ಶ್ರೀ ಧರೆಗೆ ದೊಡ್ಡವರ ಚರಿತೆ (ಸಂಚಿಕೆ 14)

14. ಕಾಳಿಗೆ ಬಸವಣ್ಣ ಬಂದಾಗ ಮುಕ್ತಿ ಮತ್ತು ಸ್ವಾಮಿ ಮಂಟೇದ ಅಯ್ಯ ಸಿದ್ದಯ್ಯನಲ್ಲಿಗೆ ದಯಮಾಡಿಸುತ್ತಾರೆ.

ಉರಿಯುವ ಗದ್ದಿಗೆಯ ಮೇಲೆ ಊರಗಲ ನಾಲಿಗೆ ಚಾಚಿ, ಬೆಟ್ಟದಷ್ಟು ಕಣ್ಣುಬಿಟ್ಟು ಘೋರವಾನಾಗಿ ಮಲಗಿದ್ದ ಕಾಳಮ್ಮ ಸಿದ್ದಯ್ಯನನ್ನು ನುಂಗಿ ನೀರುಕುಡಿಯಲು ಬರಸಿಡಿಲಾಗಿ ಮೇಲೇಳುತ್ತಾಳೆ. ಅದನ್ನು ಕಂಡು ಸ್ವಾಮಿ, ಅವಳ ಮುಂದಲೆ ಹಿಡಿದು ರೊಯ್ಯನೆ ಸುತ್ತಿ ನೆಲಕ್ಕೆ ರಪ್ಪನೆ ಬಡಿಯುತ್ತಾರೆ. ಆಗ ಅವಳ ಎರಡೂ ಕಣ್ಣುಗಳು ಕಳೆದು ನೆಲಕ್ಕೆ ಉದುರುತ್ತವೆ ತಟ್ಟನೆ ಮಗುವಾದ ಕಾಳಮ್ಮ ಸ್ವಾಮಿಪಾದಕ್ಕೆ ನಮಸ್ಕರಿಸಿ, "ನನ್ನ ತಪ್ಪನ್ನು ಮನ್ನಿಸಿ ಕಾಪಾಡಿ, ನನ್ನ ಗ್ರಾಮವಾದ ಹಲಗೂರ ಪಾಂಚಾಳದವರನ್ನೂ ನೀವು ಬಯಸಿದರೆ ಸುಟ್ಟು ಭಸ್ಮ ಮಾಡುತ್ತೇನೆ" ಎಂದು ಹೇಳಿ, ಸಿದ್ದಯ್ಯನನ್ನು ತನ್ನ ಗದ್ದಿಗೆಯ ಮೇಲೆ ಕೂರಿಸಿ, ಆತನ ಪಾದಗಳನ್ನು ಒತ್ತುತ್ತಾ ಕೂರುತ್ತಾಳೆ.

ಆಗ ಸ್ವಾಮಿ ಅವಳ ಮೈಕೈ ದಡವಿ ಧೈರ್ಯಹೇಳಿ, "ಮಗಳೇ ಮುಂದೆ ಅಣ್ಣ ಬಸವಣ್ಣನವರು ನೀಲ ಕುದುರೆಏರಿ ತಲಕಾಡಿಗೆ ಬರುತ್ತಾರೆ ಆಗ ಸರಗೂರಿನ ಮೂಗಪ್ಪ ಕಾಣುವ್ವೆ ಬಂದ ಸ್ವಾಮಿ ಬಸವಣ್ಣನಿಗೆ ಕಲಿಯ ಸಿರಸ್ಸನ್ನುಕೊದು: ಗಂಗಳದಲ್ಲಿಟ್ಟು ಹೊಟ್ಟೆ ಬಗೆದು ಕರುಳಂಕಿತ ರುಂಡಮಾಲೆ ಹಾಕಿಕೊಂಡು, ಕರುಳಿನ ಸುತ್ತಲು ಕೊಬ್ಬನ್ನು ಕಿತ್ತಾ ಪಂಚಾರತಿ ಎತ್ತುತ್ತಾರೆ. ಉತ್ತರದಲ್ಲಿ ಬರ ಗುಡುಗುತ್ತದೆ ಆಗ ನಮ್ಮ ಸ್ವಾಮಿ ಮಂಟೇದಯ್ಯ ತನ್ನ ಧ್ಯಾನದಿಂದ ಬಹಿರ್ಮುಖನಾಗುತ್ತಾರೆ. ಅಣ್ಣ ಬಸವಣ್ಣ ಇತ್ತ ಬಂದಿರುವುದರ ಅರಿವಾಗಿ ಅವರನ್ನೂ ಹುಡುಕಿಕೊಂಡು ಬಂದು, ಅವರನ್ನು ಕೂಡಿಕೊಳ್ಳುತ್ತಾರೆ. ಆಗ ನನ್ನನ್ನು ಹತ್ತಿರ ಕರೆದು ಪಾಂಚಾಳಗೇರಿಯಲ್ಲಿ ನೀನು ಭಿಕ್ಷೆಗಾಗಿ ಹೋಗಿದ್ದೆಯಲ್ಲ_ಅದರ ಕುರುಹನ್ನು ಕೊಡುವೆಯಾ ಎಂದು ಕೇಳುತ್ತಾರೆ. ಆಗ ನೀನು ಕಣ್ಣಿಲ್ಲದ ಕಾಳಮ್ಮನಾಗಿ ಅವರ ಬಳಿ ಬಂದು ನಿನ್ನ ಮುಕ್ತಿಯನ್ನು ಗಳಿಸಿಕೋ" ಎಂದುಬಿಡುತ್ತಾರೆ.

