28. ಸಿದ್ಧರ ಗೆದ್ದ ಸಿದ್ದಪ್ಪಾಜಿ - ಶಾಪ ನೀಡಿದ ರಾಚಪ್ಪಾಜಿ (ಕೊನೆಯ ಸಂಚಿಕೆ)
ಹಾಗೆಯೇ ಇತ್ತ ಆದಿಮೂರ್ತಿಯ ಆಶೀರ್ವಾದದಿಂದ ಪ್ರೇರಿತರಾಗಿ ಸಿದ್ದಯ್ಯಸ್ವಾಮಿ ಮಠ ಬಿಟ್ಟು ಹೊರಟು ಬೆಳಕವಾಡಿ ಶಿವನಸಮುದ್ರಗಳನ್ನು ಭಕ್ತರ ಪ್ರೀತಿಯನ್ನು ಸ್ವೀಕರಿಸಿ ಮುಂದೆ ಬರುವಾಗ ತೆಂಗಿನ ಹಳ್ಳದ ಮಾರಿ ಎದುರಾಗಿ ಅಡ್ಡ ಬಿದ್ದು "ನಿನ್ನ ಭಕ್ತರ ಮೊದಲ ಪೂಜೆ ನನಗೆ ಕರುಣಿಸು' ಎನ್ನುತ್ತಾಳೆ. ಸ್ವಾಮಿ ಮಾರಿಯ ಬಯಕೆಯನ್ನು ಗೌರಿಸದೆ ಭಂಗಿ ಫಲಹಾರ ಮಾಡಿ ಮುಂದೆ ಹೊರಟು ಮಧ್ಯರಾತ್ರಿಯಲ್ಲಿ ಸುಕ್ಕಲಗರ ದುಷ್ಟ ಮಾರಿಗೆ ಎದುರಾಗುತ್ತಾರೆ; ಈ ಮಾರಿ ತನ್ನ ಶಕ್ತಿಯಿಂದ ಸ್ವಾಮಿಯನ್ನು ಸೋಲಿಸಲು ಯತ್ನಿಸಿ ಕಡೆಗೆ ಪ್ರಾಣಭಿಕ್ಷೆ ಬೇಡಿ ಉಳಿದುಕೊಳ್ಳುತ್ತಾಳೆ. ಸ್ವಾಮಿ ಅವಳನ್ನು ದಿಕ್ಕಿಲ್ಲರಿಗೆ ದಾರಿ ತೋರು ಎಂದು ಕೇಳಿ ದಾರಿಯನ್ನು ಅವಳಿಂದ ತಿಳಿದ ಕಾರಣಕ್ಕಾಗಿ ಅವಳಿಗೆ ದಾರಿ ತೋರಿದ ಜಾಗದಲ್ಲಿ ಭಕ್ತರಿಂದ ಪೂಜೆ ಸಲ್ಲುವಂತೆ ಆಶೀರ್ವದಿಸಿ ಮುಂದೆ ಹೊರಡುತ್ತಾರೆ.
ಸ್ವಾಮಿ ಸಿದ್ದಪ್ಪಾಜಿ ಚಿಕ್ಕಲ್ಲೂರಿಗೆ ಬರುತ್ತಿದ್ದಂತೆಯೇ ಅಲ್ಲಿ ಏಳು ಜನ ಋುಷಿಗಳು ಕಾಣಿಸಿಕೊಂಡು ಹುಣಸೆಯ ಉರಿಗೆ೦ಡದಲ್ಲಿ ಭಂಗಿ ಸೇದುತ್ತಾ ಇರುತ್ತಾರೆ. ಸ್ವಾಮಿ ಸಿದ್ದಪ್ಪಾಜಿ ಅವರುಗಳನ್ನು ಭಂಗಿಗಾಗಿ ಕೇಳಿದಾನ ಅವರುಗಳು "ನೋಡು ಸಿದ್ದಪ್ಪಾಜೀ ನಾವು ಹಾಗೂ ನೀನು ಒಂದು ಪವಾಡದಲ್ಲಿ ಭಾಗವಹಿಸಬೇಕು ಎರಡು