ಶ್ರೀ ಧರೆಗೆ ದೊಡ್ಡವರ ಚರಿತೆ (ಸಂಚಿಕೆ 1)

ಓ ಆದಿಮೂಲ ಪರಂಜ್ಯೋತಿಯೇ ಮೂರ್ತವಾಗು🙏

ಶ್ರೀ ಮಂಟೇಸ್ವಾಮಿ ಮತ್ತು ಸಿದ್ದಪ್ಪಾಜಿ_ರಾಚಪ್ಪಾಜಿ ಎಸಗಿದ ಲೀಲಾ ಪವಾಡಗಳು

ಓ ಆದಿ ಪರಂಜ್ಯೋತಿ ನೀವೇ ಬನ್ನಿ
ಆದಿ ಸಿದ್ಧರಿಗೆಲ್ಲ ಅತಿ ಮುದ್ದು ಘನಲೀಲೆ
ಸಿದ್ದಯ್ಯ ಸ್ವಾಮಿ ಬನ್ನಿ
ಪವಾಡ ಗೆದ್ದಯ್ಯ ನೀವೇ ಬನ್ನಿ
ಬಾರದ ಪವಾಡಕೆಲ್ಲ ಬಂದು ಓದುಗೊ
ಘನಲೀಲೆ ಸಿದ್ದಯ್ಯ ಶಿವನೇ ಬನ್ನಿ
ಆದಿ ಪರಂಜ್ಯೋತಿ ನೀವೇ ಬನ್ನಿ

ಆದಿ ಮೂಲದಲ್ಲಿ ಬಟ್ಟ ಬಯಲು ಮಾತ್ರವಿತ್ತು ಅದು ನಿರ್ಗುಣವಾಗಿತ್ತು, ನಿರ್ವಾಣವಾಗಿತ್ತು. ಅದನ್ನೇ ವೇದಾದಿ ಉಪನಿಷತ್ಕಾರರು ಈಶಾವಾಸ್ಯವೆ೦ದು. ಬಸವಾದಿ ಪ್ರಮಥರು ಪರಂಜ್ಯೆತಿ ಎಂದರು. ಅದ್ವೈತಿಗಳ ಇದನ್ನೇ ನಿರ್ಗುಣ ಬ್ರಹ್ಮ ಎಂದರು. ಈ ಪರಂಜ್ಯೋತಿ ಸ್ವರೂಪವಾದ ಶುದ್ಧ  ಚೈತನ್ಯ ತನಗೆ ತಾನೇ ಮೂರ್ತಗೊಂತಹದ್ದು.

ಈಶಾವ್ಯಾಸವಾದ ನಿರ್ವಾಣ ಅಥವಾ ಅವ್ಯಕ್ತ ಪರಂಜ್ಯೋತಿ ಹೇಗೆ ತನ್ನಲ್ಲಿ ತಾನೇ ವ್ಯಕ್ತ ಪರಂಜ್ಯೋತಿಯಾಗಿ ಮೂರ್ತವಾಯಿತು ಎಂದು ಹೇಳುವ ಶಕ್ತಿ ಯಾರಿಗೂ ಇಲ್ಲವಾಗಿರುವುದರಿಂದಲೆ ಅಜ್ಞಾನದ ಜಗತ್ತನ್ನು ಮರ್ತ್ಯವೆಂದುಾ ಮನುಷ್ಯನನ್ನು  ಮೃಣ  ವನಿಯ ನೆ೦ದು ಕರೆಯಲಾಯಿತು. ಈ ಸನಾತನ ರಹಸ್ಯವನ್ನು ಭೇದಿಸುವ ಅನಂತ ಪ್ರಯತ್ನವೇ ಧರೆಯ ಈ ಬದುಕಾಗಿ ಇದರ ಅರ್ಥ ಸಂಚಯವೇ ವೇದ, ಉಪನಿಷತ್ ಹಾಗೂ ಪುರಾಣಾದಿ ಪವಿತ್ರ ಗ್ರಂಥಗಳಾಗಿವೆ ಈ ರಹಸ್ಯದ ಅರಿವನ್ನೇ ಓಂಕಾರವೆಂದೂ ಪ್ರಣವವೆಂದೂ ಕರೆಯಲಾಗಿದೆ.

