ಶ್ರೀ ಧರೆಗೆ ದೊಡ್ಡವರ ಚರಿತೆ (ಸಂಚಿಕೆ 4)

4. ಲೀಲಾ ಪರಂಜ್ಯೋತಿಗಳು ಕಲ್ಯಾಣಕ್ಕೆ ಬರುತ್ತಾರೆ.

ಆಗ ಅಣ್ಣ ಬಸವಣ್ಣನಿಗೂ ಪೂರ್ವ ಸ್ಮರಣೆ ಬಂದು "ನಿಜ ಕಣೆ, ನಿನ್ನ ಮಾತು ಹೆಚ್ಚಿನ ಹೆಚ್ಚಿನ ಗುರುಗಳು ಕಲ್ಯಾಣಕ್ಕೆ ಇನ್ನೇನು ಬರುತ್ತಾರೆ ಎನ್ನುವಾಗ ಮಹಾಮಹ೦ತ ಹರಳಯ್ಯನವರು ಚಿಮ್ಮಾಳಗೆಯೊಂದು ಜೊತೆಯಲ್ಲಿ ಮಾಡಿಕೊಂಡು ಬರುತ್ತಾರೆ. ಆ ಮುತ್ತಿನ ಹಾವುಗೆಯೇ ಆ ಮಹಾ ಗುರುವು ಬರುವ ಮುನ್ಸೂಚನೆ" ಎಂದರು.
ಇದ್ದಕ್ಕಿದ್ದಂತೆಯೇ ಒಂದು ದಿನ ಅಣ್ಣ ಬಸವಣ್ಣನವರು ತಮಗೆ ಸಲ್ಲುವುದಕ್ಕಿಂತಲೂ ಹೆಚ್ಚಿನ ಗೌರವ ತೋರಿದರೆಂದು ಅದರಿಂದ ತಮಗೆ ಪಾಪದ ಹೊರೆ ಏರಿ ಬಂತೆಂದೂ, ಅದರ ಪರಿಹಾರಾರ್ಥವಾಗಿ ತಮ್ಮ ಬಲ ತೊಡೆಯ ಚರ್ಮ ಹಾಗೂ ತಮ್ಮ ಮಡದಿಯ ಎಡ ತೊಡೆಯ ಚರ್ಮಸುಲಿದು ಮುತ್ತಿನ ಪವಿತ್ರ ಹಾವುಗೆಯನ್ನು ಮಾಡಿ ಅಣ್ಣನವರ ಪಾದಗಳಿಗೆ ತೊಡಿಸುವ ಆಸೆ ಹೊತ್ತು ಬಂದರು.
ಆಗ ಬೆಚ್ಚಿಬಿದ್ದ ಬಸವಣ್ಣ "ಮಹಾ ಶರಣ ಹರಳಯ್ಯನವರೆ, ನೀವು ಮಾಡಿರುವ ಈ ಹಾವುಗೆ ಮುಂದೆ ಬರುವ ಮಹಾಂತ ಮಹಾದೇಶ್ವರರು ಧರಿಸುವ ಹಾವುಗೆ. ಅವರಿಗಾಗಿ ನಾವು ಅವುಗಳನ್ನು ಜೋಪಾನವಾಗಿಡಿ" ಎಂದು ತಮಗೆ ಬರಬೇಕಾದ ಮುನ್ಸೂಚನೆ ಬಂತೆಂದು ಇನ್ನೇನು ತಮ್ಮ ಧರ್ಮಗುರುವಾದ ಅಲ್ಲಮಪ್ರಭುಗಳು_ಆದಿಪರಂಜ್ಯೋತಿಯವರು ಬಂದೇ ಬರುವರೆಂದು ಅವರಿಗಾಗಿ ಮೈಮನವೆಲ್ಲಾ ಕಣ್ಣಾಗಿ ಕಾಯುತ್ತಾ ಕುಳಿತರೆ
ನಾಲಗೆ ಇಲ್ಲದ ಗಂಟೆ ಮಂಗಳವಾದ್ಯವನ್ನು ಮಾಡುತ್ತಿರಲಾಗಿ, ಕಲ್ಯಾಣದ ಕಡೆಯ ಬಾಗಿಲ ಬಳಿಯ ಪಾರದವರ ಮುಂದೆ ತೀರ ಚಿತ್ರ ವಿಚಿತ್ರವಾದ ಅದಿ ಕೊಳಕಾದ ಬಟ್ಟೆ ಬರೆತೊಟ್ಟು, ಎಡಗೈಯಲ್ಲಿ ಹೆಂಡದ ಗಡಿಗೆ ಹಿಡಿದು ಹೆಗಲ ಮೇಲೆ ಸತ್ತ ಎಮ್ಮೆ ಕರುವಿನ ಚಕ್ಕಳ ಹೊತ್ತು, ಸೊತ್ತ ಕಾಲುಕೈ ಯವರಂತೆ ಹಿ೦ದಿದ್ದಕ್ಕೆ ಓಡೋಡುತ್ತಾ ಮುಂದೆ ಮುಂದಕ್ಕೆ ನಡೆದಾಡುತ್ತಾ ಬಂದು ನಿಂತು ಹೇಳುತ್ತಾರೆ.

