ಶ್ರೀ ಧರೆಗೆ ದೊಡ್ಡವರ ಚರಿತೆ (ಸಂಚಿಕೆ 27)

27. ಮೈಸೂರು ಅರಸರ ದೇವ ನಿಧಿಯೇ ರಾಚಪ್ಪಾಜಿ (ಉಪಸಂಹಾರ)

ಸ್ವಾಮಿ ಮಂಟೇದಯ್ಯನವರ ಪಾದದಲ್ಲಿ ಮೂಡಿಬಂದ ಅಪ್ಪಣೆಯನ್ನು ಶಿರದ ಮೇಲೆ ಹೊತ್ತ ರಾಚಪ್ಪಾಜಿ ಮಡದಿ ತೋಪಿನ ದೊಡ್ಡಮ್ಮತಾಯಿಯನ್ನು ಕರೆದುಕೊಂಡು ಕಪ್ಪಡಿಯ ಗುರಿ ಹಿಡಿದು ಹೊರಟರು.
  ಆಯಾಸವಾಗಿ ತೋಪು ಒಂದರಲ್ಲಿ ತ೦ಗಲಾಗಿ, ಅಲ್ಲಿ ಮಡದಿ ದೊಡ್ಡಮ್ಮ ಮುಟ್ಟಾಗಿಬಿಡುತ್ತಾಳೆ. ಆಗ ಆ ತಾಯಿ ಏಳು ಸಲ ಸ್ನಾನ ಮಾಡಿ, ಏಳು ಸಲ ಮಡಿಯನ್ನು ತೊಟ್ಟು, ದೇವರ ಹೆಸರೇಳಿ ಧೂಪ ಹಾಕುತ್ತಾರೆ. ಆದ್ದರಿಂದ ಆ ತೋಪಿಗೆ ಮುಟ್ಟನಹಳ್ಳಿ ತೋಪು ಎಂದು ಹೆಸರಾಗುತ್ತದೆ.
  ರಾಚಪ್ಪಾಜಿ ಮಡದಿಯನ್ನು ಕುರಿತು "ನೀನು ಕಪ್ಪಡಿಯ ಗುರಿಯಲ್ಲಿ ಹೊರಗಾದ ಕಾರಣ ನನ್ನೊಡನೆ ನೀನು ಬರುವುದು ಬೇಡ ನೀನು ಸ್ವಾಮಿಯ ಪಾದದಲ್ಲಿಯೇ ಇದ್ದುಬಿಡು ಹೋಗು. ಕಪ್ಪಡಿ ಕೈಲಾಸದಲ್ಲಿ ನಮಗೆ ಜಾತ್ರೆ ಆಗುವಾಗ ನಾನೇ ಉಗಾದಿ ಅಮಾವಾಸ್ಯೆಯ ದಿನ ಇದೇ ಮುಟ್ಟನಹಳ್ಳಿಯ ತೋಪಿಗೆ ಬರುತ್ತೇನೆ, ಆಗ ಮತ್ತೆ ನನಗೂ ನಿನಗೂ ಕಲ್ಯಾಣವಾಗಲಿ ಎಂದು ಹೆಂಡತಿಗೆ ಮನ್ನಣೆಯ ಮಾತನ್ನು ಆಡಿ ಮುಂದೆ ಹೊರಡುತ್ತಾನೆ ನಮ್ಮ ಸಿರಿಗುರು ರಾಜಪ್ಪಾಜಿ.

