ಶ್ರೀ ಧರೆಗೆ ದೊಡ್ಡವರ ಚರಿತೆ (ಸಂಚಿಕೆ 26)

26. ಹಿರಿಯ ಗುರು ರಾಜೇಂದ್ರಸ್ವಾಮಿ ಮತ್ತು ರಾಜ ಪಟ್ಟದ ವೀರಭದ್ರಸ್ವಾಮಿಗಳಿಗೆ ಸ್ವಾಮಿ ನೆಲೆತೋರಿಸುತ್ತಾರೆ.

ಹಿರಿಯಗುರು ರಾಜೇಂದ್ರಸ್ವಾಮಿಗಳು ಮತ್ತು ರಾಜಪಟ್ಟದ ವೀರಭದ್ರಸ್ವಾಮಿಗಳಿಗೆ ಆಶೀರ್ವಚನವನ್ನು ಆದಿಮೂರ್ತಿ ದಯಪಾಲಿಸುತ್ತಾ,
  "ನಿಮಗೆ ನಾವು ಬಸವನ ಬೆಟ್ಟವನ್ನು ಬೆಳ್ಳಿಯನ್ನಾಗಿಯೂ ಕುಂದೂರು ಬೆಟ್ಟವನ್ನು ಚಿನ್ನವನ್ನಾಗಿಯೂ ಮಾಡಿಕೊಡುವುದಾಗಿ ಅಪ್ಪಣೆ ಕೊಡಿಸಿದ್ದೆವು ಆದರೆ, ಈಗ ಕಲಿ ಬಹಳವಾಗಿ ಪ್ರಬಲ ಬಿಟ್ಟರುವುದರಿ೦ದ ನಿಮಗೆ ಅಷ್ಟೆಲ್ಲಾ ಐಶ್ವರ್ಯಾದಿಗಳು ದೊರೆತುಬಿಟ್ಟಿದೇ ಆದರೆ ಜನರು ನಿಮ್ಮನ್ನು ಊಟಕೂಡ ಮಾಡಲು ಬಿಡುವುದಿಲ್ಲ. ಆದರೂ ನಾವು ಪಾತಾಳದಲ್ಲಿನ ಯೋಗ ಮುಗಿಸಿ, ಮೇಲೆ ಬಂದಾ ಮೇಲೆ ನಿಮ್ಮಗಳಿಗೆ ಕೊಟ್ಟಿರುವ ವಚನವನ್ನು ಪಾಲಿಸಿಕೊಡುತ್ತೇವೆ.
  "ಆಗ ಇದೇ ಕುಂದೂರು ಬೆಟ್ಟ ಚಿನ್ನವಾಗುತ್ತದೆ ಬಸವನ ಬೆಟ್ಟ ಬೆಳ್ಳಿಯಾಗುತ್ತವೆ. ಆದರೂ, ಈಗಲೂ ಇಲ್ಲಿನ ಆದಾಯವೇ ಆ ಚಿನ್ನ ಬೆಳ್ಳಿಗಿಂತಲೂ ಮಿಗಿಲಾಗುತ್ತದೆ, ಚಿಕ್ಕಲ್ಲೂರು ಜಾತ್ರೆ ಜಗತ್ಪ್ರಸಿದ್ಧವಾಗುತ್ತದೆ. ಕಪ್ಪಡಿ ಕ್ಷೇತ್ರ ಹಿರಿದಾಗುತ್ತದೆ. ನೀಲಿ ಪಣತ ಕಪ್ಪಕಾಣಿಕೆಗಳು ನಾಲ್ಕೂ ಕಡೆಗಳಿಂದ ಬರುತ್ತವೆ. ಅವುಗಳನ್ನೆಲ್ಲಾ ನೀವೆ ಸ್ವೀಕರಿಸಿ, ನಮ್ಮ ಆಂತರ್ಯದಲ್ಲಿ ದೃಢ ಶ್ರದ್ಧೆ ಭಕ್ತಿ ಇಟ್ಟು ನಮ್ಮನ್ನು ಮುಟ್ಟಿ ಪೂಜಾದಿಗಳನ್ನು ಸಲ್ಲಿಸಿಕೊಂಡು ಹೋಗುತ್ತೀರಿ ನೀವು ನಮಗೆ ಸ್ವಾಮಿಗಳಾಗುತ್ತೀರಿ. ಹಿರಿ ದೊರೆಯ ಮಗನೆ, ಹಿರಿಗುರು ರಾಜೇಂದ್ರ ಸ್ವಾಮಿಗಳೇ, ಕಿರಿದೊರೆಯ ಮಗನೇ, ರಾಜಪಟ್ಟದ, ವೀರಭದ್ರ ಸ್ವಾಮಿಗಳೇ ನೀವು ಬೊಪ್ಪಣಪುರದ ಸ್ವಾಮಿಗಳಾಗಿರಪ್ಪ, ಅವರೊಂದು ವರ್ಷ ನೀವು ಒಂದು ವರ್ಷ ಜಾತ್ರೆಯನ್ನು ನಡೆಸಿಕೊಂಡು, ನಮ್ಮ ಹೆಸರಿನಲ್ಲಿ ಬರುವ ಕಾಣಿಕೆಯನ್ನು ನೀವೇ ಸ್ವೀಕರಿಸಿಕೊಂಡು ಪರಂಪರೆಗಳಿಗೆಲ್ಲಾ ಮಾರ್ಗದರ್ಶಕರಾಗಿ ಬಾಳಿರಿ." ಎಂದು ಸ್ವಾಮಿ ಆದಿ ಪರಮ ಪರಂಜ್ಯೋತಿಗಳ ಪಾತಾಳ ಬಾವಿಯ ಒಳಗೆ ಬೇಗ ಬೇಗ ಬರುತ್ತಾರೆ, ಬಾವಿಯ ಸುಪ್ತತ ಶರಣಾದಿಯಾಗಿ ಸಮಸ್ತ ಭಕ್ತರೂ ನೆರೆದಿದ್ದಾರೆ.