"ಅಪ್ಪಾ, ನಾವು ಏಳೇಳು ಲೋಕಗಳನ್ನು ಆಳಿ ಬಾಳಿ ಬಂದವರು. ಈಗ ಬಹಳ ಹಸಿವಾಗುತ್ತಿದೆ. ಬಸವಣ್ಣನವರ ಆರೋಗಣೆಯಲ್ಲಿ ನಮ ಗೊ೦ದಿಟ್ಟು ಊಟ ಸಿಕ್ಕಿದರೆ ಬಹಳ ಪುಣ್ಯ ಬರುತ್ತದೆ ನಿಮಗೆ, ನಿಮ್ಮ ಅಣ್ಣನವರಿಗೆ"
ಪಹರೆಯವರು ಒಪ್ಪದೆ ಹೋಗುತ್ತಾರೆ, ಆಗ ಆ ಪರಂಜ್ಯೋತಿ ಸ್ವರೂಪದ ಹುಚ್ಚಯ್ಯನವರು  "ದಿನವೂ ಲಕ್ಷಣ ಮೇಲೆ ತೊಂಬತ್ತಾರು ಸಾವಿರ ಜನರಿಗೆ ಲಿಂಗಧಾರಣೆ ಮಾಡಿಸಿ ಅನ್ನ ನೀಡುವ ನಿಮ್ಮ ಬಸವಣ್ಣನವರಿಗೆ ನನ್ನೊಬ್ಬನಿಗೆ ಅನ್ನ ನೀಡಿಬಿಟ್ಟರೆ ಪಾಪ ಬಂದು ಬಿಡುವುದೆ?" ಎಂದು ಜರಿದು ಮೂದಲಿಸಿ ಅವರ ಕೈಯಿಂದ ದೊಣ್ಣೆಯ ಏಟುಗಳನ್ನು ತಿಂದುಕೊಂಡು. "ನನಗೆ ಬಸವನ ಮಹಾಮನೆಯೇ ಬೇಡ"ವೆಂದುಕೊಂಡ ಹರಳಯ್ಯನವರ ಮನೆಯ ಹಿತ್ತಲಿನ ಗೊಬ್ಬರದ ಮೇಲೆ ಬಂದು ತಂಗಿ ಬಿಡುತ್ತಾರೆ. ಅಲ್ಲಿನ ಕೋಳಿಗಳು ಕೂಗುತ್ತವೆ. ಪಹರೆಯವರು ಹೊಡೆದ ಏಟುಗಳು ಬಸವಣ್ಣನವರಿಗೂ ನೀಲಮ್ಮನವರಿಗೂ ಬೀಳುತ್ತವೆ. ಆಗ ಎಚ್ಚರಗೊಂಡ ಅಣ್ಣ ಬಸವಣ್ಣನವರು ತಮ್ಮ ಪತ್ನಿಯ ಜೊತೆಗೂಡಿ ನಾಲಿಗೆ ಇಲ್ಲದ ಚಕ್ಕಳದ ಗಂಟೆಯ ಶಬ್ದವನ್ನು ಕೆಳಕೇಳುತ್ತಾ ಊರೆಲ್ಲ ಹುಡುಕುತ್ತಾರೆ ಕಟ್ಟಕಡೆಗೆ ಜಗದ್ಗುರು ಅಲ್ಲಮ ಪ್ರಭುಗಳ ಮಹಾ ಶರಣ ಹರಳಯ್ಯನವರ ಮನೆಯ ಹಿತ್ತಲಿನ ತಿಪ್ಪೆಯ ಮೇಲೆ ಮಲಗಿ ಆನಂದಿಸುತ್ತಾ ಇರುವ ಪರಮ ಪರಂಜ್ಯೋತಿಯನ್ನು ಕಾಣುತ್ತಾರೆ. ಹೆಗಲ ಮೇಲಿದ್ದ ಎಮ್ಮೆಕರುವಿನ ಚಕ್ಕಳ ಜೀವಧರಿಸಿ ಬದಿಯಲ್ಲೇ ಆಡುತ್ತಿರುತ್ತದೆ. ಇಷ್ಟು ದಿನ ಕಾದ ಪ್ರಭು ದೊರಕಿದ ಸಂತಸದಲ್ಲಿ ಬಸವಣ್ಣನವರು ಸಪತ್ತಿೇಕರಾಗಿ ಪರಂಜ್ಯೋತಿಗೆ ಸಾಷ್ಟಾಂಗ ಪ್ರಣಾಮ" ಮಾಡಿ, ದೇವನ್ನನ್ನು ಪರೀಕ್ಷಿಸಿದು ಇನ್ನು ಸಾಕು, ನನ್ನ ಮೇಲೆ ಈಗ ಕೃಪೆ ಮಾಡಿ, ನಿಮ್ಮ ಪಾದಧೂಳಿಯಿಂದ ಪವಿತ್ರ ವಾಗಬೇಕಾಗಿರುವ ಮಹಾ ಮನೆಗೆ ದಯಮಾಡಿಸಿ" ಎಂದು ಬೇಡಿಕೊಳ್ಳುತ್ತಾರೆ.