  ಕೊಳತೂರ ಮೇಲೆ ಹಾದು ಬನ್ನೂರಿಗೆ ಬರುತ್ತಾನೆ. ಭಕ್ತರು ಅನೇಕರು ಪೂಜೆ ನಡೆಸಿ ಭಕ್ತಿಯ ಮಾಡುತ್ತಾರೆ. ಅಲ್ಲಿಂದ ಹೊರಟು ಮೈಸೂರಿನ ಕಾರಂಜಿಕೆರೆ ಎರಿಮೇಲೆ ನಿಲ್ಲುತ್ತಾರೆ. ಸಂಜೆ ಆಗುತ್ತಿದೆ_ ತೋಟಗಾರನೊಬ್ಬ ಎಲೆ ಮಂಡಿಗೆಗೆ ಅಗ್ಗಣಿಯನ್ನು ಎರೆಯುತ್ತಾನೆ. ಆತನನ್ನು ಮೂರುಸಲ ಕೂಗಿ ಕರೆಯುತ್ತಾರೆ. ಆತ ರಾಚಪ್ಪಾಜಿಯನ್ನು ಯಾರೋ ಎಲೆ ಕೂಯ್ಯಲು ಬಂದ ಕಳ್ಳನೆಂದು ಭ್ರಮಿಸಿ ಮೌನವಾಗಿ ಉಳಿದುಬಿಡುತ್ತಾನೆ. ಕೋಪಗೊಂಡ ಸ್ವಾಮಿ "ನಿನ್ನ ಎಲೆಯ ಮಂಡಿಗೆ ಎಲ್ಲ ಬತ್ತಿ ಹೋಗಲಿ, ಪಿಡಿದಿರುವ ಗುಂಬಾ ಎರಡೂ ಇಲ್ಲದೆ ಹೋಗಲಿ ನಿನ್ನ ಬಾವಿಯ ಗಂಗೆ ಬತ್ತಿ ಹೋಗಲಿ" ಎಂದು ಶಾಪ ಹಾಕುತ್ತಾನೆ. ಸ್ವಾಮಿ_ಶಾಪ ಫಲಿಸಿ ತೋಟ ಹಾಳಾಗಿಹೋಗಿ ಬಿಡುತ್ತದೆ. ಆಗ ತೋಟಗಾರ ಓಡೋಡಿ ಬಂದು, ಸ್ವಾಮಿಗೆ ನಮಸ್ಕರಿಸಿ, ತನ್ನ ದುಃಖವನ್ನು ತೋಡಿಕೊಳ್ಳುತ್ತಾನೆ. ಸ್ವಾಮಿಗೆ ಕನಿಕರ ಮೂಡಿ ಧೂಳ್ತವನ್ನು ತೋಟಕ್ಕೆ ಎರಚುತ್ತಾರೆ. ತೋಟ ಮೊದಲಿನಂತೆ ಫಳಫಳನೆ ಚಿಗುರಿ ನಿಲ್ಲುತ್ತದೆ. ಬಾವಿಯಲ್ಲಿ ನೀರು ಮೊದಲಿಗಿಂತಲೂ ಹೆಚ್ಚಾಗಿ ಉಕ್ಕಿ ಹರಿದಾಡುತ್ತದೆ. ಒಡೆದುಹೋದ ಗುಂಬ ಹೊಂದಿಕೊಂಡಿಬಿಡುತ್ತದೆ.

  ಸ್ವಾಮಿ ಆಗ ಬಾವಿ ತರೆಯ ಬಿಳಿಸಿ ಇರುವ ಎಳೆಯ ಬಾಳೆಯ ಸುಳಿಯಲ್ಲಿ ಹೋಗಿ ಪವಡಿಸಿಬಿಡುತ್ತಾರೆ ಗಳಿಗೆ ಒಂದರಲ್ಲಿ ಮುನ್ನೂರು ಮೂವತ್ತು ವರ್ಣಗಳ ಹೊಂದುತ್ತಿದ್ದರ೦ತೆ, ಸ್ವಾಮಿ ತೋಟಗಾರನಿಗೆ ಹೇಳುತ್ತಾರೆ. "ಮೂಲೂಜ್ಯದಿಂದ ಎಳಪಾಗಿ ಬಂದಿದ್ದೇನೆ ಮೂರು ಎಳನೀರನ್ನು ನನಗೆ ಕೊಡು" ತೋಟಗಾರ ಉತ್ತರಿಸುತ್ತಾನೆ: "ಸ್ವಾಮಿ ನಮ್ಮ ಮೈಸೂರಿನ ದೇವರಾಜ ಒಡೆಯರಿಗೆ ಒಹಳೆ ಬಡಸ್ತನ. ಹುಟ್ಟಿದ ಕುರುಪೆಯನ್ನೆಲ್ಲಾ ಲೆಕ್ಕ ಬರೆಯುತ್ತಾರೆ. ಧರ್ಮಗುರು. ನನಗೆ ಕೊಡುವ ಅಧಿಕಾರವೇ ಇಲ್ಲ, ಸ್ವಾಮಿ.
  ಆಗ ರಾಜಪ್ಪಾಜಿ ತಾನೆ ಕೈಬೀಸಿ ತೆಂಗಿನಮರಗಳಿಗೆ ಕರೆಕೊ೦ಡುತ್ತಾರೆ. ಅವುಗಳು ಬಾಗಿ, ಮೊಗಳು ತೆಗೆದುಕೊಂಡು ಸ್ವಾಮಿಗೆ ಎಡೆ ಯಾಗುತ್ತವೆ. ತೋಟಗಾರ ರಾಜ ದೇವರಾಜ ಒಡೆಯರಿಗೆ ಸುದ್ದಿ ಕೊಡುತ್ತಾನೆ. ಕೂಡಲೇ ಒಡೆಯರು ಪಲ್ಲಕ್ಕಿಯ ತರಿಸಿ. ಸೂಳಿಯರ ಮೇಳ ಕಟ್ಟಿಸಿಕೊಂಡು ಕಾರಂಜಿಯ ತೋಟಕ್ಕೆ ಓಡೋಡಿ ಬಂದು ಸ್ವಾಮಿಯ ಪಾದಕ್ಕೆ ಎರಗಿ, "ಪ್ರಭು, ನಿಮ್ಮ ನಿಜರೂಪನ್ನು ತೋರಿ. ಈ ಭಕ್ತನನ್ನು ಉದ್ಧರಿಸಿ" ಎಂದು ಕೇಳಿಕೊಳ್ಳುತ್ತಾನೆ, ಸ್ವಾಮಿ ದೇವರಾಜ ನಿಜಭಕ್ತಿಗೆ ಮೆಚ್ಚಿ, ಪಲ್ಲಕ್ಕಿಯಲ್ಲಿ ಮಗುವಾಗಿ ಮೈದಳೆದು ನುಡಿಯುತ್ತಾರೆ.