:: ಸ್ವಾಮಿ ಮಂಟೇದ ಅಯ್ಯ ಸಿದ್ದಯ್ಯನಲ್ಲಿಗೆ ದಯಮಾಡಿಸುತ್ತಾರೆ ::

ಪಂಚಲೋಹದ ಗಟ್ಟಿ ಕಾದು ಕುದಿಯತೊಡಗುತ್ತದೆ. ಅದು ಸಿದ್ದಯ್ಯನಿಗೆ ಅರಿವಾಗಿ ತುಂಬಾ ದುಃಖವಾಗುತ್ತದೆ. ಕುಂದೂರನ್ನು ಬಿಟ್ಟು ಮೂರು ತಿಂಗಳಾಯಿತು. ಅನ್ನ ನೀರು ನಿದ್ದೆಗಳೇ ಇಲ್ಲದೆ ಪವಾಡದ ಮೇಲೆ ಪವಾಡ ಮಾಡುತ್ತಿದ್ದೇನೆ. ನನ್ನ ಸ್ವಾಮಿಗೆ ನನ್ನ ಕಷ್ಟದ ಅರಿವೇ ಇಲ್ಲ ಎಂದು ಕೊಳ್ಳುತ್ತಿರುವಂತೆಯೇ ನಿದ್ದೆ ಬರುತ್ತದೆ. ನಿದ್ದೆಯಲ್ಲಿ ಸ್ವಾಮಿ ಕಾಣಿಸಿಕೊಂಡು ಅನ್ನ ಆಹಾರಾದಿಗಳನ್ನು ಭಂಗಿ ಹೊಗೆ ಸೊಪ್ಪನ್ನು ಕೊಡುತ್ತಾರೆ. "ನಿಮಗೆ ಪರಮ ಸುಖ ಕಾದಿದೆ ಸಿದ್ದಯ್ಯನವರೇ ಏಳಿ, ಎಂದು ಹೇಳುತ್ತಾರೆ. ಕಣ್ಣನ್ನು ತೆರೆದರೆ ಸ್ವಾಮಿ ಕನಸಲ್ಲಿ ಕೊಟ್ಟಿದ್ದೆಲ್ಲವೂ ಈಗಲೂ ಬದಿಯಲ್ಲಿ ಸಾಕ್ಷಾತ್ತಾಗಿ ಇವೆ ಅಪಾರವಾದ ಧೈರ್ಯಬಂದು, ಸರ್ರನೆ ಮೇಲೆದ್ದು, ಮಾಯದಲ್ಲಿ ಕೊಳಕ್ಕೆ ಹೋಗಿ ಸ್ನಾನಮಾಡಿ, ಪೂಜೆ ಮಾಡಿ, ಧ್ಯಾನ ಮಾಡಿ, ಎಡೆಸಲ್ಲಿಸಿ ತಾವು ಊಟ ಮಾಡುತ್ತಾರೆ, ಆಗ ಸ್ವಾಮಿ ಆದೇಶವನ್ನು ಆಕಾಶವಾಣಿಯಾಗಿ ಗುಡುಗಿ ಹೇಳಿ ಮುಂದಿನ ಕರ್ತವ್ಯವನ್ನು ನಿರ್ದೇಶಿಸುತ್ತಾರೆ.

ಮುಂದುವರಿಯುತ್ತದೆ ..
ಓದಿದ ಗುರುತಾಗಿ ಒಂದು ಲೈಕ್ ಮತ್ತು ಶೇರ್ ಮಾಡಿ.
ನಿಮ್ಮ ಪ್ರೋತ್ಸಾಹವಿರಲಿ.. ಧನ್ಯವಾದಗಳು 🙏

👇ಮುಂದಿನ ಸಂಚಿಕೆಯಲ್ಲಿ (೨ ದಿನಗಳಲ್ಲಿ)
15. ಬೇಟೆರಾಯ ಮುತ್ತತ್ತಿರಾಯನ ಮನ್ನಣೆ.

👈 ಹಿಂದಿನ ಸಂಚಿಕೆ:
13. ಈ ಭೂಲೋಕದ ದೇವರೆಲ್ಲ ನಮಗೆ ಮಕ್ಕಳಾಗಿದ್ದಾರೆ; ನೀನು ಎಂದರೆ ನಿನಗೊಬ್ಬ ಗುರು ಎಂದರೆ ಏನು?
ನಮ್ಮ ಬ್ಲಾಗ್ ನಲ್ಲಿ ಓದಲು:
👉 https://goo.gl/7od6tq
ಹಿಂದಿನ ಸಂಚಿಕೆ ನಮ್ಮ ವೆಬ್ಸೈಟ್ ನಲ್ಲಿ ಓದಲು:
👉 https://goo.gl/5FJCJ8
ಹಿಂದಿನ ಸಂಚಿಕೆ ನಮ್ಮ ಫೇಸ್ಬುಕ್ ಪೇಜಲ್ಲಿ ಓದಲು:
👉 https://goo.gl/rEKwJS
<-------------------------->
Website: Siddappaji.com
Email: Lordsiddappaji@gmail.com

Find us: Siddappaji Lord (Admin)
Www.facebook.com/lord.siddappaji
Www.facebook.com/sri.manteswamy
Also on Twitter, Instagram & Google+

ಸಂಪೂರ್ಣ ಕಥೆ ತಿಳಿಯುವ ಆಸಕ್ತರು 👇 ಲಿಂಕ್ ಓಪನ್ ಮಾಡಿ
📓Read: https://goo.gl/aBBDN1 https://goo.gl/QYVt7o
🔊listen: https://goo.gl/hXvMdD https://goo.gl/BuXToJ https://goo.gl/e4hWAh 

No comments:

Post a Comment