10. ರಾಜಬೊಪ್ಪಣಪುರ ಅಥವಾ ಒಪುಗ೦ಡಪುರ ಅಥವಾ ಬೊಪ್ಪಗೊ೦ಡನ ಪುರದ ಸ್ಥಾಪನೆ.
ಶ್ರೇಷ್ಠ ತೀರ್ಥಕ್ಷೇತ್ರ ಒಂದರ ಸ್ಥಾಪನಾರ್ಥವಾಗಿ ಪರಮ ಪರಂಜ್ಯೋತಿಯವರು ಅಮೃತ ದೃಷ್ಟಿ ಇರುವ ಮಣ್ಣನ್ನು ಹುಡುಕಿಕೊಂಡು ಅಲೆದಾಡುತ್ತಲೇ ಬರುತ್ತಾ, ಕುಂತೂರು ಬೆಟ್ಟದ ನೆತ್ತಿಯ ಮೇಲೆ ಹತ್ತಿ ನಾಲ್ಕುದಿಕ್ಕಿಗೆ ನಾಲ್ಕು ರಾಜ್ಯಗಳನ್ನು ನೋಡುತ್ತಾರೆ.
ಕಾಡಂಕನ ಹಳ್ಳಿಯ ಮಡಿವಾಳ ಮಾಚಯ್ಯನ ಹಟ್ಟಿ ಮತ್ತು ಅವನ ಹುಬ್ಬೆ ಒಲೆಗೆ ನಡುವೆ ಪ್ರದೇಶದ ಮಣ್ಣಲ್ಲಿ ಅಮೃತ ತುಷ್ಟಿ ಇರುವುದನ್ನು ಗುರುತಿಸಿದ ಕಾರಣ, ಅಂದರೆ ಆ ಪ್ರದೇಶ ಪರಂಜ್ಯೋತಿಯವರ ಒಪ್ಪಿಗೆ ಕೈಗೊಂಡ ಅಥವಾ ಒಪ್ಪಿಕೊಂಡ ಪ್ರದೇಶವಾದ್ದರಿಂದ ಅದನ್ನು ಒಪ್ಪಿಗೊ೦ಡ ಪುರ ಅಥವಾ ಬೊಪ್ಪಗೊ೦ಡನ ಪುರ ಎಂದು ಕರೆಯಲಾಯಿತು.
ಕಾಡಂಕನ ಹಳ್ಳಿಯ ಅಂಕಣಕ್ಕೆ ವೇಗವಾಗಿಯೇ ಬಂದ ಸ್ವಾಮಿ ಹೊನ್ನರಳಿಯ ಮರದ ಕಲ್ಲು ಕಟ್ಟೆಯ ಮೇಲೆ ಮೂರ್ತಗೊಳ್ಳುತ್ತಾರೆ. ಸಂಜೆ ಮೂರು ಜಾವದವರೆಗೂ ವಿಶ್ರಮಿಸಿಕೊಂಡು. ನಂತರ ಬೊಪ್ಪೆಗೌಡನ ಮನೆಗೆ ಬಿಜಯಂ ಗೈದು, ಭಿಕ್ಷೆಗಾಗಿ ಬೇಡುತ್ತಾರೆ. "ಈ ಸರಿರಾತ್ರಿಯಲ್ಲಿ ಯಾವ ಭಿಕ್ಷೆ? ಮುಂದೆ ಹೋಗಯ್ಯ ಹುಚ್ಚ ಕಾಡು ಜಂಗಮ ಜಂಗಮಯ್ಯ" ಎನ್ನುತ್ತಾರೆ. ಆಗ ಸ್ವಾಮಿ "ಈ ರಾತ್ರಿ ನಿನ್ನ ಮನೆಯಲ್ಲಿ ಮಲಗಿದ್ದು ಸೂರ್ಯೋದಯ ಕಾಲಕ್ಕೆ ನಾವು ಹೊರಟು ಹೋಗುತ್ತೇವೆ; ಎನ್ನುತ್ತಾರೆ. ಆಗ ಬೊಪ್ಪೇಗೌಡ ನನ್ನ ಹಟ್ಟಿಯಲ್ಲಿ ನಿನಗೆ ಮಲಗಲು ಜಾಗ ಸಿಗುವುದೇ ಇಲ್ಲ ನಮ್ಮ ಕುರಿಯ ಕೊಟ್ಟಿಗೆಯಲ್ಲಿ ಏಳು ಸೊಲಿಗೆ ಕುರಿಗಳಿವೆ, ಬೇಕಾದರೆ ನೀನು ಈ "ಕುರಿ ಕೊಟ್ಟಿಗೆಯಲ್ಲಿ ಮಲಗಬಹುದು" ಎನ್ನುತ್ತಾರೆ.