ಗುಳಿಗೆಗಳನ್ನು ತೆಗೆಸಿ. ಗುಳಿಗೆ ಕಳ್ಳಿಹಾಲು ಎಕ್ಕದ ಹಾಲು, ಸುಣ್ಣ ತುಂಬಿಸಿ ಹುಣಸೆಯ ಹುರಿ ಗೆಂಡ ಸುರಿಸಿ ಒಂದರಲ್ಲಿ ನಾವು ಏಳು ಜನ ಇನ್ನೊಂದರಲ್ಲಿ ನೀನು ಒಬ್ಬ ಏಳುದಿನದ ವಾಯಿದೆ ಮೇರೆಗೆ ಇದ್ದು ಬಿಡುವುದು. ಯಾರು ಈ ಪವಾಡದಿಂದ ಸುರಕ್ಷಿತವಾಗಿ ಏಳನೆಯ ದಿನದ ನಂತರ ಹೊರಕ್ಕೆ ಬರುತ್ತಾರೋ ಅವರಿಗೆ ಚಿಕ್ಕಲ್ಲೂರಿನ ಮಠ ಭೇರಿ ನಿಷಾನಿ ಬಿರುದಿನ ಕೊಂಬುಕಹಳೆ" ಎನ್ನುತ್ತಾರೆ. ಸ್ವಾಮಿ ಈ ಪಂಥದ ಪವಾಡಕ್ಕೆ ಒಪ್ಪಿ "ನಾವು ಸೋತರೆ ನಮ್ಮ ಬಿರುದು ಪಾತಾಕೆಗಳೆಲ್ಲಾ ನಿಮ್ಮವು" ಎಂದು ಒಪ್ಪಿ ಚಿಕ್ಕೇಗೌಡನ ದೊಡ್ಡಿಯಿಂದ ಚಿಕ್ಕೆಗೌಡನನ್ನು ಮಧ್ಯಸ್ಥಿಕರಾಗಿ ಕರೆಸಿ ಯಾರು ಜೀವದಿಂದ ಉಳಿದೇ ಇರುತ್ತಾರೋ ಅವರ ಗುಳಿಯ ಮೇಲೆ ಏಳುದಿನದ ಹೊತ್ತಿಗೆ ಕೇರೆ ಗಿಡ ಹುಟ್ಟಿ ವಾಲಾಡುತ್ತಿರುತ್ತದೆ" ಎಂದು ಸನ್ನೆ ಹೇಳಿ ಎಲ್ಲರ ಮುಂದೆ ಗುಳಿಗೆ ಇಳಿಯುತ್ತಾರೆ. ಗುಳಿಗಳನ್ನು ಕಟ್ಟಿದ ಕಲ್ಲು ನಯಗಾರೆ ಕೆಮ್ಮಣ್ಣು ಹಾಕಿಸಿ ಮುಚಿಸಿ, ಅವರ ಮೇಲೆ ಕೀರ ಬೀಜವನ್ನು ಬಿತ್ತುತ್ತಾರೆ.
ಸ್ವಾಮಿ ಗುಳಿಯಲ್ಲಿ ಕುಳಿತು, ಸಾಂಬ್ರಾಣಿ ಹಾಕಿ ಶಿವಪೂಜೆ ಮಾಡಿ ಕೈಲಾಸ ಮೂಡಿಸುತ್ತಾರೆ. ಏಳು ದಿನದ ಮೇಲೆ ಚಿಕ್ಕೇಗೌಡ ಬಂದು ಗುಳಿಯನ್ನು ನೋಡಲಾಗಿ, ಸಿದ್ಧಯ ಸ್ವಾಮಿಯ ಗುಳಿಯ ಮೇಲೆ ಕೀರೇಗಿಡ ವಾಲಾಡುತ್ತಿರುತ್ತದೆ. ಗೌಡ ಆನಂದದಿಂದ ಸ್ವಾಮಿಯನ್ನು ಹೊರಗೆ ಕರೆದುಕೊಂಡು ಪಾದಗಳಿಗೆ ಎರಗುತ್ತಾನೆ.
