ಶ್ರೀ ಧರೆಗೆ ದೊಡ್ಡವರ ಚರಿತೆ (ಸಂಚಿಕೆ 9)

9. ಕೂರ್ಮಗೆರೆ ರಾಚಯ್ಯನವರು ಭಕ್ತರಾದುದು. ಪರಮ ಪರಂಜ್ಯೋತಿಯವರು ಮಂಟೇ ಸ್ವಾಮಿಯಾದರು ಮತ್ತು ಮಾರಳ್ಳಿ ಹಾಳಾಗುತ್ತದೆ; ಮಳವಳ್ಳಿ ಏಳಿಗೆಯಾಗುತ್ತದೆ.

ರಜಪೂತ ಜಾತಿಯ ಕೂರ್ಮಗೆರೆಯ ರಾಚಯ್ಯ ಅಡವಿಯಲ್ಲಿ ಆಡು ಕಾಯುತ್ತಾ ಇರುವಾಗ ಆತನನ್ನು ಹೆಬ್ಬಾವೊಂದು ಹಾಗೆಯೇ ನುಂಗಿಬಿಟ್ಟಿತಂತೆ ಹಾಗ ರಾಚಯ್ಯ ಒಂಬತ್ತು ತಿಂಗಳಕಾಲ ಹೆಬ್ಬಾವಿನ ಹೊಟ್ಟೆಯಲ್ಲೇ ಉಳಿದು ಬಿಟ್ಟಿದ್ದ. ಆ ಹಾದಿಯಲ್ಲಿ ಪಯಣಿಸುತ್ತಿದ್ದ ನಮ್ಮ ಸ್ವಾಮಿಯವರು, ಈ ವಿಶೇಷವನ್ನು ಕಂಡು, ಹೆಬ್ಬಾವಿನ ಹೊಟ್ಟೆಯನ್ನು ಸೀಳಿ ಕೂರ್ಮ ಗೆರೆಯ ರಾಚಯ್ಯ ನಿಗೆ ಬಿಡುಗಡೆ ಕರುಣಿಸುತ್ತಾರೆ.

ರಾಚಯ್ಯ ಚನ್ನಪಟ್ಟಣದಲ್ಲಿ ಮಠ ಮಾಡಿಕೊಂಡು, ವಿಭೂತಿ ಗಟ್ಟಿಯನ್ನು ಯೋಗದ ಬೆತ್ತವನ್ನು ಪೂಜೆ ಮಾಡತೊಡಗಿ ನಮ್ಮ ಪರಂಜ್ಯೋತಿಯವರ ಆಶೀರ್ವಾದವನ್ನು ಪಡೆಯುತ್ತಾರೆ. ಸ್ವಾಮಿಯ ಭಕ್ತರ ಬಳಗ ಈ ಮಠದಿಂದಾಗಿ ಹಿರಿದೂ ಹಿರಿದಾಗುತ್ತದೆ. ಮಠಕ್ಕೆ ಮಾಳಿಗೆ ಮಾನ್ಯತೆ ಕೊಡಿಸಿದ ಸ್ವಾಮಿಗಳು ತಮ್ಮ ಶಿಷ್ಯರೊಡಗೂಡಿ ಮುಂದೆ ಪಯಣ ಬೆಳೆಸುತ್ತಾರೆ.

:: ಪರಮ ಪರಂಜ್ಯೋತಿಯವರು ಮಂಟೇಸ್ವಾಮಿಯಾದುದು ::

