ಶ್ರೀ ಧರೆಗೆ ದೊಡ್ಡವರ ಚರಿತೆ (ಸಂಚಿಕೆ 5)

5. ಪರಂಜ್ಯೋತಿಗಳು ಕಲ್ಯಾಣದಲ್ಲಿ ಶಿಷ್ಯರನ್ನು ಆರಿಸುತ್ತಾರೆ.

"ಅಣ್ಣ ಬಸವಣ್ಣನವರೇ. ಅಕ್ಕ ನೀಲಮ್ಮನವರೇ. ನಿಮ್ಮ ಬಳಿ ಇರುವ ಕಾಲಜ್ಞಾನದ ಪುಸ್ತಕಗಳನ್ನು ನಾಲ್ಕು ಪಾದದ ಜೋಳಿಗೆಯನ್ನು ನಮಗೆ ದಾನ ಮಾಡಿಕೊಡಿ
ಹಾಗೆಯೇ ನಿಮ್ಮ ಬಳಿ ಇರುವ ಸಿದ್ದಪ್ಪ ಹಾಗೂ ರಾಚಪ್ಪ, ಫಲಾರದಯ್ಯ ಹಾಗೂ ಚಿನ್ನಾಜಮ್ಮ ಇವರುಗಳನ್ನು ಶಿಶುಗಳನ್ನಾಗಿಮಾಡಿ ನಮ್ಮ ಜೋಳಿಗೆಗೆ ದಾನವಾಗಿ ಹಾಕಿಬಿಡಿ ಅವರೇ ಮುಂದೆ ನಮ್ಮ ಶಿಷ್ಯರಾಗಿ ನಮ್ಮ ಲೀಲಾ ವಿನೋದಗಳನ್ನು ಜಗತ್ತಿಗೆ ಹರಡುತ್ತಾರೆ ನಾವು ಕಲ್ಯಾಣದ ಶಿವಯೋಗಿವನ್ನು ಜಗತ್ತಿನ ತುಂಬೆಲ್ಲಾ ತುಂಬಿ ಆಳುತ್ತೇವೆ" ಎನ್ನುತ್ತಾರೆ. ಆ ಕೂಡಲೇ ಅಣ್ಣನವರು ಸಪತ್ನಿಕರಾಗಿ ನಾಲ್ಕು ಪಾದದ ಜೋಳಿಗೆ ಹಾಗೂ ಕಾಲಜ್ಞಾನದ ಪುಸ್ತಕವನ್ನು ಮತ್ತು ಫಲಾರದಯ್ಯನವರನ್ನು ಹಾಗೂ ಚೆನ್ನಜಮ್ಮನನ್ನು ತಂದು ದಾನ ನೀಡಿ ಬಿಡುತ್ತಾ.

