ಶ್ರೀ ಧರೆಗೆ ದೊಡ್ಡವರ ಚರಿತೆ (ಸಂಚಿಕೆ 13)

13. ಈ ಭೂಲೋಕದ ದೇವರೆಲ್ಲ ನಮಗೆ ಮಕ್ಕಳಾಗಿದ್ದಾರೆ; ನೀನು ಎಂದರೆ ನಿನಗೊಬ್ಬ ಗುರು ಎಂದರೆ ಏನು?

ಹಲಗೂರಿನ ಪಾಂಚಾಳರ ಕೇರಿಗೆ ಬಂದ ಸಿದ್ದಪ್ಪಾಜಿ ಗುಟರೆ ಹೊಡೆದು ತೂಗುತ್ತಾರೆ. ಇಡೀ ಊರಿಗೆ ಬರಸಿಡಿಲು ಬಡಿದಂತೆ ಆಗುತ್ತದೆ. ಏಳು ಕೇರಿಯ ಏಳು ದಣಿಗಳು ನಂದಿ ಹಜಾರದಲ್ಲಿ ಕುಳಿತು ಪಗಡೆ ಯಾಡುತ್ತಿದ್ದವರು ಬೆಚ್ಚಿ ಬೀಳುತ್ತಾರೆ. ಯಾವ ಕರಿಮಾರಿ ಊರಿಗೆ ನುಗ್ಗಿದಳಪ್ಪ, ಏನೇನು ತೊಂದರೆ ಕೊಡಲಿರುವಳೋ ಎಂದು ತೆಪ್ಪಗಾಗುತ್ತಾರೆ. ಹಾಗೆಯೇ ಸಂಭವಿಸಬಹುದಾದ ವಿಪತ್ತನ್ನು ಕುರಿತು ಯೋಚಿಸುತ್ತಾರೆ. ಅವರಿಗೆ ಏನೂ ತೋಚದಾಗುತ್ತದೆ.
  ಸಿದ್ದಪ್ಪಸ್ವಾಮಿ ಊರ ಅಂಗಳಕ್ಕೆ ಬಂದು ಡಂಗೂರ ಭಾರಿಸಿ "ದಾನ ಕೊಟ್ಟವರಿಗೆ ಕಣದ ಜೋಳಿಗೆ ಹೊನ್ನಾಗಲಿ, ಭಿಕ್ಷೆ ಕೊಟ್ಟವರಿಗೆ ಲಕ್ಷ ಭಾಗ್ಯ ಆಗಲಯ್ಯ"__ ಎಂದು ಸಾರುತ್ತಾರೆ. ಊರ ಜನ ಭಿಕ್ಷಕ್ಕೆ ಎಂದೂ ಬಾರದ ಅಯ್ಯ ಬಂದಿರುವುದು ಕಂಡ, ಅವನ ಮೈ ಮೇಲೆ ಇರುವ ಹಾವು ಚೇಳುಗಳ ಕಂಡು, ಬಿರುದು ಭಿಕ್ಷದ ಜೋಳಿಗೆ ಕಂಡು ಊರು ಕೇರಿಯ ಜನ ಬಿದ್ದು ಬಿದ್ದು ನಗುತ್ತಾರೆ. ದೇವರು ಎಂದೇ ಅರಿಯದ ಆ ಜನರು ಭಿಕ್ಷೆಯನ್ನು ಕರುಣಿಸುವ ತಂಟೇಗೇ ಹೋಗಲಿಲ್ಲ. ಸಿದ್ದಯ್ಯನನ್ನೂ ಯಾರು ನೀನು ಎಂದು ಕೇಳಲಿಲ್ಲ. ಏಳು ಜನ ಧಣಿಗಳು ಅವನತ್ತ ತಮ್ಮ ಗಮನವನ್ನೂ ಹರಿಸದೇ ತಮ್ಮ ಪಾಡಿಗೆ ತಾವುಗಳು ಪಗಡೆಯಾಡುತ್ತಾ ಇದ್ದು ಬಿಡುತ್ತಾರೆ.