ಸ್ವಾಮಿ ಅಷ್ಟೇ ಸಾಕೆಂದು ಕೊಟ್ಟಿಗೆಯಲ್ಲಿ ಹುಲ್ಲೇ ಚರ್ಮಹಾಸಿ ಪಡಿಸುತ್ತಾರೆ. ಬೊಪ್ಪೆಗೌಡನನ್ನು ತಮ್ಮ ಶಿಷ್ಯನನ್ನಾಗಿ ಪರಿವರ್ತಿಸಿಕೊಳ್ಳಲು ಮೊದಲೇ ಸಂಕಲ್ಪ ಮಾಡಿದ್ದರಾಗಿ, ಕುರಿಗಳ ಮೇಲೆ ಕಪ್ಪು ದೂಳ್ತ ಉರುಬಿ ಅವುಗಳನ್ನು ಸಾಯಿಸಿ ತಾವು ಭಂಗಿಯ ಸೇವನೆಮಾಡುತ್ತಾ, ರಾತ್ರಿಯನ್ನು ಕಳೆಯುತ್ತಾರೆ. ರಾತ್ರಿ ಬಂದ ಪರದೇಶಿ ಏನಾದ ಎಂದು ನೋಡಲು ಬಂದ ಗೌಡ ತನ್ನ ಕುರಿಗಳು ಸತ್ತಿರುವುದನ್ನು ಕಂಡು ಸ್ವಾಮಿಯ ಮೇಲೆ ರೇಗಾಡುತ್ತಾನೆ. ಆಗ ಸ್ವಾಮಿ "ಈ ಕುರಿಗಳನ್ನು ಕ್ಷಣಮಾತ್ರದಲ್ಲಿ ಬದುಕಿಸಿಕೊಡುವೆ ನೀನು ನಮ್ಮ ಶಿಷ್ಯನಾಗುವುದಾದರೆ; ನಮ್ಮ ಬಂಟ ನಾಗು ವುದಾದರೆ" ಎನ್ನುತ್ತಾರೆ. ಗೌಡ ಒಪ್ಪುತ್ತಾನೆ. ಸ್ವಾಮಿ ಕುರಿಗಳನ್ನು ಮೈದಡವಿ ಏಳಿಸಿಬಿಡುತ್ತಾರೆ. ಅಪಾರವಾದ ಸಂತೋಷ ಗೌಡನಿಗೆ ಆಗಿ ಸ್ವಾಮಿಯ ಪಾದ೦ಗಳಿಗೆ ಥಟ್ಟನೆ ಎರಗಿ "ಸ್ವಾಮಿ ನನ್ನಿಂದ ತಮಗೆ ಏನಾಗಬೇಕು ಹೇಳಿ ಶಿರಸಾ ವಹಿಸಿ ಮಾಡಿಕೊಡುತ್ತೇನೆ" ಎನ್ನುತ್ತಾರೆ.