ಪ್ರಭು ತಾವಾಯಿತು ತಮ್ಮ ಹೆಂಡದ ಗಡಿಗೆಯಾಯಿತು__ಹಾಗೆ ಇದ್ದು ಬಿಡುತ್ತಾರೆ. ಪ್ರಭುವನ್ನು ಸತಿಪತಿಗಳಿಬ್ಬರೂ ಹಿಡಿದು ಎತ್ತಿ ಕರೆದುತರಲೆಂದು ತೀರ್ಮಾನಿಸಿ ಕೈಗಳನ್ನು ಹಿಡಿದರೆ ಕೈಗಳೇ ಹಿಂದೆ ಬರುತ್ತದೆ:ಕಾಲುಗಳನ್ನು ಹಿಡಿದರೆ ಕಾಲುಗಳೇ ಹಿಂದೆ ಬರುತ್ತದೆ: ಈ ಲೀಲಾ ವಿಲಾಸವನ್ನು ಕಂಡ ನೀಲಮ್ಮನವರು ರುಂಡ ಮುಂಡ ಕೈ ಕಾಲುಗಳೇ ಬೇರೆ ಬೇರೆಯಾಗಿ ಕೈಗೆ ಸಿಕ್ಕ ಪ್ರಭುವನ್ನು ಪತಿಯೇ ಹೆಗಲ ಮೇಲಣ ವಸ್ತ್ರದಲ್ಲಿ ಕಟ್ಟಿಕೊಂಡು, ನೆತ್ತಿಯ ಮೇಲೆ ಹೊತ್ತುಕೊಂಡು ಬರುವಂತೆ ತಮ್ಮ ಪತಿಯರಿಗೆ ಭಿನ್ನವಿಸಿಕೊಂಡು, ತಾವು ಆ ಎಮ್ಮೆಯ ಕರುವನ್ನು ಅಟ್ಟಿಸಿಕೊಂಡು ಸುರಾಪಾನದ ಗಡಿಗೆಯನ್ನು ಕೈಯಲ್ಲಿ ಹಿಡಿದುಕೊಂಡು ಮಹಾಮನೆಗೆ ಬರುತ್ತಾರೆ. ಬಂದು ಉರಿಗದ್ದಿಗೆಯ ಮೇಲೆ ಎಕಾರವಾದ ಗುರುವಿನ ಶರೀರವನ್ನು ಮೂರ್ತಗೊಳಿಸಿ, ಸಪತ್ನಿೇಕರಾಗಿ, ನೀಲ ಲೋಚರೆಯೊಡಗೂಡಿ ಕರ್ಪೂರದ ಆರತಿಯನ್ನು ಬೆಳಗಿ ಕ್ಷಮೆಯಾಚಿಸುತ್ತಾ.
"ಮಹಾ ಜಗದ್ಗುರು, ನಮ್ಮ ಅಪರಾದ೦ಗಳನ್ನು ಮನ್ನಿಸಿ ಮೈದೋರಿ ಹರಿಸಪ್ಪ" ಎಂದು ಪ್ರಾರ್ಥಿಸುತ್ತಾರೆ. ಆಗ ಪ್ರಭುದೇವರು ಪರಂಜ್ಯೋತಿಯಾಗಿ ರೂಪು ತಳೆದು ಲೋಕದಲ್ಲಿ ಶರಣ ತತ್ವಗಳನ್ನು ಹೀಗೆ ಪ್ರಚಾರ ಮಾಡಬೇಕು, ಶಿವಾಚಾರವನ್ನು ಉಳಿಸಿ ಬೆಳಸಿಕೊಳ್ಳಬೇಕು_ಎಂದೆಲ್ಲಾ ಹೇಳಿ, ಬಸವಣ್ಣನವರನ್ನೂ ಅವರ ಅಪಾರ ಶಿಷ್ಯರನ್ನೂ ಅನುಗ್ರಹಿಸುತ್ತಾರೆ. ತಾವು ಜ್ಯೋತಿಪ್ರಕಾಶರಾಗಿ ಮರೆಯುತ್ತಾರೆ.