ಕೇರಿ ಕೇರೆಗಳನ್ನೆಲ್ಲಾ ಸುತ್ತಿದ ಸಿದ್ದಯ್ಯ ಕಟ್ಟೆ ಕಡೆಯ ಕುಲುಮೆಯ ಬಳಿ ಒಬ್ಬ ಹಣ್ಣು ಹಣ್ಣು ಮುದುಕ ತಾನಾಗಿಯೇ ಮಾತಕನಾಡಿಸುತ್ತಾನೆ.
"ಯಾರಪ್ಪ ನೀನು? ನಿನ್ನ ಊರು ಕೇರಿಗಳಾವುವು? ಏಕೆ ಬಂದಿದ್ದೀಯೇ".
  "ಭೂಮಿಗೇ ದೊಡ್ಡವರು ಬಂದು ನಡುರಾಜ್ಯದಲ್ಲಿ ಪವಡಿಸಿದ್ದಾರೆ. ಅವರು ಕಬ್ಬಿಣದ ಭಿಕ್ಷೆ ಬಯಸಿ ನನ್ನನ್ನು ನಿಮ್ಮಲ್ಲಿಗೆ ಕಳುಸಿದ್ದಾರೆ. ಪ್ರತಿ ಕುಲುಮೆಯವರೂ ಕಬ್ಬಿಣದ ಭಿಕ್ಷೆ ನೀಡಿ, ನನಗೆ ಬೇಕಾದ ಒಂಭತ್ತು ನಗಗಳನ್ನು ಮಾಡಿಕೊಡಿ".
"ನಾನು ಚಾಕರಿ ಮಾಡುವ ಮುದುಕ. ಊರಿಗೆ ಏಳು ಜನ ದಣಿಗಳಿದ್ದಾರೆ. ಅವರಿಗೆ ಕೇಳಪ್ನ, ಹೋಗಿ. ನೀನು ಅವರುಗಳ ಅರಮನೆಗೆ ಹೋಗಿ ಕೇಳುವುದಕ್ಕೆ ಆಗುವುದಿಲ್ಲ, ಆದ್ದರಿಂದ ಅವರು ದಿನದ ಊಟ ಮುಗಿಸಿ, ಪಲ್ಲಕ್ಕಿ ಏರಿ ನಂದಿ ಹಜಾರಕ್ಕೆ, ಗಂಧದ ಚಾವಡಿಗೆ ಬಂದು ಏಳು ಚಿನ್ನದ ಕುರ್ಚಿಗಳಲ್ಲಿ ಕುಳಿತುಕೊಂಡು. ಏಳುನೂರೈವತ್ತು ಒಕ್ಕಲನ್ನೂ ಕರೆದು ಸಂಬಳ ಕೊಡುವಾಗ ನೀನು ನಿನ್ನ ಭಿಕ್ಷೆ ಬೇಡು ನಿನ್ನ ಕೆಲಸ ಆದರೂ ಆದೀತು".