ಸ್ವಾಮಿ ತಾವು ಬಯಸಿದ್ದ ಮುಹೂರ್ತ ಪ್ರಾಪ್ತವಾದುದನ್ನು ಕಂಡು ಸಂತೋಷದಿಂದ "ಕಾಡಂಕನ ಹಳ್ಳಿ ಮಡಿವಾಳ ಮಾಚಯ್ಯನ ಹುಬ್ಬೆಒಲೆ ನಮ್ಮ ಗದ್ದಿಗೆಯಾಗಬೇಕು; ಗುರುಮಠ ಆಗಬೇಕು; ನಮ್ಮ ಹೆಸರಿನಲ್ಲಿ ಹನ್ನೆರಡು ಅಂಕಣದ ಗಂಧದ ಮಾಳಿಗೆಯಾಗಬೇಕು; ಮಠದ ಕಡೆಯ ಬಾಗಿಲು ಆಗಬೇಕು. ಮಠದ ಮುಂದೆ ಸುಂದರವಾದ ತೋಪು ಆಗಬೇಕು. ಅಲ್ಲಿ ಉಳಿದ ನಾವು ನಮ್ಮ ಲೀಲಾ ವಿನೋದಗಳನ್ನು ಜಗತ್ತಿಗೆ ಸಾರಬೇಕಾಗಿದೆ" ಎನ್ನುತ್ತಾರೆ.
ಈ ಮಾತಿನಿಂದ ಗೌಡನಿಗೂ ಇನ್ನು ಇಲ್ಲಿ ಅನ್ನುವಷ್ಟು ಸಂತೋಷವಾಗುತ್ತದೆ. "ನಾವು ಇಷ್ಟು ಕಾಲವು ಧರ್ಮ ಗುರುವೇ ಇಲ್ಲದೆ ಅನಾಥರಂತೆ ಇದ್ದೆವು. ನಮಗೆ ಈಗಲಾದರೂ ಬೆಳಕನ್ನು ತೋರಲು ಗುರು ಸಿಕ್ಕಿದಿರಿ. ಎಂದು ಸ್ವಾಮಿಗೆ ಮತ್ತೆ ಮತ್ತೆ ಎರಗಿ ಸ್ವಾಮಿಯ ಬಯಕೆಯನ್ನು ಈಡೇರಿಸಿಕೊಡಲು ಟೊಂಕಕಟ್ಟಿ ನಿಲ್ಲುತ್ತಾನೆ.
ಸ್ವಾಮಿ ಕಾಡ೦ಕಣದ ಹಟ್ಟಿಗೆ ಬಂದು ಡಂಗೂರ ಬಾರಿಸುತ್ತಿದ್ದಂತೆಯೇ ಮಡಿವಾಳ ಮಾಚಿದೇವ ಬರುತ್ತಾನೆ, "ಮಡಿವಾಳ ಮಾಚಿದೇವ ನಮ್ಮ ಮಾತನ್ನು ಶ್ರದ್ಧೆಯಿಂದ ಕೇಳು ನಿನಗೆ ಮುಕ್ತಿ ದೊರೆಯುತ್ತದೆ. ನೀನು ಇಂದು ವಾಸವಾಗಿರುವ ಸ್ಥಳವನ್ನು ನಮ್ಮ ಮಠ ಕಟ್ಟುವ ಸಲುವಾಗಿ ಬಿಟ್ಟು ಕೊಡಬೇಕು, ನೀನು ನಿನ್ನ ಮಕ್ಕಳ ಮರಿ, ಕತ್ತೆ ಕರುಗಳ ಜೊತೆಯಲ್ಲಿ ಮುಟ್ಟುವ ಹಳ್ಳಿಗೆ ಹೋಗಿ ನೆಲೆಸಬೇಕು. ನಾವು ರಾಚಯ್ಯನವರನ್ನು ದೇವರಾಗಿ ಸ್ವೀಕರಿಸಿದ್ದೇವೆ. ರಾಚಯ್ಯ ಸ್ವಾಮಿಯ ಹೆಸರಿನಲ್ಲಿ ಈ ಗದ್ದುಗೆಯಲ್ಲಿ ಈ ಮಠ ಮಾಳಿಗೆಯಲ್ಲಿ ವರುಷಕ್ಕೆ ಒಮ್ಮೆ ಶಿವರಾತ್ರಿಯ ಕಾಲದಲ್ಲಿ ಒಳ್ಳೆಯ ಜಾತ್ರೆ ಯಾಗುತ್ತದೆ' ಆ ಜಾತ್ರೆಯಲ್ಲಿ ನೀನು ಬಂದು ನಡೆಮಡಿ ಬಿಡಬೇಕು ಎಂದು ಆಜ್ಞಾಪಿಸುತ್ತಾರೆ. ಮಡಿವಾಳ ಮಾಚಯ್ಯ ಈ ಮಾತನ್ನು ಅತ್ಯಂತ ಸಂತೋಷದಿಂದ ಒಪ್ಪಿಕೊಳ್ಳುತ್ತಾನೆ