  "ತಾಯಿ ಇಲ್ಲದವರಿಗೆ ತಾಯಿಯಾಗಿದ್ದಿರಿ ಸ್ವಾಮಿ: ತಂದೆ ಇಲ್ಲದವರಿಗೆ ತಂದೆಯಾಗಿದ್ದಿರಿ ನೀವು ಸ್ವಾಮಿ, ನೀವು ಈಗ ಬಾವಿಯಲ್ಲಿ ಸಮಾಧಿಗೆ ಕುಳಿತು ನಮ್ಮಿಂದ ದೂರಾಗಿ ಬಿಡುತ್ತೀರಿ. ನಿಮ್ಮ ಶ್ರೀ ಪಾದವನ್ನು ನಾವು ಇನ್ನೆಂದಿಗೆ ಕಾಣುವುದು?
  ಎಂದು ನೆರೆದ ಭಕ್ತರೆಲ್ಲಾ ದುಃಖದಲ್ಲಿ ತೊಳಲಾಡತೊಡಗುತ್ತದೆ ಆಗ ಸ್ವಾಮಿ. "ಯೋಚಿಸಬೇಡಿ, ನಾನು ಪಾತಾಳಲೋಕದಿಂದ ಮೇಲೆ ಎದ್ದ ಕೂಡಲೇ ನಿಮ್ನೆನ್ನೆಲ್ಲಾ ಕರೆಸಿಕೊಳ್ಳುತ್ತೇನೆ ಎಂದು ಎಲ್ಲರಿಗೂ ತಮ್ಮ ಚರಮ ಅಪ್ಪಣೆಯನ್ನು ಕೊಟ್ಟುಬಿಡುತ್ತಾರೆ.

