12. ಹಲಗೂರು ಪಾಂಚಾಳಗೇರಿಗೆ ಹೋಗಿಬಾರೋ ಘನನೀಲಿ.
ಪ್ರಭು ಮಂಟೇಸ್ವಾಮಿ ಸಿದ್ದಪ್ಪಾಜಿಯನ್ನು ಕರೆದು, ಮೈದಡವಿ ಹೇಳುತ್ತಾರೆ:
"ಸಿದ್ದಯ್ಯ ಸ್ವಾಮಿಗಳೇ, ನಮಗೆ ಸೂರ್ಯಚಂದ್ರರೇ ನಮ್ಮ ಮಠದ ದೀವಟಿಗೆಗಳಾಗಬೇಕು; ಗುಡುಗು ಮಿಂಚು ನಮ್ಮ ಪಾಲಿನ ಶಂಕು ಜಾಗಟೆಗಳಾಗಬೇಕು; ನಕ್ಷತ್ರಗಳೇ ನಮ್ಮ ಸೂರಿನ ಕಿಂಡಿಗಳಾಗಬೇಕು; ಭೂಮಿಯ ತೊಟ್ಟಿಲಲ್ಲಿ ನಾವು ಮಲಗಿ ನಿದ್ರಿಸುವಾಗ ಆಕಾಶವೇ ಹೊದ್ದಿಕೆಯಾಗಲೇಬೇಕು; ಪಾತಾಳ ಲೋಕದಲ್ಲಿನ ನಮ್ಮ ಪಾದಗಳಿಗೆ ಪ್ರತಿ ಝಾವವೂ ಪಾದ ಪೂಜೆ ಆಗಬೇಕು; ಮೇಲ್ಗಡೆಯ ಲೋಕದಲ್ಲಿ ನಮ್ಮ ಮುಡಿಯ ಪೂಜೆ ನಡೆಯಬೇಕು; ಈ ನಡುವೆಯ ರಾಜ್ಯದಲ್ಲಿ ನಮ್ಮ ಪಾಲಿಗೆ ಲಿಂಗಪೂಜೆ ಆಗಲೇಬೇಕು; ಇದೆಲ್ಲದರ ಸಲುವಾಗಿಯೇ ಮಠದ ಮುಂದೆ ಒಂದು ಸುಂದರವಾದ ತೋಪಾಗಬೇಕು. ಇದಕ್ಕಾಗಿ ನೀವು ಹಲಗೂರಿನ ಪಾಂಚಾಳಗೇರಿಗೆ ಹೋಗಿ ಕಬ್ಬಿಣದ ಭಿಕ್ಷೆಬೇಡಿ ತರಬೇಕು.
"ಹಲಗೂರು ಪಾಂಚಾಳಗೇರಿಯಲ್ಲಿ ಏಳುನೂರೈವತ್ತು ಒಕ್ಕಲುಗಳಿವೆ ಏಳುನೂರೈವತ್ತು ಒಕ್ಕಲಿಗೆ ಏಳು ಬೀದಿಗಳಿವೆ. ಏಳು ಬೀದಿಗೂ ಏಳುಜನ ಧಣಿಗಳಿದ್ದಾರೆ, ಅಲ್ಲಿ ಚಿನ್ನದ ಹೊಗೆಯಾವಾಗಲೂ ಆಡುತ್ತಲೇ ಇರುತ್ತದೆ. ಅವರಿಂದ ಕೇಳಿ ಪಡೆದ ಭಿಕ್ಷೆಗಳಿಂದ ಚಿನ್ನದ ತೂಗುದೀವಿಗೆ ಚಿನ್ನದ ಸರಪಣಿ, ಕಬ್ಬಿಣದ ಚಿಲಕಾದಿಗಳನ್ನು ಮಾಡಿಸಿಕೊಂಡು ಬರಬೇಕು