ಸತ್ತ ಏಳುಜನ ಋಷಿಗೂ ಸಮಾಧಿ ಕಟ್ಟಿಸಿದ ಸ್ವಾಮಿ ಜಾತ್ರೆಯ ವೇಳೆಯಲ್ಲಿ ಈ ಏಳೂ ಸಮಾಧಿಗಳಿಗೂ ಪೂಜೆಯಾಗಲಿ ಎಂದು ಅಪ್ಪಣೆ ಕೊಡಿಸುತ್ತಾರೆ. ಸ್ವಾಮಿ ಸಿದ್ದಯ್ಯ ಏಳು ಋುಷಿಗಳ ಮಠವನ್ನು ತಮ್ಮ ಅಧಿಕಾರಕ್ಕೆ ತೆಗೆದುಕೊಂಡು ವರ್ಷಂಪ್ರತಿಯ ಜಾತ್ರೆಯನ್ನು ವ್ಯವಸ್ಥೆ ಮಾಡಿಬಿಡುತ್ತಾರೆ.
ಗೌಡತಿಗೆ ಹೇಳಿ ಮಠದ ಉರಿಗದ್ದುಗೆಯ ಸ್ಥಳದಲ್ಲಿ ಪಾತಾಳ ಗುಹೆಯ ತೊಡೀಸಿ, ಬಾವಿಗೆ ಪುಣ್ಯಮಜ್ಜನ ಮಾಡಿಸಿ, ಜಯದ ಅಕ್ಷತೆಯನೆ ಇಟ್ಟು, ಆಕಾಶವನ್ನು ಹೊದಿಕೆಯಾಗಿ, ಭೂಮಿಯನ್ನು ತೊಟ್ಟಿಲಾಗಿ ಸೂರ್ಯ ನಕ್ಷತ್ರಗಳನ್ನು ನಂದಾದೀವಿಗೆಗಳಾಗಿ ಸ್ವೀಕರಿಸಿತ ತಮ್ಮ ದೀರ್ಘ ಸಮಾಧಿಗೆ ಸಿದ್ದಯ್ಯ ಸ್ವಾಮಿ ಹೋಗಿಬಿಡುತ್ತಾರೆ.
ಹೀಗೆಯೇ ಫಲಾರದಯ್ಯ ಮುಟ್ಟಿನಹಳ್ಳಿ ತೋಪಿಗೆ ದಯಮಾಡಿಸಿ, ತಾಯಿ ತೋಪಿನ ದೊಡ್ಡಮ್ಮನವರು ಮತ್ತು ರಾಜಪ್ಪಾಜಿಯವರು ಪವಡಿಸಿದ್ದ ಜಾಗದಲ್ಲಿ ಅವರ ಪಾದಗಳಲ್ಲಿ ತಾನೂ ಪವಡಿಸಿ ಬಿಡುತ್ತಾನೆ.
ಹಿರಿಯ ಗುರು ರಾಜೇಂದ್ರಸ್ವಾಮಿ ತಮ್ಮ ಗುರು ಹೋದ ಮಾರ್ಗದಲ್ಲೇ ತಾವು ಹೋಗಬೇಕೆಂದು ನಿರ್ಧರಿಸಿ ಬಸವನ ಮೇಲೆ ನಗಾರಿ ಹೇರಿಕೊಂಡು, ಬೇರೊಂದು ಬಸವನ ಮುಂದೆ ಬಿಟ್ಟುಕೊಂಡು ಕಪ್ಪಡಿಗೆ ಬಂದು ಗುರುವಿನ ಪಾದದಲ್ಲಿ ಲೀನವಾಗಿಬಿಡುತ್ತಾನೇ.
ಕೆಳಗೆ ಪಾತಾಳದಲ್ಲಿ ಸ್ವಾಮಿಗೆ ರಾಚಪ್ಪಾಜಿ ಯೋಗಸಮಾಧಿಯಲ್ಲಿ ಇರುತ್ತಾರೆ. ರಾಜೇಂದ್ರಸ್ವಾಮಿಗೆ ಗುರುವನ್ನು ಕೂಡಲೇ ಮಾತನಾಡಿಸುವ ಹುಚ್ಚು, ಯಾರು ತಡೆದರೂ ಸ್ವಾಮಿ ನಿಲ್ಲದೆ ತನ್ನ ಗುರುವಿನ ತಪಸ್ಸನ್ನು ಭಂಗಗೊಳಿಸಿಬಿಡುತ್ತಾನೆ ಕೋಪಗೊಂಡ ರಾಚರಾಯ"ನಮ್ಮ ಸಮಾಧಿ ಸ್ಥಿತಿಯನ್ನು ಭಂಗಗೊಳಿಸಿದಿಕ್ಕಾಗಿ ನೀನು ಶಾಪಗ್ರಸ್ತನಾದೇ ನೀನು ಮತ್ತು ಮರ್ತ್ಯಕ್ಕೆ ಹಿಂದಿರುಗಿ ಬೊಪ್ಪಗೊ೦ಡ ಪುರಕ್ಕೆ ತೆರಳಿ ನಾವಿಲ್ಲಿ ಮಂಟೇದ ಸ್ವಾಮಿಯ ಆತ್ಮ ಲಿಂಗದಲ್ಲಿ ಸರಸಮಾಡುತ್ತಾ ದಿವ್ಯ ತೇಜಸ್ಸಾಗಿ ಇರುವ ಎಂದೆಂದಿಗೂ ಮೆರೆವ ಪವಾಡವನ್ನು ಸಾರು ಹೋಗು"ಎಂದು ಶಪಿಸಿಬಿಡುತ್ತಾರೆ.
