನ ಗುಡಿಯ ಬಳಿಬಂದು, ಆರು ಖಂಡುಗ ಭಂಗಿ ಸೇದಿ, ಊರು ಹಲಗೂರ ಮೇಲೆ ಊದಿ ಬಿಡುತ್ತಾರೆ. ಪಾಂಚಾಳಗೇರಿ ಮಂಜಿನಂತೆ ಮುಚ್ಚಿ ಹೋಗುತ್ತದೆ.
ಮುಂದುವರಿಯುತ್ತದೆ ..
ಓದಿದ ಗುರುತಾಗಿ ಒಂದು ಲೈಕ್ ಮತ್ತು ಶೇರ್ ಮಾಡಿ.
ನಿಮ್ಮ ಪ್ರೋತ್ಸಾಹವಿರಲಿ.. ಧನ್ಯವಾದಗಳು 🙏
👇ಮುಂದಿನ ಸಂಚಿಕೆಯಲ್ಲಿ (೨ ದಿನಗಳಲ್ಲಿ)
16. ಪಂಚಲೋಹದ ಗಟ್ಟಿ ಪರಂಜ್ಯೋತಿಯ ಸೇವೆಗೆ ಮೀಸಲಾಗು.
👈 ಹಿಂದಿನ ಸಂಚಿಕೆ:
14. ಕಾಳಿಗೆ ಬಸವಣ್ಣ ಬಂದಾಗ ಮುಕ್ತಿ ಮತ್ತು ಸ್ವಾಮಿ ಮಂಟೇದ ಅಯ್ಯ ಸಿದ್ದಯ್ಯನಲ್ಲಿಗೆ ದಯಮಾಡಿಸುತ್ತಾರೆ.
ನಮ್ಮ ಬ್ಲಾಗ್ ನಲ್ಲಿ ಓದಲು:
👉 https://goo.gl/41MkyR
ಹಿಂದಿನ ಸಂಚಿಕೆ ನಮ್ಮ ವೆಬ್ಸೈಟ್ ನಲ್ಲಿ ಓದಲು:
👉 https://goo.gl/gFiytS
ಹಿಂದಿನ ಸಂಚಿಕೆ ನಮ್ಮ ಫೇಸ್ಬುಕ್ ಪೇಜಲ್ಲಿ ಓದಲು:
👉 https://goo.gl/UbnVUD
<-------------------------->
Website: Siddappaji.com
Email: Lordsiddappaji@gmail.com
Find us: Siddappaji Lord (Admin)
Www.facebook.com/lord.siddappaji
Www.facebook.com/sri.manteswamy
Also on Twitter, Instagram & Google+
ಸಂಪೂರ್ಣ ಕಥೆ ತಿಳಿಯುವ ಆಸಕ್ತರು 👇 ಲಿಂಕ್ ಓಪನ್ ಮಾಡಿ
📓Read: https://goo.gl/aBBDN1 https://goo.gl/QYVt7o
🔊listen: https://goo.gl/hXvMdD https://goo.gl/BuXToJ https://goo.gl/e4hWAh
No comments:
Post a Comment