ಶುಭ ಸೋಮವಾರದಂದು ಸ್ವಾಮಿ ಮಠ ಕಟ್ಟಲು ಮುಹೂರ್ತ ಹೂಡಿ. ಗುದ್ದಲಿ ಪೂಜೆ ಮಾಡುತ್ತಾರೆ. ನಾಲ್ಕು ದಿಕ್ಕಿಗೂ ನೂಲಿನ ಸೂತ್ರ ಹಿಡಿಯುತ್ತಾರೆ. ನಾಲ್ಕು ದಿಕ್ಕಿಗೂ ಶುಭಾಕ್ಷತೆಯನ್ನು ಎರಚುತ್ತಾರೆ. ಕೆಲವೇ ದಿನದಲ್ಲಿ ಹನ್ನೆರಡು ಅಂಕಣವ ಗಂಧದ ಮಾಳಿಗೆ ನಿರ್ಮಾಣಗೊಳ್ಳುತ್ತವೆ. ಉಬ್ಬೆಯ ಒಲೆಯಿದ್ದ ಸ್ಥಳದಲ್ಲಿ ಗುರುಪೀಠ ಕಟ್ಟುತ್ತಾರೆ. ಕೂರ್ಮಗೆರೆ ರಾಚಯ್ಯ ಕಡೆಯ ಬಾಗಿಲನ್ನು ಕಟ್ಟುತ್ತಾನೆ.
ಚಂದ್ರಶಾಲೆಯನ್ನು ಕಟ್ಟಿಸಲು ಭಕ್ತನಿಗಾಗಿ ಸ್ವಾಮಿ ಹುಡುಕಾಡಿ ಕಡೆಗೆ ಹಲವಾರದ ಉಪ್ಪರಿಗೆ ಶೆಟ್ಟಿಯನ್ನು ಕುರಿತು ದಿಟ್ಟ ದೃಷ್ಟಿಯಲ್ಲಿ ನೋಡುತ್ತಾರೆ. ಆತ ಯೋಗದ ಬೆತ್ತವನ್ನೂ, ಧಾನ್ಯದ ಭಸ್ಮದ ಗಟ್ಟಿಯನ್ನೂ ಪೂಜೆ ಮಾಡಿಕೊಂಡು ಸಣ್ಣದಾಗಿ ಮಠ ನಡೆಸಿಕೊಂಡು ಬರುತ್ತಿದ್ದ. ಪರಂಜ್ಯೋತಿಯವರ ಕೃಪಾದೃಷ್ಟಿ ತನ್ನ ಮೇಲೆ ಆಗಿದೆ ಎಂದು ಕನಸಿನಲ್ಲಿ ತಿಳಿದ ಆತ ಸ್ವಾಮಿಯ ಪಾದದ ಬಳಿಗೆ ಶುಚಿಭ್ರೂತನಾಗಿ ಓಡೋಡಿ ಬಂದು, ಭಂಗಿಯಲ್ಲಿ ಮೈಮರೆತಿದ್ದ ಸ್ವಾಮಿಗೆ ಎರಗಿ, "ಪ್ರಭು, ಏನನ್ನು ಕರುಣಿಸಲು ಕರೆದಿರಿ?" ಎಂದು ಕೇಳುತ್ತಾನೆ. ಆಗ ಸ್ವಾಮಿ ಆತನ ಮೈದಡವಿ. "ನಿನ್ನಿಂದ ಒಂದು ಚಂದ್ರಶಾಲೆಯ ನಿರ್ಮಾಣವಾಗಬೇಕು. ಅದು ನೀನು ಕತ್ತ ಕಟ್ಟೋ ಶಾಲೆಯಲ್ಲೇ ಆಗಬೇಕು ಮುಂದೆ ಅದು ದೊಡ್ಡ ಮಠವಾಗುತ್ತದೆ. ಹಲವಾರದ ಮತವೆಂದು ಪ್ರಸಿದ್ಧವಾಗುವ ಆ ಮಠದ ಕಾಣಿಕೆಯನ್ನು ನೀನೇ ಅನುಭೋಗಿಸುತ್ತಾ ಆ ಮಠದಲ್ಲೇ ವಾಸವಾಗಿದ್ದುಕೊಂಡು ನಮ್ಮ ಸೇವೆಯನ್ನು ಮಾಡುತ್ತಾ ನಿನ್ನ ಬಾಳನ್ನು ಕೃತಕೃತ್ಯವಾಗಿಸಿಕೋ" ಎಂದು ಹೇಳಿ ಅವನನ್ನು ಹಲವಾರಕ್ಕೆ ಕಳುಹಿಸಿಬಿಡುತ್ತಾರೆ.