ಆಗ ಸಿದ್ದಯ್ಯ ಸ್ವಾಮಿ ಬೆಚ್ಚಿಬಿದ್ದು, ಪ್ರಭು ಅವರು ದೈವಾರಾಧಕರಲ್ಲ, ಸುಸಂಸ್ಕೃತರಲ್ಲ. ಮಠ ಸ್ವಾಮಿಗಳೆಂದರೆ ನಮ್ಮ ಬಿರುದು ಬಾವಲಿಗಳೆಂದರೆ ಅವರು ಅವಹೇಳನ ಮಾಡಿ ನಗುತ್ತಾರೆ. ಗೇಲಿಮಾಡಿಕೊಳ್ಳುತ್ತಾರೆ ದಯವಿಟ್ಟು ಪರಗೂರಿನ ಪಾಂಚಾಳರಲ್ಲಿಗೆ ಮಾತ್ರ ಕಳುಹಿಸಬೇಡಿ ಎಂದೆಲ್ಲಾ ಹೇಳುತ್ತಾರೆ. ಪ್ರಭು ಮಣಿಯುವುದೇ ಇಲ್ಲ __ಮಠ ಬಿಟ್ಟು ಧರ್ಮ ಕಾರ್ಯವನ್ನು ಮಾಡಲು ತೀರಬೇಕೆಂದು ಆಜ್ಞಾಪಿಸಿಬಿಡುತ್ತಾರೆ.
ಆಗ ಸಿದ್ದಪ್ಪಾಜಿ ತೋಪಿನ ದೊಡ್ಡಮ್ಮ ತಾಯಿಯ ಬಳಿಗೆ ಬಂದು "ನನ್ನನ್ನು ಕಾಪಾಡು ತಾಯಿ" ಎಂದು ಬೇಡಿಕೊಳ್ಳುತ್ತಾರೆ. ನೆಲದ ಒಡಲಿಂದ ಆಕೆ ಅಭಯ ಕೊಡುತ್ತಾಳೆ: ಹೆದರದೆ ಹೋಗಿ ಬನ್ನಿ ಸಿದ್ದಪ್ಪಯ್ಯ ನಮ್ಮ ಮಂಟೇದ ಸ್ವಾಮಿಗೆ ಎಲ್ಲವೂ ಗೊತ್ತಿದೆ, ನಿಮಗೆ ಎಲ್ಲರ ಆಶೀರ್ವಾದವಿದೆ. ಕೆಂಡಗಣ್ಣ ರಾಜಪ್ಪಾಜಿ ನಿಮ್ಮ ಮಂಡೆಯಲ್ಲಿದ್ದಾರೆ, ನಿಮ್ಮ ಉದರದಲ್ಲಿ ನಾನು ಇದ್ದೇನೆ. ನಿಮ್ಮ ಮೈಯಿನ ಕೂದಲು ಕೂಡ ಕೊಂಕುವುದಿಲ್ಲ. ಅವರೆಲ್ಲಾ ನಿಮ್ಮ ಒಕ್ಕಲಾಗುತ್ತಾರೆ. ನಿಮ್ಮ ಪಾದ ಸೇವೆ ಮಾಡುತ್ತಾರೆ. ನಿಮ್ಮ ಮಠಕ್ಕೆ ಕಪ್ಪಕಾಣಿಕೆ ಕೊಡುತ್ತಾರೆ.