ಆಗ ನಮ್ಮ ಆದಿರೂಪಿ ನಿರ್ಗುಣ ಸ್ವಾಮಿ ಆಕಾಶವನ್ನು ಹೊದಿಕೆ ಮಾಡಿಕೊಂಡು. ಭೂಮಿಯನ್ನು ತೊಟ್ಟಿಲಾಗಿ ಮಾಡಿಕೊಂಡು ಸೂರ್ಯ ಚಂದ್ರಾದಿಗಳನ್ನು ತಾನು ದೀವಿಗೆಗಳನ್ನಾಗಿ ಮಾಡಿಕೊಂಡು, ಗುಡುಗು ಮಿಂಚನ್ನೇ ಶಂಕು ಜಾಗಟೆ ಮಾಡಿಕೊಂಡು ನರರ ಹಂಗು ನಮಗೆ ಬೇಡ ನಮ್ಮ ಹಂಗಲ್ಲೇ ಆ ನನ್ನ ಮಕ್ಕಳೆಲ್ಲಾ ಇರಲಿ' ಎಂದು ಹೇಳುತ್ತಾ ಪಾತಾಳಲೋಕಕ್ಕೆ ಇಳಿದು ಅಲ್ಲಿ ಪವಡಿಸಿಬಿಡುತ್ತಾರೆ.
  ಪಾತಾಳಲೋಕದ ಬಾವಿಯಲ್ಲಿ ಮೂರ್ತಗೊಂಡ ಸ್ವಾಮಿ ಆದಿಮೂರ್ತಿ ಕುಂದೂರ ಬೆಟ್ಟದ ಕಡೆ ನೆಟ್ಟದೃಷ್ಟಿ ನೆಡಲಾಗಿ, ಆ ಬೆಟ್ಟದಿಂದ ಎರಡು ಮಹಾಂತ ಪಡಗುಂಡು ಉರುಳಿಕೊಂಡು ಬಂದು, ಆ ಬಾವಿಯ ಬಾಯಿಗೆ ಸರಿಯಾಗಿ ಬಾಚಿಕೊಂಡು, ಆ ಪಡುಗುಂಡು ಬಾವಿಯ ಬಾಗಿಲಿಗೆ ಸರಿಯಾಗಿ ಒತ್ತರಿಸಿಕೊಂಡು ಬಿಡುತ್ತದೆ. ಆಗ ಮಂಟೇಸ್ವಾಮಿ ಒಳಗೆ ಯೋಗನಿದ್ರೆಗೆ ಇಳಿದುಬಿಡುತ್ತಾರೆ.
  ಜಗತ್ತಿನ ಕಲ್ಯಾಣಕ್ಕಾಗಿ ಅವರು ಯೋಗನಿದ್ರೆಯಲ್ಲಿ ಪವಡಿಸಿಬಿಡುತ್ತಾರೆ,

ಪರಂಜ್ಯೋತಿ ನೀವೇ ಬನ್ನಿ
ಸಿದ್ದು ಸಿದ್ಧರಿಗೆಲ್ಲಾ
ಅತಿ ಮುದ್ದು ಘನಲೀಲೆ
ಸಿದ್ದಯ್ಯ ಶಿವನೇ ಬನ್ನೀ.

ಮುಂದುವರಿಯುತ್ತದೆ ..
ಓದಿದ ಗುರುತಾಗಿ ಒಂದು ಲೈಕ್ ಮತ್ತು ಶೇರ್ ಮಾಡಿ.
ನಿಮ್ಮ ಪ್ರೋತ್ಸಾಹವಿರಲಿ.. ಧನ್ಯವಾದಗಳು 🙏

👇ಮುಂದಿನ ಸಂಚಿಕೆಯಲ್ಲಿ (೨ ದಿನಗಳಲ್ಲಿ)
27. ಮೈಸೂರು ಅರಸರ ದೇವ ನಿಧಿಯೇ ರಾಚಪ್ಪಾಜಿ (ಉಪಸಂಹಾರ)   

👈 ಹಿಂದಿನ ಸಂಚಿಕೆ:
25. ಶ್ರೀ ಚನ್ನಾಜಮ್ಮನಿಗೆ ಆಶೀರ್ವಾದ ಮತ್ತು ಶ್ರೀ ಸಿದ್ದಪ್ಪಾಜಿಯವರಿಗೆ ಚರಮ ಉಪದೇಶ.
ನಮ್ಮ ಬ್ಲಾಗ್ ನಲ್ಲಿ ಓದಲು:
👉 https://goo.gl/h7XRKH
ಹಿಂದಿನ ಸಂಚಿಕೆ ನಮ್ಮ ವೆಬ್ಸೈಟ್ ನಲ್ಲಿ ಓದಲು:
👉 https://goo.gl/unz2ad
ಹಿಂದಿನ ಸಂಚಿಕೆ ನಮ್ಮ ಫೇಸ್ಬುಕ್ ಪೇಜಲ್ಲಿ ಓದಲು:
👉 https://goo.gl/SjzPsf
<-------------------------->
Website: Siddappaji.com
Email: Lordsiddappaji@gmail.com

Find us: Siddappaji Lord (Admin)
Www.facebook.com/lord.siddappaji
Www.facebook.com/sri.manteswamy
Also on Twitter, Instagram & Google+

ಸಂಪೂರ್ಣ ಕಥೆ ತಿಳಿಯುವ ಆಸಕ್ತರು 👇 ಲಿಂಕ್ ಓಪನ್ ಮಾಡಿ
📓Read: https://goo.gl/aBBDN1 https://goo.gl/QYVt7o
🔊listen: https://goo.gl/hXvMdD https://goo.gl/BuXToJ https://goo.gl/e4hWAh 

No comments:

Post a Comment