"ನಮ್ಮ ರಾಚಪ್ಪಾಜಿಯು ಸುರಮ್ಮ ಹಾಗೂ ಕೂಡಲ ಸಂಗಮ ದೇವರಲ್ಲಿ ಜನಿಸಿದ ಶರಣ. ಈ ಶರಣರನ್ನು ನಮ್ಮ ಬಳಿ ಬಿಡುವಾಗ ಇವರ ತಂದೆತಾಯಿಗಳು ಈತನ ವಿವಾಹಾದಿ ಜವಾಬ್ದಾರಿಗಳನ್ನು ನೀವೇ ಹೊರಬೇಕೆಂದು ಹೇಳಿದ್ದರು ನಾವು ಪ್ರೀತಿಯಿಂದ ಒಪ್ಪಿಯೂ ಒಪ್ಪಿದ್ದೇವೆ. ಆ ಕಾರಣದಿಂದಾಗಿ ನೀವು ರಾಚಪ್ಪಾಜಿಯನ್ನು ಮಗು ರಾಚಪ್ಪ, ನಿನ್ನ ಕಲ್ಯಾಣಾಧಿ ಸಕಲ ಮಂಗಳ ಕಾರ್ಯಗಳನ್ನು ನಾವು ಮಾಡಿಕೊಡುತ್ತೆವೆ. ನಮ್ಮೊಡನೆ ನೀನು ಪ್ರೀತಿಯಿಂದ ಬಾ'_ಎಂದು ಕರೆದುದೇ ಆದರೆ ರಾಚಪ್ಪಾಜಿಯು ನಿಮ್ಮೊಡನೆ ಪ್ರೀತಿಯಿಂದ ಬರುತ್ತಾರೆ" ಎಂದು ಹೇಳಿ ನಮಸ್ಕರಿಸುತ್ತಾರೆ, ಪ್ರಭು ಅದಕ್ಕೆ ತಮ್ಮ ಸಮ್ಮತಿಯನ್ನು ಕೊಡುತ್ತಾರೆ. ಆಗ ಮತ್ತೆ ಅಣ್ಣನವರು ಸಪತ್ನೀಕರಾಗಿ,  "ಪ್ರಭು ತಮ್ಮನ್ನು ನಾವುಗಳಿಬ್ಬರೂ ಹೊತ್ತು ತಂದುದಕ್ಕಾಗಿ ಕಲ್ಯಾಣದ ಜ೦ಗಮವೆಲ್ಲಾ ಊಟವನ್ನೇ ಬಿಟ್ಟು, ಸ್ನಾನಕ್ಕಾಗಿ ಹೋಗಿ ಬಿಟ್ಟಿದ್ದಾರೆ. ಅವರೆಲ್ಲಾ ಪ್ರೀತಿಯಿಂದ ಹಿಂದಿರುಗಿ ನಮ್ಮನ್ನು ಅನುಗ್ರಹಿಸುವಂತೆ ಮಾಡಿಕೊಡಿ ಎಂದು ಪರಂಜ್ಯೋತಿ ಸ್ವರೂಪವನ್ನು ಪ್ರಾರ್ಥಿಸುತ್ತಾರೆ. ಪ್ರಭಾತೇವರು ಆಗ ನಗುತ್ತಾ ಹೇಳುತ್ತಾನೆ: "ನಿಮ್ಮ ಆ ಎಲ್ಲ ಭಕ್ತ ಜಂಗಮಯ್ಯಗಳ ಲಿಂಗಗಳೆಲ್ಲಿವೆ ಬಲ್ಲಿರಾ? ಅಲ್ಲಿ ನೋಡಿ ಆ ಹೆಂಡದ ಗಡಿಗೆಯಲ್ಲಿ ಬಿದ್ದು ವಿಲಿವಿಲನೆ ವದ್ದಾಡುತ್ತಿರುವ" ಅಣ್ಣನವರು ನೀಲಮ್ಮನು ದೃಷ್ಟಿಯಿಟ್ಟು ನೋಡಲಾಗಿ ಆ ಎಲ್ಲರ ಲಿಂಗಗಳು ಹೆಂಡದ ಗಡಿಗೆಯಲ್ಲಿ ಬಿದ್ದಿರುತ್ತವೆ.
ಅಲ್ಲಮ ಪ್ರಭುಗಳು ರಾಚಪ್ಪಾಜಿಯನ್ನು ಕರೆದುಕೊಂಡು ಕಲ್ಯಾಣದ ಕಡೆಯ ಬಾಗಿಲಿಗೆ ಬರುತ್ತಾರೆ. ಅವರೊಡನೆ ಬಸವಣ್ಣ ಹಾಗೂ ನೀಲಮ್ಮನವರೇ ಅಲ್ಲದೆ. ಅಕ್ಕ ನಾಗಮ್ಮನವರು ಬರುತ್ತಾರೆ.