ಚನ್ನ ಪಟ್ಟಣದ ಕುರುಬರ ರಾಚಯ್ಯ ಬಂದು ಮಠದ ಕಡೆಯ ಬಾಗಿಲನ್ನು ಕಟ್ಟಿಕೊಡುತ್ತಾನೆ. ಸ್ವಾಮಿ ಅವನಿಗೂ ಒಂದು ಗಟ್ಟ ಬೆತ್ತ ಕೊಟ್ಟು ನಿನ್ನ ಊರಿನ ಮಠ ದೊಡ್ಡದಾಗುತ್ತದೆ. ಅಲ್ಲಿ ಬರುವ ಉ೦ಬಳಿಯಲ್ಲೇ ನೀನು ಜೀವನ ಮಾಡು ಹೋಗು. ನಮ್ಮ ಹೆಸರಿನ ದಿಮ ಪವಾಡದಲ್ಲಿ ನೀನು ಕೃತಾರ್ಥನಾಗುವೆ" ಎಂದು ಹೇಳಿ ಕಳುಹಿಸುತ್ತಾರೆ.
ಮುಂದೆ ಒಂದು ಶುಭದಿನ ಮಂಟೇಸ್ವಾಮಿಯ ಮಠದ ಆರಂಭೋತ್ಸವ ನಡೆಯುತ್ತದೆ. ಮಠದ ಮುಂದೆ ನೀತಾಳ ಚಪ್ಪರ ಹಾಕಿ, ಮಠದ ಮಧ್ಯದಲ್ಲಿ ಗಂಧದ ಚಪ್ಪರ ಕಟ್ಟಿ'. ಅದರ ಮಧ್ಯದಲ್ಲಿ ಹೋಮ ಕುಂಡ ನಿರ್ಮಿಸಿ, ಗದ್ದಿಗೆಯನ್ನು ಪ್ರತಿಷ್ಠಾಪಿಸಿ, ಪೂಜಿಸಿ, ಕರ್ಪೂರ ಸಾಮ್ರಾಣಿ ಮಧ್ಯೆ, ಘ೦ಟಾನಾದಗಳ ಮಧ್ಯೆ, ನೆರೆದ ಲಕ್ಷಾಂತರ ಜನರ "ಉಘೇ ಉಘೇ" ದಿವ್ಯೋನ್ಯಾದನಗಳ ಮಧ್ಯೆ ಸ್ವಾಮಿ ಗದ್ದಿಗೆಯ ಮೇಲಕ್ಕೆ ಮೂರು ಬೊಗಸೆ ಬತ್ತ ಎರಿಚುತ್ತಾರೆ, ಪರಂಜ್ಯೋತಿ ಗದ್ದಿಗೆಯಲ್ಲಿ ಪ್ರವಹಿಸಿ ಭತ್ತ ಹರಳಾತ್ತದೆ
ಆ ಉರಿ ಗೆಲ್ಲುಗೆಯನ್ನು ಸ್ವಾಮಿ ಎಲ್ಲರೂ ನೋಡು ನೋಡುತ್ತಿರುವಂತೆ ಆರೋಹಣ ಮಾಡಿ, ಅಲ್ಲಿ ಮೂರ್ತರಾಗುತ್ತಾರೆ.