ಆಗ ಸ್ವಾಮಿ ಸಿದ್ದಯ್ಯ ಕುಂದೂರು ಬೆಟ್ಟದ ಕಾಳಿಂಗನ ಗವಿಯಲ್ಲಿ ಬಾಗಿಲಿನ ಏಳು ಜನ ಋಷಿಗಳ ಬಳಿಗೆ ಬಂದು ಅವರಿಂದ ಭಂಗೀಸೊಪ್ಪನ್ನು ದೊಡ್ಡ ಚೆಲುವೇಗೆ ತುಂಬಿಸಿಕೊಂಡು ಎಡೆಬಿಡದೆ ಸೇದುತ್ತಾರೆ. ಕುಂದೂರು ಬೆಟ್ಟ ಮಂಜು ಕವಿದಂತೆ ಆಗುತ್ತದೆ. ಆಗ, ಸ್ವಾಮಿ ಸಿದ್ದಪ್ಪಾಜಿಗೆ ಲೀಲಾ ವಿನೋದ ಜ್ಞಾನೋದಯ ಮೂಡತೊಡಗುತ್ತದೆ. ಆ ಲೀಲಾವಿಲಾಸದಲ್ಲಿ ತೂಗಾಡುತ್ತಾ, ಓಲಾಡುವ ವೈಭವದಲ್ಲಿ ಬೆಟ್ಟದ ಮೇಲೆ ನಿಂತು ಹಲಗೂರನ್ನು ಪೂರ್ವಕ್ಕೆ ಗುರುತಿಸುತ್ತಾರೆ. ಊರು ಚಿನ್ನದ ಹೊಗೆಯಲ್ಲಿ ಕವಿದುಹೋಗಿರುತ್ತದೆ. ಚಿನ್ನದ ಗೋಪುರಕ್ಕೆ ರತ್ನ ವಜ್ರ ವೈಢೂರ್ಯಗಳನ್ನು ಬಿಗಿದಿರುವುದು ಕಾಣುತ್ತದೆ.
ಸುಟ್ಟ ಶುಕ್ರವಾರ ಮಧ್ಯಾಹ್ನ ಕುಂದೂರು ಬೆಟ್ಟ ಇಳಿದು ಹಲಗೂರಿನ ಪಾಂಚಾಳರ ಕೇರಿಯತ್ತ ಸಾಗತೊಡಗುತ್ತಾರೆ.
ಮುಂದುವರಿಯುತ್ತದೆ ..
ಓದಿದ ಗುರುತಾಗಿ ಒಂದು ಲೈಕ್ ಮತ್ತು ಶೇರ್ ಮಾಡಿ.
ನಿಮ್ಮ ಪ್ರೋತ್ಸಾಹವಿರಲಿ.. ಧನ್ಯವಾದಗಳು 🙏
👇ಮುಂದಿನ ಸಂಚಿಕೆಯಲ್ಲಿ (೨ ದಿನಗಳಲ್ಲಿ)
13. ಈ ಭೂಲೋಕದ ದೇವರೆಲ್ಲ ನಮಗೆ ಮಕ್ಕಳಾಗಿದ್ದಾರೆ; ನೀನು ಎಂದರೆ ನಿನಗೊಬ್ಬ ಗುರು ಎಂದರೆ ಏನು?
👈 ಹಿಂದಿನ ಸಂಚಿಕೆ:
11. ಶ್ರೀ ಸಿದ್ದಪ್ಪಾಜಿಯ ಮಹಾತ್ಮೆ.
ನಮ್ಮ ಬ್ಲಾಗ್ ನಲ್ಲಿ ಓದಲು:
👉 https://goo.gl/oDxYuE
ಹಿಂದಿನ ಸಂಚಿಕೆ ನಮ್ಮ ವೆಬ್ಸೈಟ್ ನಲ್ಲಿ ಓದಲು:
👉 https://goo.gl/8zfLR2
ಹಿಂದಿನ ಸಂಚಿಕೆ ನಮ್ಮ ಫೇಸ್ಬುಕ್ ಪೇಜಲ್ಲಿ ಓದಲು:
👉 https://goo.gl/aMiJBP
<-------------------------->
Website: Siddappaji.com
Email: Lordsiddappaji@gmail.com
Find us: Siddappaji Lord (Admin)
Www.facebook.com/lord.siddappaji
Www.facebook.com/sri.manteswamy
Also on Twitter, Instagram & Google+
ಸಂಪೂರ್ಣ ಕಥೆ ತಿಳಿಯುವ ಆಸಕ್ತರು 👇 ಲಿಂಕ್ ಓಪನ್ ಮಾಡಿ
📓Read: https://goo.gl/aBBDN1 https://goo.gl/QYVt7o
🔊listen: https://goo.gl/hXvMdD https://goo.gl/BuXToJ https://goo.gl/e4hWAh
No comments:
Post a Comment