ಪ್ರಣವ ಸ್ವರೂಪವಾದ ಅವ್ಯಕ್ತ ಬ್ರಹ್ಮನು ಅನಂತ ಕಾಲದ ನಂತರ ತನ್ನ ಮೌನವನ್ನು ಮುರಿದು ವ್ಯಕ್ತ ಬ್ರಹ್ಮನೂ ಆಗಲು ನಿರ್ಧರಿಸಿದನು ಆ ನಿರ್ಧಾರವ ಪ್ರತಿ ಕೃತಿಯಾಗಿ ಅಮೂರ್ತವು ಬಾಂಬು ಲಿಂಗಯ್ಯ ಹಾಗೂ ಅವನ ಸೋದರಿ ಆದಿಶಕ್ತಿಯಾಗಿ ಮೂರ್ತಗೊಳ್ಳುವುದು. ಜಾಂಬು ಲಿಂಗಯ್ಯನು ಜಗತ್ತಿನ ಸಂತಾನೋತ್ಪತ್ತಿಯ ಸಲುವಾಗಿ ಕಂಕಣವನ್ನು ಕಟ್ಟಿಕೊಂಡು ಬಿಳಿಯ ಕುದುರೆಯೊಂದನ್ನು ಏರಿಕೊಂಡು ತನ್ನ ಜನ್ಮಸ್ಥಳವಾದ ಕಡಪ ರಾಜ್ಯದಿಂದ ಹೊರಟು ಕೊಂಗರಹಳ್ಳಿ ಮಠ ಇರುವ ಸ್ಥಳಕ್ಕೆ ಬರುತ್ತಾನೆ. ಅಣ್ಣನ ಕಂಕಣದ ಕೈಯನ್ನು ಕಂಡ ಆದಿಶಕ್ತಿಯು ಸ್ವಂತ ಅಣ್ಣನನ್ನೇ ಮೋಹಿಸುತ್ತಾಳೆ. ತಂಗಿಯ ಚಿತ್ತ ವಿಕಾರವನ್ನು ಮತ್ತು ಮೋಹವನ್ನು ಕಂಡ ಜಾಂಬುಲಿಂಗಯ್ಯನು ದುಃಖದಿಂದ ಮರುಗಿ ಮೂರು ಹನಿ ಕಣ್ಣೀರನ್ನು ಧರೆಗೆ ಉದುರಿಸುತ್ತಾನೆ.
ಅದನ್ನು ಕಂಡ ಆದಿಶಕ್ತಿಯ ಆ ಕ್ಷಣವೇ ನವಿಲಾಗಿ ರೂಪು ಧರಿಸಿ ಆ ಮೂರು ಕಂಬನಿಗಳನ್ನು ಸ್ವಾಹಾಮಾಡುತ್ತಾರೆ ತತ್ ಕಾರಣದಿಂದಾಗಿ ಆ ಹೆಣ್ಣು ನವಿಲು ಗರ್ಭ ಧರಿಸಿ ಕೊನೆಗೆ ಮೂರು ಮೊಟ್ಟೆಗಳನ್ನು ಇಡುತ್ತದೆ.

ಪ್ರಣವ ಸ್ವರೂಪಿಯಾದ ಪರಂಜ್ಯೋತಿಯು ಈ ಮೂರು ಮೊಟ್ಟೆಗಳೂ ಒಡೆಯುವಂತೆ ಮಾಡಿ ಅದರಿಂದ ಸೃಷ್ಟಿ ಸ್ಥಿತಿಲಯಗಳಿಗೆ ಕಾರಣರಾದ ತ್ರಿಮೂರ್ತಿಗಳನ್ನು ಸೃಷ್ಟಿಸುತ್ತಾರೆ ಆ ಮೊಟ್ಟೆಯ ಚಿಪ್ಪನ್ನು ಸುಟ್ಟು ಮಹಾ ಸತಿಯರಾದ ಲಕ್ಷ್ಮಿ ಸರಸ್ವತಿ ಹಾಗೂ ಮಹೇಶ್ವರೆಯರನ್ನು ಸೃಷ್ಟಿಸುತ್ತಾರೆ ಆ ಬಳಿಕ ವರನ೦ದಿಯನ್ನೂ ಆಪ್ತ ಮೂರ್ತಿಗಳನ್ನು ಮಾಡುತ್ತಾರೆ.

ಇವರುಗಳಿಂದ ಈ ಜಗತ್ತ ಈಗಿರುವಂತೆ ಸೃಷ್ಟಿ ವಾಗುತ್ತವೆ. ಈ ಆದಿಮೂಲದ ಕಾರಣದಿಂದಾಗಿಯೇ ಪರಂಜ್ಯೋತಿ ಸ್ವರೂಪವಾದ ಪರಾತ್ಪರ ವಸ್ತುವನ್ನೆ 'ಧರೆಗೆ ದೊಡ್ಡವರು' ಎಂದೂ. 'ಧರೆಯ ತಂದವರು' ಎಂದೂ ಮಹಾಂತರು ಕರೆಯುತ್ತಾ ಬಂದಿದ್ದಾರೆ.