ನೆರೆದ ಜನ 'ಘನ ಮಂಟೇಸ್ವಾಮಿ ಉಘೇ' ಎನ್ನುತ್ತದೆ, ಪರಂಜ್ಯೋತಿ ತನ್ನಲ್ಲಿ ತಾನೆ ಪ್ರಕಾಶಿಸುತ್ತಾ ಲೋಕಕ್ಕೆಲ್ಲ ಬೆಳಕನ್ನು ನೀಡುತ್ತದೆ.
ಪರಂಜ್ಯೋತಿ ನೀವೇ ಬನ್ನಿ
ಆದಿ ಸಿದ್ಧರಿಗೆಲ್ಲ ಅತಿ ಮುದ್ದು ಘನಲೀಲೆ
ಪರಂಜ್ಯೋತಿ ನೀವೇ ಬನ್ನಿ
ಬಾರದ ಪವಾಡಕ್ಕೆಲ್ಲ ಬಂದು ಒದಗೋ ಘನಲೀಲೆ
ಸಿದ್ದಯ್ಯ ಶಿವನೇ ಬನ್ನೀ
ಮುಂದುವರಿಯುತ್ತದೆ ..
ಓದಿದ ಗುರುತಾಗಿ ಒಂದು ಲೈಕ್ ಮತ್ತು ಶೇರ್ ಮಾಡಿ.
ನಿಮ್ಮ ಪ್ರೋತ್ಸಾಹವಿರಲಿ.. ಧನ್ಯವಾದಗಳು 🙏
👇ಮುಂದಿನ ಸಂಚಿಕೆಯಲ್ಲಿ (೨ ದಿನಗಳಲ್ಲಿ)
11. ಶ್ರೀ ಸಿದ್ದಪ್ಪಾಜಿಯ ಮಹಾತ್ಮೆ
👈 ಹಿಂದಿನ ಸಂಚಿಕೆ:
9. ಕೂರ್ಮಗೆರೆ ರಾಚಯ್ಯನವರು ಭಕ್ತರಾದುದು. ಪರಮ ಪರಂಜ್ಯೋತಿಯವರು ಮಂಟೇ ಸ್ವಾಮಿಯಾದರು ಮತ್ತು ಮಾರಳ್ಳಿ ಹಾಳಾಗುತ್ತದೆ; ಮಳವಳ್ಳಿ ಏಳಿಗೆಯಾಗುತ್ತದೆ.
ನಮ್ಮ ಬ್ಲಾಗ್ ನಲ್ಲಿ ಓದಲು:
👉 https://goo.gl/EPqSNT
ಹಿಂದಿನ ಸಂಚಿಕೆ ನಮ್ಮ ವೆಬ್ಸೈಟ್ ನಲ್ಲಿ ಓದಲು:
👉 https://goo.gl/Tx83YR
ಹಿಂದಿನ ಸಂಚಿಕೆ ನಮ್ಮ ಫೇಸ್ಬುಕ್ ಪೇಜಲ್ಲಿ ಓದಲು:
👉 https://goo.gl/MTfwPb
<-------------------------->
Website: Siddappaji.com
Email: Lordsiddappaji@gmail.com
Find us: Siddappaji Lord (Admin)
Www.facebook.com/lord.siddappaji
Www.facebook.com/sri.manteswamy
Also on Twitter, Instagram & Google+
ಸಂಪೂರ್ಣ ಕಥೆ ತಿಳಿಯುವ ಆಸಕ್ತರು 👇 ಲಿಂಕ್ ಓಪನ್ ಮಾಡಿ
📓Read: https://goo.gl/aBBDN1 https://goo.gl/QYVt7o
🔊listen: https://goo.gl/hXvMdD https://goo.gl/BuXToJ https://goo.gl/e4hWAh
No comments:
Post a Comment