  "ಮೈಸೂರಿನ ಅರಸನಾದ ನೀನು ಬಡತನದಲ್ಲಿ ಇದ್ದೀಯೆ. ನಿನಗೆ ಒಪ್ಪುವಂತೆ ಸಿರಿ ಸಂಪತ್ತನ್ನು ನಾನು ಕರುಣಿಸುವೆ, ನಿನಗೆ ನಿಜಕ್ಕೂ ಇರುವ ಗಂಡಾಂತರವೆ೦ದರೆ ಕಾರ್ಗಳ್ಳಿಯ ಹಂಪಣ್ಣನಾಯಕ ತನ್ನ ಮೂವರು ಮಡದಿಯರಿಗೂ ಮಕ್ಕಳಿಲ್ಲದ ಕಾರಣ ಹಿರಿಯ ಮಗಳನ್ನು ಈಗಾಗಲೇ ಕೇಳುತ್ತಿದ್ದಾನೆ. ಮತ್ತು ನೀನು ಕೊಡದೇ ಹೋದರೆ ನಿನ್ನ ಮೇಲೆ ದಂಡೆತ್ತಿ ಬಂದು ನಿನ್ನ ಮಗಳನ್ನು ಪಡೆಯುವ ಸಂಧಾನದಲ್ಲಿ ದ್ದಾನೆ. ಅವನು ಸಿರಿ ವಂತನಾದ್ದರಿಂದ ಅವನನ್ನು ಉಪಾಯದಿಂದ ನೀನು ಗೆಲ್ಲಬೇಕಾಗುತ್ತದೆ ಹೆಣ್ಣನ್ನು ಕೊಡುತ್ತೇನೆಂದು ಓಲೆ ಬರೆಸಿ, ಅವನ ಪರಿವಾರವನ್ನು ಕರೆಸಿ, ಬೇರೆ ಬಿಡಾರದಲ್ಲಿ ತಂಗಲು ಹೇಳಿ ಅವರು ತಂಗಿದ ಮೇಲೆ ಅವರನ್ನೆಲ್ಲಾ ಸುಟ್ಟು ಭಸ್ಮಮಾಡಿ ಬಾವಿಗಳಿಗೆ ತುಂಬಿಬಿಡು, ನಂತರ ಗುಟ್ಟನ್ನು ಬಯಲು ಮಾಡದೆ ಹಂಪಣ್ಣನಾಯಕನಿಗೆ ಧಾರೆ ಎರಿಸಿಕೊಳ್ಳಲು ಬಾ ಎಂದು ಅಂಬಾರಿ ಆನೆ ಕಳುಹಿಸು, ಅಂಬಾರಿ ನಿನ್ನ ಕೋಟೆಯ ಬಾಗಿಲಿಗೆ ಬಂದ ಕೂಡಲೇ ಈರನಗೆರೆ ಮಂಚನಾಯಕನ ಕೈಯಲ್ಲಿ ಚಂದ್ರಯುಧ ಕೊಟ್ಟು ಹಂಪಣ್ಣ ನಾಯಕನನ್ನು ಕೊಂದು ಚೆಂಡಾಡಿಸು, ಅದೇ ಸಮಯದಲ್ಲಿ ಕಾರಗಳ್ಳಿಗೆ ನಿನ್ನ ಸೈನ್ಯ ನುಗ್ಗಿಸಿ, ಅರಮನೆ ಆಕ್ರಮಿಸಿ ಅವನ ಹೆಂಡಿರನ್ನು ಕಡಿಸಿ ಆಚೆಗೆ ಎಸೆ. ಆಗ ನಿನಗೆ ಎಪ್ಪತ್ತು ಕೋಟಿ ಆಸ್ತಿ ಅಂತಸ್ತು ಸಿಗುತ್ತದೆ" ಎನ್ನುತ್ತಾನೆ ಸ್ವಾಮಿ ರಾಚಯ್ಯ