:: ವ್ಯಕ್ತ ಪರಂಜ್ಯೋತಿಯ ಬೆಳಕೆಲ್ಲಾ ವರ್ಣಮಯ ::
ಮುಂದೆ ಜಾ೦ಬುಲಿಂಗಯ್ಯ ಪರಂಜ್ಯೋತಿಯವರ ಪ್ರಸಾದದಿಂದ ಯೋಗ ಕನ್ಯೆಯೇೈವಳನ್ನು ವಿವಾಹವಾಗಿ ರಕ್ತ ಮುನಿ ಪಚ್ಚೆ ಮುನಿ, ಅಪು ಮುನಿ ಮತ್ತು ವಾರಮುನಿಗಳೆಂಬ ನಾಲ್ಕು ಜನ ಮಕ್ಕಳನ್ನು ಹಡೆದನು ಆಗ, ಧರೆಯ ತಂದವರು ನಂದೀಶ್ವರನಿಗೆ ಜಲಮಯವಾದ ಜಗತ್ತಿಗೆ ಹೆಪ್ಪುಗಟ್ಟು ಗಟ್ಟಿತನವನ್ನು ತಂದುಕೊಡಲು ಆಜ್ಞಾಪಿಸಿದನು. ಆ ಆಜ್ಞೆ ದಾರಿಯಾದ ನಂದೀಶನು ಜಾಂಬುಲಿ೦ಗಯ್ಯನ ಮಕ್ಕಳಿಗೆ ಗುರುವಾಗಿ ವಿದ್ಯೆ ಕಲಿಸಿಕೊಡುತ್ತಿರುವ ಕಾಲದಲ್ಲೇ ಅವರೆಲ್ಲರನ್ನೂ ಕೊಂದು ಅವರ ಶರೀರದ ರಕ್ತ ಮಾಂಸ ಮಜ್ಜೆಗಳಿಂದ ಈ ಧರೆಗೆ ಘಟ್ಟಿತನವನ್ನು ಕೊಟ್ಟನು.

ಮುಂದುವರಿಯುತ್ತದೆ ..
🙏 ಓದಿದ ಗುರುತಾಗಿ ಒಂದು ಲೈಕ್ ಮತ್ತು ಶೇರ್ ಮಾಡಿ.

👇ಮುಂದಿನ ಸಂಚಿಕೆಯಲ್ಲಿ (೨ ದಿನಗಳಲ್ಲಿ)
2. ಶಿವನಿಗೂ ದೊಡ್ಡವರಾದ ಪರಾತ್ಪರರು .
ಪರಂಜ್ಯೋತಿಯ ವಿಶೇಷ ಲೀಲಾವಿನೋದ

👈 ಹಿಂದಿನ ಸಂಚಿಕೆ: ಪ್ರಾರಂಭ ಮುನ್ನುಡಿ
ನಮ್ಮ ಬ್ಲಾಗ್ ನಲ್ಲಿ ಓದಲು:
👉 https://goo.gl/hakfDh
ಹಿಂದಿನ ಸಂಚಿಕೆ ನಮ್ಮ ವೆಬ್ಸೈಟ್ ನಲ್ಲಿ ಓದಲು:
👉 https://goo.gl/tPcDSD
ಹಿಂದಿನ ಸಂಚಿಕೆ ನಮ್ಮ ಫೇಸ್ಬುಕ್ ಪೇಜಲ್ಲಿ ಓದಲು:
👉 https://goo.gl/sSCSGt
<-------------------------->
Website: Siddappaji.com
Email: Lordsiddappaji@gmail.com

Find us: Siddappaji Lord (Admin)
Www.facebook.com/lord.siddappaji
Www.facebook.com/sri.manteswamy
Also on Twitter, Instagram & Google+

ಸಂಪೂರ್ಣ ಕಥೆ ತಿಳಿಯುವ ಆಸಕ್ತರು 👇 ಲಿಂಕ್ ಓಪನ್ ಮಾಡಿ
📓Read: https://goo.gl/aBBDN1 https://goo.gl/QYVt7o
🔊listen: https://goo.gl/hXvMdD https://goo.gl/BuXToJ https://goo.gl/e4hWAh

Www.youtube.com/c/SiddappajiLord [SUBSCRIBE 🔔]
ನಮ್ಮ ಅಧಿಕೃತ ಯೂಟ್ಯೂಬ್ ಚಾನೆಲ್ನಲ್ಲಿ (ಸಂಪೂರ್ಣ)ಕಥೆಯನ್ನು ವಿಭಿನ್ನವಾಗಿ ತೋರಿಸುವ ನಮ್ಮ ಮುಂದಿನ ಈ ಕಾರ್ಯಕ್ರಮಕ್ಕೂ ನಿಮ್ಮ ಪ್ರೋತ್ಸಾಹವಿರಲಿ.. ಧನ್ಯವಾದಗಳು 🙏

No comments:

Post a Comment