ರಾಜೇಂದ್ರ ಸ್ವಾಮಿ ತಾನು ಬಯಸಿಬಂದುದೇ ಇದಕ್ಕಾಗಿ ಎಂದು ಸಂತೋಷಗೊಂಡು, ಬೊಪ್ಪಣ ಪುರದ ಶಿಷ್ಯರನ್ನೆಲ್ಲಾ ಕರೆದು. ಅಲ್ಲಿ ನೆಲಮಾಳಿಗೆಯಲ್ಲಿ ಮಂಟೇಸ್ವಾಮಿ, ರಾಚಪ್ಪಾಜಿ ಹಾಗೂ ಸಿದ್ದಪ್ಪಾಜಿ ಮೊದಲಾದವರ ಲೀಲಾಪವಾಡಗಳನ್ನು ಮೆರೆಸುತ್ತಿರುವ ದಿವ್ಯ ತೇಜಸ್ಸನ್ನು ಕುರಿತು ಹಾಡಿ ಹಾಡಿ ಆನಂದಿಸುತ್ತಾರೆ.
ಸಿದ್ದಯ್ಯ ಸ್ವಾಮೀ ಬನ್ನೀ
ಪವಾಡಗೆದ್ದಯ್ಯ ನೀವೇ ಬನ್ನಿ
ಜಯ ಜಯ ಎಂದು.
---end----: ಸಂಪೂರ್ಣ :---end----
ಓದಿದ ಗುರುತಾಗಿ ಒಂದು ಲೈಕ್ ಮತ್ತು ಶೇರ್ ಮಾಡಿ
ನಿಮ್ಮ ಪ್ರೋತ್ಸಾಹವಿರಲಿ.. ಧನ್ಯವಾದಗಳು 🙏
👈 ಹಿಂದಿನ ಸಂಚಿಕೆ:
27. ಮೈಸೂರು ಅರಸರ ದೇವ ನಿಧಿಯೇ ರಾಚಪ್ಪಾಜಿ (ಉಪಸಂಹಾರ)
ನಮ್ಮ ಬ್ಲಾಗ್ ನಲ್ಲಿ ಓದಲು:
👉 https://goo.gl/Rya8it
ಹಿಂದಿನ ಸಂಚಿಕೆ ನಮ್ಮ ವೆಬ್ಸೈಟ್ ನಲ್ಲಿ ಓದಲು:
👉 https://goo.gl/jJ64f3
ಹಿಂದಿನ ಸಂಚಿಕೆ ನಮ್ಮ ಫೇಸ್ಬುಕ್ ಪೇಜಲ್ಲಿ ಓದಲು:
👉 https://goo.gl/eMVxcK
<-------------------------->
Website: Siddappaji.com
Email: Lordsiddappaji@gmail.com
Find us: Siddappaji Lord (Admin)
Www.facebook.com/lord.siddappaji
Www.facebook.com/sri.manteswamy
Also on Twitter, Instagram & Google+
ಸಂಪೂರ್ಣ ಕಥೆ ತಿಳಿಯುವ ಆಸಕ್ತರು 👇 ಲಿಂಕ್ ಓಪನ್ ಮಾಡಿ
📓Read: https://goo.gl/aBBDN1 https://goo.gl/QYVt7o
🔊listen: https://goo.gl/hXvMdD https://goo.gl/BuXToJ https://goo.gl/e4hWAh
No comments:
Post a Comment