ಶ್ರೀ ಧರೆಗೆ ದೊಡ್ಡವರ ಚರಿತೆ (ಸಂಚಿಕೆ 3)

3. ಕಲ್ಯಾಣದತ್ತ ಹೊರಡಲೇಬೇಕಾದ ಕೈಲಾಸ

ಬೆಳಕನ್ನು ಪಡೆದ ಕೈಲಾಸ ಸಡಗರ ಸಂಭ್ರಮಗಳೆಲ್ಲ ಮೆರೆಯ ತೊಡಗಿತು : ನಂದೀಶ್ವರನು ಭೂಲೋಕಕ್ಕೆ ಬಂದು ಲಿಂಗಾಂಗಿಗಳಿಲ್ಲದವರಿಗೆಲ್ಲಾ ಲಿಂಗಧಾರಣೆ ಮಾಡಿಸುತ್ತಾ ಹೊರಟು, ಕಡೆಗೆ ಅನಿಮಿಷಾರ್ಯರ ಭೇಟಿಯಾಗಿ ಅವರ ಅಂಗದ ಮೇಲೆ ಲಿಂಗವಿಲ್ಲ ವೆನ್ನುವ ಭ್ರಮೆಯಲ್ಲಿ ಅವರಿಗೆ ತನ್ನ ಶಿರದ ಲಿಂಗವನ್ನೇ ತೊಡಿಸಿಬಿಡುತ್ತಾನೆ. ಕೈಲಾಸಕ್ಕೆ ಹಿಂದಿರುಗುತ್ತಿರುವ ನಂದಿಯ ಎದೆಯ ಮೇಲೆ ಲಿಂಗವೇ ಇಲ್ಲದಿರುವುದನ್ನು ಕಂಡ ಬೃಂಗಿಯು ಅವನನ್ನು ಅಪಹಾಸ್ಯ ಮಾಡಿ ಮೆುೂದಲಿಸಿ, ಜರಿದು ಬಿಡುತ್ತಾನೆ. ಇದು ಪರಶಿವನಿಗೆ ವೇದ್ಯವಾಗಿ ನಂದಿಯನ್ನು ಕರೆಸಿ "ದ್ವಿತೀಯ ಶಂಭು" ನೀನೇ ಎನ್ನುವುದು ಸರಿ, ಆದರೆ, ಮಹಾಮಹಿಮರಾದ ಅನಿಮಿಷಾರ್ಯರಿಗೆ ಲಿಂಗ ವಿಲ್ಲವೆಂದರೆ ಅದು ಅಪರಾಧ, ಅದರಿಂದಾಗಿಯೇ ನೀನು ನಿರ್ಲಿಂಗಿಯಾದುದು. ಆದರೂ, ಕರ್ತವ್ಯವನ್ನು ಅತಿ ಶುದ್ಧವಾಗಿ ಎಸಗಿ ದ್ವಿತೀಯ ಶಂಭುವೇ ನೀನಾಗಿದ್ದಿಯೆ.
ಹಾಗೆಂದು ಆದ ಅಪರಾಧದಿಂದ ತಪ್ಪಿಸಿಕೊಳ್ಳುವಂತೆಯೂ ಇಲ್ಲ. ನಿನ್ನನ್ನು ಜರಿದ ಬೃಂಗಿಯಿಂದ ಹಿಡಿದು ಇಡೀ ಕೈಲಾಸವೇ ಅಪರಾಧವೆಸಗಿದೆ. ಈ ಅಪರಾಧದಿಂದ ಮುಕ್ತಿ ಪಡೆಯಲು ನಾವೆಲ್ಲಾ ಭೂಲೋಕದಲ್ಲಿ ಈಗ ಅವತರಿಸುವ ವರಿದ್ದೇವೆ. ಬನ್ನಿ ಅಲ್ಲಿ ಭೂಲೋಕದ ಕೈಲಾಸವಾದ ಕಲ್ಯಾಣದಲ್ಲಿ ನಮ್ಮ ಲೀಲಾ ವಿನೋದಗಳನ್ನು ಮೆರೆಸಿ, ಭಕ್ತ ಕೋಟಿಯನ್ನು ಉದ್ದಾರ ಮಾಡೋಣ__ಎಂದು ಹೇಳುತ್ತಾ ತನ್ನ ಸಮಸ್ತ ಪರಿವಾರದೊಡನೆ ಭೂ ಲೋಕದತ್ತ ಹೊರಡುತ್ತಾನೆ.