ಸ್ವಾಮಿ ಸಿದ್ದಯ್ಯ ಮುದುಕನ ಮಾತಿನಂತೆಯೇ ಹುಲಿ ಚರ್ಮ ಹಾಸಿಕೊಂಡು ಹುಲಿಯ ಚರ್ಮ ಹೊದ್ದುಕೊಂಡು ಮಗ್ಗುಲಾಗಿ ಮಲಗಿ ಪಾಂಚಾಳದ ಏಳು ಜನ ಧಣಿಗಳು ಸಂಬಳದ ಬಟವಾಡೆಗಾಗಿ ಬರುವು ದಿನ, ಕಾಯುತ್ತ ಇರುತ್ತಾರೆ. ಆ ವೇಳೆ ಮರುದಿನ ಮಧ್ಯಾಹ್ನ ಬರುತ್ತದು ಸಿದ್ದಪ್ಪಾಜಿ ಸಕಲ ವೈಭವದಿಂದ ಚಾವಡಿಗೆ ಬಂದ ಧಣಿಗಳ ಬಳಿ ಬಂದು, "ಹಲಗೂರಿನ ಪಾಂಚಾಳದವರೇ, ನಿಮಗೆ ಲಕ್ಷಕ್ಕೆ ಬೆಲೆ ಇಲ್ಲ, ನೀವು ಧರ್ಮದ ಬುದ್ಧಿಯಿಂದ- ಭೂಮಿಗೆ ದೊಡ್ಡವರು ಬಂದ ನಡು ರಾಜ್ಯದಲ್ಲಿ ಮಠಮಾನ್ಯಗಳನ್ನು ಕಟ್ಟುತ್ತಿದ್ದಾರೆ ಅವರಿಗೆ ಕಬ್ಬಿಣದ ಭಿಕ್ಷೆ ಪಾತಾಳ ಬಾವಿ ತೆಗೆಯಲು ಬೇಕಾದ ನಗಗಳನು ಕೊಡಿ_ನಿಮಗೆ ಈಗ ಇರುವ ಸಂಪತ್ತು ಮತ್ತಷ್ಟು ಹೆಚ್ಚುತ್ತದೆ. ನಿಮ್ಮನ್ನು ಧರೆಗೆ ದೊಡ್ಡವರು ಆಶೀರ್ವಾದ ಮಾಡುತ್ತಾರೆ" ಎಂದು ಹೇಳುತ್ತಾರೆ. ಅದಕ್ಕೆ ಪಾಂಚಾಳದ ಧನಿಗಳು "ನಾವು ಕಾಲಲ್ಲಿ ಮೆಟ್ಟಿ ಉಳಿಯಲ್ಲಿ ಬಡಿದು ಕಡೆಯುವ ಕಲ್ಲೆ ನಿಮ್ಮೆಲ್ಲರಿಗೆ ದೇವರು ಈ ದೇವರುಗಳು ನಿಮ್ಮಿ_ಕರುಣೆಯ ಕಂದಮ್ಮಗಳು. ನಿಮ್ಮ ಉಳಿಯೇ ತಗುಲದ ಲಿಂಗವಿದ್ದರೆ ಹೇಳು ಆ ಲಿಂಗಕ್ಕೆ ನಾವು ಶಿಶುಮಗ ಆಗುತ್ತೇವೆ, ಮತ್ತು ನಾವು ಏಳುನೂರೈವತ್ತು ಒಕ್ಕಲೂ ಸೇರಿ ನಿಮಗೆ ಕೊಡುವ ಕುಲುಮೆಯ ಕಬ್ಬಿಣವನ್ನು ನೀನು ಹಿಡಿಯಬಲ್ಲೆಯಾದರೆ ನಿನಗೆ ನಿನ್ನ "ಭಿಕ್ಷೆ ಸಿಗುತ್ತದೆ" ಎಂದು ಮೂದಲಿಸಿ ಹೇಳುತ್ತಾರೆ ಸಿದ್ದಯ್ಯ ಒಪ್ಪುತ್ತಾನೆ. ಆಗ ಆತನನ್ನು ಕರೆದುಕೊಂಡು ಹೋಗಿ ಹೆಗ್ಗುಲುಮೆಯಲ್ಲಿ ಕಾದು ನೀರಾಗಿದ್ದ ಕಬ್ಬಿಣವನ್ನು ಅವನತ್ತ ಎರಚುತ್ತಾರೆ. ಸಿದ್ದಯ್ಯ ಅದನ್ನು ಎರಡೂ ಕೈಗಳಲ್ಲಿ ಹಿಡಿದು, ಕಣ್ಣಿಗೆ ಒತ್ತಿಕೊಂಡು", ನಮ್ಮ ಧರೆಗೆ ಹಿರಿಯರ ಕೆಲಸಕ್ಕೆ ಎಷ್ಟು ಕಬ್ಬಿಣ ಸಾಕು" ಎಂದು ಜೋಳಿಗೆ ಇಟ್ಟುಕೊಳ್ಳುತ್ತಾರೆ.