ದೇವರಾಜ ಸ್ವಾಮಿಯ ಆಜ್ಞೆಯಂತೆ ಮಾಡಿ. ಮೈಸೂರಿನ ಕೀರ್ತಿ ಪ್ರತಿಷ್ಠೆಗಳನ್ನು ಹೆಚ್ಚಿಸುತ್ತಾರೆ. ಸ್ವಾಮಿ ರಾಚಪ್ಪನನ್ನು "ಏನಾದರೂ ಸೇವೆ ಸ್ವೀಕರಿಸಿ ಪ್ರಭು" ಎಂದು ಬೇಡಿಕೊಳ್ಳುತ್ತಾನೆ. ರಾಚರಾಯ, "ಅರಮನೆಯಲ್ಲಿ ನಾನು ಭೋಜನ ಮಾಡಬೇಕು___ವಿಧಿ ನಿಯಮಗಳಿಂದ ನನ್ನ ಆರೋಗಣೆಯಾಗಬೇಕು" ಎನ್ನುತ್ತಾನೆ. ಊಟಕ್ಕೆ ಬಡಿಸಿದನಂತರ ಎಲ್ಲರನ್ನೂ ಹೊರಗೆ ಹೋಗಲು ಹೇಳಿ, ಭಕ್ಷ್ಯ ಭೋಜ್ಯಗಳನ್ನು ಸುತ್ತ ಮುತ್ತೆಲ್ಲಾ ಚೆಲ್ಲಿ ರತ್ನ ಪಚ್ಚೆ ವಜ್ರ ವೈಡೂರ್ಯಗಳಾಗಿ ಮಾಡಿಕೊಡುತ್ತಾನೆ. "ಈ ಕೋಟಿ ಸಂಪತ್ತು ನಿನಗೆ ನೂರುಕಾಲ ಇರಲಿ ದೇವರಾಯ" ಎಂದು ಹೇಳಿ ಹರಸಿ ಮುಂದೆ ಕಪ್ಪಡಿಯ ಕೈಲಾಸದತ್ತ ಹೊರಟು ದಾರಿಯಲ್ಲಿ ತಮಗೆ ಕಪ್ಪಡಿಯಲ್ಲಿ ಬೇಕಾಗುವ ಪಾತಾಳಬಾವಿಯನ್ನು ತೋಡಲು ಉಪ್ಪರಿಗೆ ಶೆಟ್ಟಿಯ ಕನಸಿಗೆ ಬಂದು ಕಪ್ಪಡಿಗೆ ಕೂಡಲೇ ಬರಹೇಳಿ ಮುಂದೆ ಹೊರಟು ಕಾಟ ನಾಳಿನಕೆರೆ ಏರಿಗೆ ಬರುತ್ತಾರೆ.
ಅಲ್ಲಿನ ತೆಂಗಿನಮರಗಳು ತಾವೇ ಬಾಗಿ ಮುಗುಳು ತೆಗೆದುಕೊಂಡು ಸ್ವಾಮಿಗೆ ಎಡೆಯಾಗುತ್ತವೆ. ಆಗ ಸ್ವಾಮಿ ಅದನ್ನು ಪ್ರೀತಿಯಿಂದ ಸ್ವೀಕರಿಸಿ. "ನಿನ್ನ ಜಾತ್ರೆಗಾಗಿ ಇಲ್ಲಿಂದ ಎಳನೀರು ನಿಂಬೆಹಣ್ಣು ಬರಬೇಕೆಂದು ಆಜ್ಞಾಪಿಸಿ, ಹೊಸ ಕಪ್ಪಡಿಯ ಒಳಗಡೆಯ ನಿಧಿಯಲ್ಲಿ ಸ್ವಾಮಿ ಮೂರ್ತರಾಗುತ್ತಾರೆ. ಕೈಲಾಸದಲ್ಲಿ ಇಂದು ಹೊಸ ಕಪ್ಪಡಿಯ ಜಾತ್ರೆ ಶಿವರಾತ್ರಿ ಉಪ್ಪಲಿಗ ಶೆಟ್ಟಿ ತೋಡಿ ತೆಗೆದ ಪಾತಾಳ ಬಾವಿಯ ಆಳದಲ್ಲಿ ಸ್ವಾಮಿ ಮೂರ್ತರಾಗುತ್ತಾರೆ.