ಆ ವೇಳೆಗೆ ಸರಿಯಾಗಿ ಸ್ಥಾನಕ್ಕಾಗಿ ಇಳಿದ ಜಂಗಮ ಸ್ತೋಮ ತಾವು ಸ್ನಾನಮಾಡಿ ಮೇಲೇಳುವ ಹೊತ್ತಿಗೆ ಸರಿಯಾಗಿ ತಾವುಗಳು ಧರಿಸಿದ್ದ ಲಿಂಗಗಳೇ ಇಲ್ಲದಂತಾಗಿ ಆ ಲಿಂಗಗಳು ಇಲ್ಲವಾಗಿರಲು ಕಾರಣ ತಾವು ಅಣ್ಣನವರು ಹೊತ್ತು ಹೋಗುತ್ತಿದ್ದ ನಿಜ ಜಂಗಮನ ಮಾಂಸದ ಮೂಟೆ ಕಂಡು ಅಸಹ್ಯ ಪಟ್ಟುದೇ ಕಾರಣವೆಂದು ಮನಗಂಡು ತಮ್ಮ ಲಿಂಗಗಳನ್ನು ಪಡೆಯಲು ಆ ಮಹಾ ಜಂಗಮ ಶ್ರೇಷ್ಠನನ್ನೇ ಬೇಡಬೇಕೆಂದು ಮನಗಂಡು ಆ ಪರಂಜ್ಯೋತಿಯಾಗಿ ಹುಡುಕುತ್ತಿರುತ್ತಾರೆ.

ಸ್ವಾಮಿ ಪ್ರಭುದೇವ ಪರಂಜ್ಯೋತಿಯನ್ನು ಕಾಣುತ್ತಿದ್ದಂತೆಯೇ ಅವರ ಶ್ರೀ ಪಾದಪಾದ್ಮಗಳಿಗೆ ಎರಗಿ "ಸ್ವಾಮಿ, ನಮ್ಮ ಅಪರಾಧಗಳನ್ನು ಮನ್ನಿಸಿ ದಯವಿಟ್ಟು ನಮ್ಮ ನಮ್ಮ ಲಿಂಗಗಳನ್ನು ನಮಗೆ ಹಿಂದಿರುಗಿಸಿಕೊಡಿ"_ ಎಂದು ಪ್ರಾರ್ಥಿಸುತ್ತಾರೆ. ಆಗಲಾಗಿ ಸ್ವಾಮಿಯು ಅವರೆಲ್ಲರನ್ನು ಬೈದು ವಿವೇಕ ಹೇಳಿ ಪರಾತ್ಪರ ವಸ್ತುವನ್ನು ತಿಳಿಯುವ ವಿಧಾನವನ್ನು ತಿಳಿಸಿ ಅವರೆಲ್ಲರ ಲಿಂಗಗಳನ್ನು ಅವರೆಲ್ಲರಿಗೆ ದಯಪಾಲಿಸಿ ಮುಂದಕ್ಕೆ ಹೆಜ್ಜೆ ಇಡುತ್ತಾರೆ.

ಆಗ ಅಲ್ಲೇ ವೀರಭದ್ರನ ಹಲಗೆಯನ್ನು ಗೇಯುತ್ತಾ ಕುಳಿತಿದ್ದ ಬಾಚಿ ಬಸವಯ್ಯ ಓಡೋಡಿ ಬಂದು ಪ್ರಭುವಿನ ಪಾದಗಳಿಗೆ ಎರಗಿ. "ನನ್ನನ್ನು ಶಿಷ್ಯನನ್ನಾಗಿ ಸ್ವೀಕರಿಸಿ" ಎಂದು ಪ್ರಾರ್ಥಿಸಿ ಕೊಳ್ಳುತ್ತಾನೆ. ಅದಕ್ಕೆ ಪ್ರಭು, ಮಗು ನಿನ್ನ ಕರ್ಮ ಇನ್ನೂ ಸವೆದಿಲ್ಲ__ ನೀನು ನಿನ್ನ ಮುಂದಣ ಜನ್ಮದಲ್ಲಿ ಮುದ್ದೋಜಿ ಹಾಗೂ ಲಿಂಗಮ್ಮರ ಹೊಟ್ಟೆಯಲ್ಲಿ ಹುಟ್ಟುತ್ತಿಯೆ ನಿನಗೆ ಏಳನೇ ವರ್ಷ ಪ್ರಾಪ್ತವಾಗುವ ಸರಿಸುಮಾರಿಗೆ ನಾನು ಬಂದು ನಿನ್ನನ್ನು ಶಿಷ್ಯನನ್ನಾಗಿ ಸ್ವೀಕರಿಸಿ, ಅನುಗ್ರಹಿಸುವೆ" ಎಂದು ಹೇಳಿ ಹರಸಿ ಆ ಕೂಡಲೇ ಬಾಚಿ ಬಸವಣ್ಣನನ್ನು ಪ್ರಸ್ತುತ ಕಾಯದಿಂದ ಬೇರ್ಪಡಿಸಿ ಮುದ್ದೊಜಿ ಹಾಗೂ ಲಿಂಗಮ್ಮನವರ ಗರ್ಭದಲ್ಲಿ ಪ್ರತಿಷ್ಠಾಪಿಸಿ ಮುಂದೆ ಹೊರಡುತ್ತಾರೆ.