  ಇದನ್ನು ನೋಡಿದ ಪಾಂಚಾಳದವರು "ಇದನ್ನೆಲ್ಲಾ ನಾವು ಪವಾಡವೆಂದು ಒಪ್ಪುವುದಿಲ್ಲ. ನಾವು ನಮ್ಮ ತಲಕಾಡಜರಾರಿಗೆ ಪಿರಂಗಿ ಮಾಡಲು ಎತ್ತಿನಗಾತ್ರದ ಕಬ್ಬಿಣವನ್ನು ಕಾಯುಸುತ್ತಿದ್ದೇನೆ, ಅದರಉರಿಗೆ ಲೋಕವೊ ನಡುಗುತ್ತಿದೆ, ನೀನು ಅದರ ಮೇಲೆ ಕೂರುವುದೇ ಆದರೆ ನಿನ್ನನ್ನು ಮೆಚ್ಚುತ್ತೇವೆ" ಎನ್ನುತ್ತಾರೆ ಅದಕ್ಕೆ ಉತ್ತರವಾಗಿ ಸಿದ್ದಯ್ಯ ಆಗಲಿ ಎಂದು ಒಪ್ಪಿ ಎತ್ತಿನ ಗಾತ್ರದ ಗಟ್ಟಿ ಕಾಯುತ್ತಿದ್ದ ಸ್ಥಳಕ್ಕೆ ಬಂದು, ಅದನ್ನು ಕಾಲಿನಿಂದ ಒದ್ದು ಅದು ಚಿಲ್ಲಾಪುರದಲ್ಲಿ ಎರಗಿ ಬೀಳುವಂತೆ ಮಾಡಿ ಹೇಳುತ್ತಾರೆ: "ಪಂಚ ಲೋಹಗಳನ್ನು ಸಾವಿರ ಬಂಡಿಗಳಲ್ಲಿ ತಂದು, ಸಾವಿರ ಕೋಣದ ತಿದಿಯಮಾಡಿ, ಕೋಟಿ ಕಂಡುಗ ಬಿದಿರ ಇದ್ದಿಲುಮಾಡಿ ಪಂಚಲೋಹಗಳನ್ನು ಊರ ಬೆಟ್ಟದ ಬದಿಯಲ್ಲಿ ಕಾಸಿ, ಅದು ಸಾಮಕ್ಕಿಯ೦ತೆ ಕೊತಕೊತನೆ ಮರಳುವಂತೆ ಮಾಡಿ, ಆಗ ನಾನು ನನ್ನ ಸತ್ಯವನ್ನು ತೋರಿಸುತ್ತೇನೆ. ಹಾಗೆ ನೀವು ಮಾಡದೇ ಹೋದರೆ ನೀವು ಪಾಂಚಾಳರೇ ಅಲ್ಲ" ಎನ್ನುತ್ತಾರೆ. ರೇಗಿಹೋದ ಏಳು ಜನ ಪಾಂಚಾಳರು ಸಿದ್ದಯ್ಯನನ್ನು ಹಿಡಿಸಿ, ಊರ ಕಾಳಿಯ ಗುಡಿಗೆ ನೂಕಿಬಿಟ್ಟು ಬೀಗ ಹಾಕಿ, ಬಿಚ್ಚುಗತ್ತಿ ಪಾರ  ಇಟ್ಟುಬಿಡುತ್ತಾರೆ.

ಮುಂದುವರಿಯುತ್ತದೆ ..
ಓದಿದ ಗುರುತಾಗಿ ಒಂದು ಲೈಕ್ ಮತ್ತು ಶೇರ್ ಮಾಡಿ.
ನಿಮ್ಮ ಪ್ರೋತ್ಸಾಹವಿರಲಿ.. ಧನ್ಯವಾದಗಳು 🙏

👇ಮುಂದಿನ ಸಂಚಿಕೆಯಲ್ಲಿ (೨ ದಿನಗಳಲ್ಲಿ)
14. ಕಾಳಿಗೆ ಬಸವಣ್ಣ ಬಂದಾಗ ಮುಕ್ತಿ ಮತ್ತು ಸ್ವಾಮಿ ಮಂಟೇದ ಅಯ್ಯ ಸಿದ್ದಯ್ಯನಲ್ಲಿಗೆ ದಯಮಾಡಿಸುತ್ತಾರೆ. 

👈 ಹಿಂದಿನ ಸಂಚಿಕೆ:
12. ಹಲಗೂರು ಪಾಂಚಾಳಗೇರಿಗೆ ಹೋಗಿಬಾರೋ ಘನನೀಲಿ.
ನಮ್ಮ ಬ್ಲಾಗ್ ನಲ್ಲಿ ಓದಲು:
👉 https://goo.gl/wn21o8
ಹಿಂದಿನ ಸಂಚಿಕೆ ನಮ್ಮ ವೆಬ್ಸೈಟ್ ನಲ್ಲಿ ಓದಲು:
👉 https://goo.gl/BkwXj4
ಹಿಂದಿನ ಸಂಚಿಕೆ ನಮ್ಮ ಫೇಸ್ಬುಕ್ ಪೇಜಲ್ಲಿ ಓದಲು:
👉 https://goo.gl/8f4jkn
<-------------------------->
Website: Siddappaji.com
Email: Lordsiddappaji@gmail.com

Find us: Siddappaji Lord (Admin)
Www.facebook.com/lord.siddappaji
Www.facebook.com/sri.manteswamy
Also on Twitter, Instagram & Google+

ಸಂಪೂರ್ಣ ಕಥೆ ತಿಳಿಯುವ ಆಸಕ್ತರು 👇 ಲಿಂಕ್ ಓಪನ್ ಮಾಡಿ
📓Read: https://goo.gl/aBBDN1 https://goo.gl/QYVt7o
🔊listen: https://goo.gl/hXvMdD https://goo.gl/BuXToJ https://goo.gl/e4hWAh 

No comments:

Post a Comment