:: ನಿಜಭಕ್ತರ ಕಾಣಬೇಕು ಕಲ್ಯಾಣದಲ್ಲಿ ::

ವರನಂದಿಯೇ ಸಾಕ್ಷಾತ್ ಬಸವಣ್ಣನವರಾಗಿ, ಬೃಂಗಿಯೇ ಬಿಜ್ಜಳ ಮಹಾರಾಜನಾಗಿ, ನಾರದರೇ ಬಸವಣ್ಣನವರ ಮಹತ್ವವನ್ನು ಜಗತ್ತಿಗೆ ಪ್ರಕಾಶಪಡಿಸುವ ಕೊಂಡಿ ಮಂಚಣ್ಣನವರಾಗಿ, ಶಿವೆಯ ಸ್ಥೂಲ ಶರೀರವೇ ಅಕ್ಕನಾಗಮ್ಮನವರಾಗಿ ಸೂಕ್ಷ್ಮ ಶರೀರವೇ ಲೀಲಾಂಬಿಕೆಯಾಗಿ, ಶಿವಕುಮಾರನೇ ಚೆನ್ನ ಬಸವಣ್ಣನಾಗಿ ಅವತರಿಸುತ್ತಾರೆ ಈ ಧರೆಯ ಮೇಲೆ.

ಪರಮೇಶ್ವರನಾದರೋ ಇತರ ಗಣನಾಥರೊಡನೆ ತಾನೊ ಧರೆಗೆ ಬಂದು, ತಾನೇ ಕೂಡಲ ಸಂಗಮನಾಥನಾಗಿ, ತನ್ನ ಗಣ೦ಗಳೇ ಬಸವಣ್ಣನ ಮಹಾ ಮನೆಯಲಕ್ಷದಮೇಲಣ ತೊಂಬತ್ತಾರು ಸಾವಿರ ಭಕ್ತರಾಗಿ ಮೂರ್ಕರಾಗಿ ತಮ್ಮ ತಮ್ಮ ಪಾತ್ರಗಳನ್ನು ಅಭಿನಯಿಸಲು ತೊಡಗುತ್ತಾರೆ.
ಧರೆಯ ಜ್ಯೋತಿಗೆ ಪರಂಜ್ಯೋತಿ ಕೂಡಿಕೊಳ್ಳುವ, ನಾಟಕ ವಿದ್ಯೆಯಲ್ಲ ಅದನ್ನೇ ಶರಣರ ದಿವ್ಯ ಚರಿತ್ರೆ ಎನ್ನುವರು.

:: ನಿಜಭಕ್ತಿಯ ಮಾಡಿ ಅಹಂಕಾರಿಯಾದ ಬಸವಣ್ಣ ::

ಅಣ್ಣ ಬಸವ ಒಂದು ಬದನೆಕಾಯಿ ಹಾಕಿ, ಒಕ್ಕಳ ಅಕ್ಕಿ ಹಾಕಿ ಆರಾಧನೆ ಮಾಡಿ, ಲಕ್ಷಣ ಮೇಲಣ ತೊಂಬತ್ತಾರು ಸಾವಿರ ಗಣ೦ಗಳಿಗೆಲ್ಲಾ' ನಿತ್ಯ ಭೋಜನ ಮಾಡಿಸುತ್ತಾ ಬರುತ್ತಿರುವಾಗ ಅಹಂಕಾರ ಪ್ರಾಪ್ತವಾಗಿ, ಹೆಂಡತಿ ನೀಲಮ್ಮ ನಿಗೆ "ಈ ಲೋಕದಲ್ಲಿ ನನಗಿಂತಲೂ ಹೆಚ್ಚಿನ ಧರ್ಮ ಗುರುವೇ ಇಲ್ಲ" ಎಂದು ಬಿಡುತ್ತಾರೆ. ಇದೇನೆಂದರೆ ಪರಿತಪಿಸುವ ನೀಲಮ್ಮನವರಿಗೆ ಕನಸಿನಲ್ಲಿ ಕಾಣಿಸಿಕೊಂಡ ಪರಂಜ್ಯೋತಿಯವರು "ಕಲ್ಯಾಣಕ್ಕೆ ನಾವು ಸದ್ಯದಲ್ಲಿಯೇ ಬಂದು ನಮ್ಮ ಭಕ್ತರ ನಿಜವನ್ನು ಪರೀಕ್ಷಿಸುತ್ತೇವೆ" ಎಂದು_ಹೇಳುತ್ತಾರೆ. ಆಗ ಘನ ನೀಲಮ್ಮ" ಕಲ್ಯಾಣದ ಕಡೆಯ ಬಾಗಿಲಲ್ಲಿ ನಾಲಿಗೆಯೇ ಇಲ್ಲದ ಗಂಟೆಯೊಂದನ್ನು ಕಟ್ಟಿಬಿಡಿ, ಅದು ಒಂದು ದಿನ ಶಬ್ದ ಮಾಡಿ ಓಂಕಾರ ಹಾಡಿ, ನಿಮಗಿಂತಲೂ ಹೆಚ್ಚಿನ ನಿಜಗುರುಗಳು ಕಲ್ಯಾಣಕ್ಕೆ ಬಂದಿರುವುದನ್ನು ಸಾರುತ್ತದೆ" ಎಂದು ಹೇಳುತ್ತಾರೆ.