ಆದಿ ಹೊನ್ನಾಯಕನ ಹಳ್ಳಿಯಲ್ಲಿ ಬಳೆಯ ಮುದ್ದಮ್ಮ ಕಂಚಿನ ಹಂಡೆಯಲ್ಲಿ ಹಾಲನ್ನು ಕರೆಯುತ್ತಿದ್ದ ಕಾಲಕ್ಕೆ ಸರಿಯಾಗಿ ನಮ್ಮ ಪರಂಜ್ಯೋತಿಯವರು ಭಿಕ್ಷೆಗಾಗಿ ಬಂದು ಜಾಗಟೆ ಮತ್ತು ಬೆಂಗನ್ನು ಶಬ್ದ ಮಾಡಲಾಗಿ, ಬೆದರಿದ ಅವಳ ಹಸು ಅಡ್ಡಡ್ಡಲಾಗಿ ಒದ್ದು ಹಂಡೆಯನ್ನು ಒಡೆದು ಬದಿಯ ಬೆಟ್ಟವನ್ನೇ ಸೇರಿಕೊಂಡು ಬಿಟ್ಟಿತಂತೆ. ಇದರಿಂದ ನೊಂದು ವ್ಯಾಕುಲಳಾದ ಮುದ್ದಮ್ಮ ನಮ್ಮ ಸ್ವಾಮಿಯನ್ನು "ಹಾಳಾದ ಮಂಟೆ ದೊರೆತರೆ, ಮುಂದೆ ಹೋಗಿ" ಎಂದು ಹೇಳಿಬಿಟ್ಟಳ೦ತೆ.
ತಮ್ಮನ್ನು ಮಂಟೇಸ್ವಾಮಿ ಎಂದು ಕರೆದದುದಕ್ಕಾಗಿ ಸಂತೋಷಗೊಂಡ ಸ್ವಾಮಿ "ಆದಿಯಿಂದಲೂ ನಾವು ರಹಿತರುನಾವು. ತಾಯಿ ತಂದೆ ಇಲ್ಲದವರು. ನೀನು ಹೆಸರನ್ನು ಕಟ್ಟಿ ನಮಗೆ ತಾಯಿಯಾದೆ" ಎಂದು ಆಕೆಯ ಸಮಾಧಾನಕ್ಕೆ ಕಾರಣರಾಗಿ, ಆಕೆಯ ಆತಿಥ್ಯ ಸ್ವೀಕರಿಸಿ. ಪೂಜಾದಿಗಳನ್ನು ಪಡೆದು. ಅಲ್ಲಿನ ಭಕ್ತರೆಲ್ಲರ ಸಲುವಾಗಿ ಮಠ ಒಂದನ್ನು ನಿರ್ಮಿಸಿ, ಬೆಡಗಿನ ಚಂದ್ರ ಶಾಲೆಯೊಂದನ್ನು ಕಟ್ಟಿ ಗುರುಗಳು ಮುಂದೆ ಹೊರಡುತ್ತಾರೆ.

:: ಮಾರಳ್ಳಿ ಹಾಳಾಗುತ್ತದೆ; ಮಳವಳ್ಳಿ ಏಳಿಗೆಯಾಗುತ್ತದೆ ::

ಆದಿ ಮಳವಳ್ಳಿಗೆ ಬಂದ ಸ್ವಾಮಿ ಆಲದ ಮರದ ನೆರಳಿನಲ್ಲಿ ತಮ್ಮ ಸಮಸ್ತ ಪರಿವಾರದೊಡನೆ ಪವಡಿಸುತ್ತಾರೆ. ಮಾರಳ್ಳಿ ಪಟ್ಟಣದ ಕುರುಬ ಹೆಗ್ಗಡೆಗೌಡ ಸ್ವಾಮಿಯ ಕಾಲಿಗೆ ಎರಗಿ "ತಮ್ಮ ಮಠ ಮಾನ್ಯವೇನು" ಎಂದು ಕೇಳಲಾಗಿ ಸ್ವಾಮಿ "ನಾವು ತಂಗಿದ ತಾಣವೇ ಮನೆ ಮಠ ಮಾನ್ಯಗಳು. ನಾವು ಧರೆಗೆ ಹಿರಿಯರು, ನಮಗೆ ಯಾವುದರ ಹಂಗೂಇಲ್ಲ, ಕಾಲಜ್ಞಾನ ಹೇಳಿ ಜೀವಿಸುವ ಯೋಗಿಗಳು ನಾವು" ಎನ್ನುತ್ತಾರೆ. ಆಗ ಗೌಡ ಸ್ವಾಮಿ ಈ ಸ್ಥಳದ ಭವಿಷ್ಯ ಹೇಳಿ ಪ್ರಭು ಎಂದು ಹೇಳಿಕೊಳ್ಳುತ್ತಾನೆ, ಸ್ವಾಮಿ ನಕ್ಕು ಹೇಳುತ್ತಾರೆ:

"ನೋಡು ಈಗ ಊರಾಗಿರುವ ಮಾರಳ್ಳಿ ಹಾಳಾಗಿ ಹೋಗುತ್ತದೆ: ಈಗ ಕಾಡಾಗಿರುವ ಮಳವಳ್ಳಿ ಏಳಿಗೆಯಾಗಿ ಒಳ್ಳೆಯ ಊರಾಗುತ್ತದೆ. ನಿನ್ನ ಭಕ್ತಿಗೆ ಮೆಚ್ಚಿ ನಿನಗೆ ಆಶೀರ್ವಾದ ಮಾಡುತ್ತೇವೆ: ಅಂತ್ಯ ತುಂಬಿ ತೀರ ಹೋದ ಕಾಲಕ್ಕೆ ಮಾರಳ್ಳಿ, ಮಳವಳ್ಳಿ ಹಾಗೂ ನಿಡುಗಟ್ಟಗಳ ಮಧ್ಯೆ ವೀರನಾಗಿ ಹುಟ್ಟಿ ದೇವರ ಸೇವೆಗೆ ಬೇಕಾದ ಹೂವನ್ನು ತಂದು ಕಟ್ಟಿ ಮಾರಿ ಜೀವನ ಮಾಡು ದೇವರು ನಿನಗೆ ಸದ್ಗತಿಯನ್ನು ಕೊಡುತ್ತಾನೆ" ಎಂದು ಹರಸಿದರು.

ಮುಂದೆ ಮಾರಳ್ಳಿ ಹಾಳಾಗಿ, ಮಳವಳ್ಳಿ ಏಳಿಗೆಯಾಯಿತು.

ಮುಂದುವರಿಯುತ್ತದೆ ..
ಓದಿದ ಗುರುತಾಗಿ ಒಂದು ಲೈಕ್ ಮತ್ತು ಶೇರ್ ಮಾಡಿ.
ನಿಮ್ಮ ಪ್ರೋತ್ಸಾಹವಿರಲಿ.. ಧನ್ಯವಾದಗಳು 🙏

👇ಮುಂದಿನ ಸಂಚಿಕೆಯಲ್ಲಿ (೨ ದಿನಗಳಲ್ಲಿ)
10. ರಾಜಬೊಪ್ಪಣಪುರ ಅಥವಾ ಒಪುಗ೦ಡಪುರ ಅಥವಾ ಬೊಪ್ಪಗೊ೦ಡನ ಪುರದ ಸ್ಥಾಪನೆ. 

👈 ಹಿಂದಿನ ಸಂಚಿಕೆ:
8. ಬಸವನ ಬೆಟ್ಟವ ಬೆಳ್ಳಿಯ ಮಾಡುತ್ತೇವೆ; ಕುಂತೂರು ಬೆಟ್ಟವ ಚಿನ್ನವ ಮಾಡುತ್ತೇವೆ.
ನಮ್ಮ ಬ್ಲಾಗ್ ನಲ್ಲಿ ಓದಲು:
👉 https://goo.gl/7oB3pq
ಹಿಂದಿನ ಸಂಚಿಕೆ ನಮ್ಮ ವೆಬ್ಸೈಟ್ ನಲ್ಲಿ ಓದಲು:
👉 https://goo.gl/QPHPUq
ಹಿಂದಿನ ಸಂಚಿಕೆ ನಮ್ಮ ಫೇಸ್ಬುಕ್ ಪೇಜಲ್ಲಿ ಓದಲು:
👉 https://goo.gl/gzqnr5
<-------------------------->
Website: Siddappaji.com
Email: Lordsiddappaji@gmail.com

Find us: Siddappaji Lord (Admin)
Www.facebook.com/lord.siddappaji
Www.facebook.com/sri.manteswamy
Also on Twitter, Instagram & Google+

ಸಂಪೂರ್ಣ ಕಥೆ ತಿಳಿಯುವ ಆಸಕ್ತರು 👇 ಲಿಂಕ್ ಓಪನ್ ಮಾಡಿ
📓Read: https://goo.gl/aBBDN1 https://goo.gl/QYVt7o
🔊listen: https://goo.gl/hXvMdD https://goo.gl/BuXToJ https://goo.gl/e4hWAh 

No comments:

Post a Comment