ಮುಂದುವರಿಯುತ್ತದೆ ..
🙏 ಓದಿದ ಗುರುತಾಗಿ ಒಂದು ಲೈಕ್ ಮತ್ತು ಶೇರ್ ಮಾಡಿ.

👇ಮುಂದಿನ ಸಂಚಿಕೆಯಲ್ಲಿ (೨ ದಿನಗಳಲ್ಲಿ)
6. ಕಲ್ಯಾಣಬಿಟ್ಟು ಪರಂಜ್ಯೋತಿಸ್ವರೂಪರು ಕೊಡೆಕಲ್ಲಿಗೆ ಬಿಜಯ ಮಾಡಿಸುತ್ತಾರೆ.

👈 ಹಿಂದಿನ ಸಂಚಿಕೆ:
4. ಲೀಲಾ ಪರಂಜ್ಯೋತಿಗಳು ಕಲ್ಯಾಣಕ್ಕೆ ಬರುತ್ತಾರೆ.
ನಮ್ಮ ಬ್ಲಾಗ್ ನಲ್ಲಿ ಓದಲು:
👉 https://goo.gl/Jf4nMj
ಹಿಂದಿನ ಸಂಚಿಕೆ ನಮ್ಮ ವೆಬ್ಸೈಟ್ ನಲ್ಲಿ ಓದಲು:
👉 https://goo.gl/tg3Fut
ಹಿಂದಿನ ಸಂಚಿಕೆ ನಮ್ಮ ಫೇಸ್ಬುಕ್ ಪೇಜಲ್ಲಿ ಓದಲು:
👉 https://goo.gl/61ytXm
<-------------------------->
Website: Siddappaji.com
Email: Lordsiddappaji@gmail.com

Find us: Siddappaji Lord (Admin)
Www.facebook.com/lord.siddappaji
Www.facebook.com/sri.manteswamy
Also on Twitter, Instagram & Google+

ಸಂಪೂರ್ಣ ಕಥೆ ತಿಳಿಯುವ ಆಸಕ್ತರು 👇 ಲಿಂಕ್ ಓಪನ್ ಮಾಡಿ
📓Read: https://goo.gl/aBBDN1 https://goo.gl/QYVt7o
🔊listen: https://goo.gl/hXvMdD https://goo.gl/BuXToJ https://goo.gl/e4hWAh

Www.youtube.com/c/SiddappajiLord [SUBSCRIBE 🔔]
ನಮ್ಮ ಅಧಿಕೃತ ಯೂಟ್ಯೂಬ್ ಚಾನೆಲ್ನಲ್ಲಿ (ಸಂಪೂರ್ಣ)ಕಥೆಯನ್ನು ವಿಭಿನ್ನವಾಗಿ ತೋರಿಸುವ ನಮ್ಮ ಮುಂದಿನ ಈ ಕಾರ್ಯಕ್ರಮಕ್ಕೂ ನಿಮ್ಮ ಪ್ರೋತ್ಸಾಹವಿರಲಿ.. ಧನ್ಯವಾದಗಳು 🙏

No comments:

Post a Comment