ಮುಂದುವರಿಯುತ್ತದೆ ..
🙏 ಓದಿದ ಗುರುತಾಗಿ ಒಂದು ಲೈಕ್ ಮತ್ತು ಶೇರ್ ಮಾಡಿ.

👇ಮುಂದಿನ ಸಂಚಿಕೆಯಲ್ಲಿ (೨ ದಿನಗಳಲ್ಲಿ)
4. ಲೀಲಾ ಪರಂಜ್ಯೋತಿಗಳು ಕಲ್ಯಾಣಕ್ಕೆ ಬರುತ್ತಾರೆ.

👈 ಹಿಂದಿನ ಸಂಚಿಕೆ:
2. ಶಿವನಿಗೂ ದೊಡ್ಡವರಾದ ಪರಾತ್ಪರರು
ಪರಂಜ್ಯೋತಿಯ ವಿಶೇಷ ಲೀಲಾವಿನೋದ
ನಮ್ಮ ಬ್ಲಾಗ್ ನಲ್ಲಿ ಓದಲು:
👉 https://goo.gl/atRMSc
ಹಿಂದಿನ ಸಂಚಿಕೆ ನಮ್ಮ ವೆಬ್ಸೈಟ್ ನಲ್ಲಿ ಓದಲು:
👉 https://goo.gl/ZTr4Ui
ಹಿಂದಿನ ಸಂಚಿಕೆ ನಮ್ಮ ಫೇಸ್ಬುಕ್ ಪೇಜಲ್ಲಿ ಓದಲು:
👉 https://goo.gl/nrz7d6
<-------------------------->
Website: Siddappaji.com
Email: Lordsiddappaji@gmail.com

Find us: Siddappaji Lord (Admin)
Www.facebook.com/lord.siddappaji
Www.facebook.com/sri.manteswamy
Also on Twitter, Instagram & Google+

ಸಂಪೂರ್ಣ ಕಥೆ ತಿಳಿಯುವ ಆಸಕ್ತರು 👇 ಲಿಂಕ್ ಓಪನ್ ಮಾಡಿ
📓Read: https://goo.gl/aBBDN1 https://goo.gl/QYVt7o
🔊listen: https://goo.gl/hXvMdD https://goo.gl/BuXToJ https://goo.gl/e4hWAh

Www.youtube.com/c/SiddappajiLord [SUBSCRIBE 🔔]
ನಮ್ಮ ಅಧಿಕೃತ ಯೂಟ್ಯೂಬ್ ಚಾನೆಲ್ನಲ್ಲಿ (ಸಂಪೂರ್ಣ)ಕಥೆಯನ್ನು ವಿಭಿನ್ನವಾಗಿ ತೋರಿಸುವ ನಮ್ಮ ಮುಂದಿನ ಈ ಕಾರ್ಯಕ್ರಮಕ್ಕೂ ನಿಮ್ಮ ಪ್ರೋತ್ಸಾಹವಿರಲಿ.. ಧನ್ಯವಾದಗಳು 🙏

No comments:

Post a Comment