  'ಜಗದ ಜನರ ಹಂಗು ನಮಗೆ ಬೇಡ; ನಮ್ಮ ಹಂಗು ಮಾತ್ರ ಜಗತ್ತಿಗೇ ಇರಲಿ___ಎಂದು ಹೇಳುತ್ತಾನೆ. ಆಕಾಶವನ್ನು ಹೊದ್ದಿಕೆಯಾಗಿ ಹೊದ್ದು, ಭೂಮಿಯನ್ನು ತೊಟ್ಟಿಲಾಗಿ ಪವಡಿಸಿ, ಸೂರ್ಯ ನಕ್ಷತ್ರಗಳನ್ನು ದೀವಟಿಗೆಗಳಾಗಿ ಸ್ವೀಕರಿಸಿ, ಸ್ವಾಮಿ ರಾಚಪ್ಪಾಜಿ ದೀರ್ಘವಾದ ಯೋಗ ನಿದ್ರೆಗೆ ಹೋಗಿಬಿಡುತ್ತಾರೆ.

ಅವರ ಗದ್ದಿಗೆ ನಿಜದ ಕುರುಹಾಗಿ ಭಕ್ತರನ್ನು ಹರಿಸುತ್ತಾ ಬಂದಿದೆ.

ಮುಂದುವರಿಯುತ್ತದೆ ..
ಓದಿದ ಗುರುತಾಗಿ ಒಂದು ಲೈಕ್ ಮತ್ತು ಶೇರ್ ಮಾಡಿ.
ನಿಮ್ಮ ಪ್ರೋತ್ಸಾಹವಿರಲಿ.. ಧನ್ಯವಾದಗಳು 🙏

👇ಮುಂದಿನ ಸಂಚಿಕೆಯಲ್ಲಿ (೨ ದಿನಗಳಲ್ಲಿ)
28. ಸಿದ್ಧರ ಗೆದ್ದ ಸಿದ್ದಪ್ಪಾಜಿ - ಶಾಪ ನೀಡಿದ ರಾಚಪ್ಪಾಜಿ (ಮುಕ್ತಾಯ ಸಂಚಿಕೆ)   

👈 ಹಿಂದಿನ ಸಂಚಿಕೆ:
26. ಹಿರಿಯ ಗುರು ರಾಜೇಂದ್ರಸ್ವಾಮಿ ಮತ್ತು ರಾಜ ಪಟ್ಟದ ವೀರಭದ್ರಸ್ವಾಮಿಗಳಿಗೆ ಸ್ವಾಮಿ ನೆಲೆತೋರಿಸುತ್ತಾರೆ.
ನಮ್ಮ ಬ್ಲಾಗ್ ನಲ್ಲಿ ಓದಲು:
👉 https://goo.gl/fjdRc5
ಹಿಂದಿನ ಸಂಚಿಕೆ ನಮ್ಮ ವೆಬ್ಸೈಟ್ ನಲ್ಲಿ ಓದಲು:
👉 https://goo.gl/e874JD
ಹಿಂದಿನ ಸಂಚಿಕೆ ನಮ್ಮ ಫೇಸ್ಬುಕ್ ಪೇಜಲ್ಲಿ ಓದಲು:
👉 https://goo.gl/P6YygS
<-------------------------->
Website: Siddappaji.com
Email: Lordsiddappaji@gmail.com

Find us: Siddappaji Lord (Admin)
Www.facebook.com/lord.siddappaji
Www.facebook.com/sri.manteswamy
Also on Twitter, Instagram & Google+

ಸಂಪೂರ್ಣ ಕಥೆ ತಿಳಿಯುವ ಆಸಕ್ತರು 👇 ಲಿಂಕ್ ಓಪನ್ ಮಾಡಿ
📓Read: https://goo.gl/aBBDN1 https://goo.gl/QYVt7o
🔊listen: https://goo.gl/hXvMdD https://goo.gl/BuXToJ https://goo.gl/e4hWAh 

No comments:

Post a Comment