ಸ್ವಲ್ಪ ಕಾಲ ಮಹಾಮನೆಯಲ್ಲಿ ನೆಲೆಸಿದ್ದ ಪ್ರಭುದೇವರಿಗೆ ಮುಂದೆ ತಾವು ಕೈಗೊಳ್ಳಬೇಕಾದ ಸಂಚಾರದ ಅರಿವಾಗಿ ತಮ್ಮ ಸಂಚಾರ ಹಾಗೂ ಪ್ರಚಾರಕಾರ್ಯಕ್ಕೆ ನೆರವಾಗಲೆಂದು ಶಿಷ್ಯರನ್ನು ಮಹಾಮನೆಯ ಶರಣರ ಗಣದಲ್ಲೇ ಆರಿಸುತ್ತಾರೆ.

ಮುಂದುವರಿಯುತ್ತದೆ ..
🙏 ಓದಿದ ಗುರುತಾಗಿ ಒಂದು ಲೈಕ್ ಮತ್ತು ಶೇರ್ ಮಾಡಿ.

👇ಮುಂದಿನ ಸಂಚಿಕೆಯಲ್ಲಿ (೨ ದಿನಗಳಲ್ಲಿ)
5. ಪರಂಜ್ಯೋತಿಗಳು ಕಲ್ಯಾಣದಲ್ಲಿ ಶಿಷ್ಯರನ್ನು ಆರಿಸುತ್ತಾರೆ.

👈 ಹಿಂದಿನ ಸಂಚಿಕೆ:
3. ಕಲ್ಯಾಣದತ್ತ ಹೊರಡಲೇಬೇಕಾದ ಕೈಲಾಸ, ನಿಜಭಕ್ತರ ಕಾಣಬೇಕು ಕಲ್ಯಾಣದಲ್ಲಿ, ನಿಜಭಕ್ತಿಯ ಮಾಡಿ ಅಹಂಕಾರಿಯಾದ ಬಸವಣ್ಣ.
ನಮ್ಮ ಬ್ಲಾಗ್ ನಲ್ಲಿ ಓದಲು:
👉 https://goo.gl/CkJAgi
ಹಿಂದಿನ ಸಂಚಿಕೆ ನಮ್ಮ ವೆಬ್ಸೈಟ್ ನಲ್ಲಿ ಓದಲು:
👉 https://goo.gl/JmviG9
ಹಿಂದಿನ ಸಂಚಿಕೆ ನಮ್ಮ ಫೇಸ್ಬುಕ್ ಪೇಜಲ್ಲಿ ಓದಲು:
👉 https://goo.gl/V37TTg
<-------------------------->
Website: Siddappaji.com
Email: Lordsiddappaji@gmail.com

Find us: Siddappaji Lord (Admin)
Www.facebook.com/lord.siddappaji
Www.facebook.com/sri.manteswamy
Also on Twitter, Instagram & Google+

ಸಂಪೂರ್ಣ ಕಥೆ ತಿಳಿಯುವ ಆಸಕ್ತರು 👇 ಲಿಂಕ್ ಓಪನ್ ಮಾಡಿ
📓Read: https://goo.gl/aBBDN1 https://goo.gl/QYVt7o
🔊listen: https://goo.gl/hXvMdD https://goo.gl/BuXToJ https://goo.gl/e4hWAh

Www.youtube.com/c/SiddappajiLord [SUBSCRIBE 🔔]
ನಮ್ಮ ಅಧಿಕೃತ ಯೂಟ್ಯೂಬ್ ಚಾನೆಲ್ನಲ್ಲಿ (ಸಂಪೂರ್ಣ)ಕಥೆಯನ್ನು ವಿಭಿನ್ನವಾಗಿ ತೋರಿಸುವ ನಮ್ಮ ಮುಂದಿನ ಈ ಕಾರ್ಯಕ್ರಮಕ್ಕೂ ನಿಮ್ಮ ಪ್ರೋತ್ಸಾಹವಿರಲಿ.. ಧನ್ಯವಾದಗಳು 🙏

No comments:

Post a Comment