ಶ್ರೀ ಧರೆಗೆ ದೊಡ್ಡವರ ಚರಿತೆ (ಸಂಚಿಕೆ 8)

8. ಬಸವನ ಬೆಟ್ಟವ ಬೆಳ್ಳಿಯ ಮಾಡುತ್ತೇವೆ; ಕುಂತೂರು ಬೆಟ್ಟವ ಚಿನ್ನವ ಮಾಡುತ್ತೇವೆ.

ಮುಂದೆ ಸ್ವಾಮಿ ಪ್ರಣದ ಸ್ವರೂಪಿಗಳು ಗು೦ಬಳಾಪುರದ ಮಾರ್ಗವಾಗಿ ಸಕ್ಕರೆ ಪಟ್ಟಣಕ್ಕೆ ಬರುತ್ತಾರೆ. ಅಲ್ಲಿ ಇಬ್ಬರು ರಾಜರು ಏಳು ಜನ ಜಂಗಮರಿಗೆ ಪ್ರತಿದಿನವೂ ಆರೋಗಣಿ ನಡೆಸಿ, ನಂತರ ತಾವು ಊಟ ಮಾಡುವ ಪದ್ಧತಿಯಲ್ಲಿರುತ್ತಾರೆ ನಮ್ಮ ಸ್ವಾಮಿ ಏಳು ಜನ ಜಂಗಮರು ಊಟಕ್ಕೆ ಕುಳಿತ ಸಮಯಕ್ಕೆ ಸರಿಯಾಗಿ ಅರಮನೆಯ ಬಾಗಿಲಿಗೆ ಬಂದು
"ಭಿಕ್ಷೆ ಭೋಜನಕ್ಕಾಗಿ ನಾವು ಬಂದಿದ್ದೇವೆ, ನಮ್ಮ ಲಾಂಚನವನ್ನು ಕಂಡ ಮೇಲೆ ನೀವು ನಮ್ಮನ್ನು ಬಿಟ್ಟು ಊಟ ಮಾಡುವಂತಿಲ್ಲ' ಎನ್ನುತ್ತಾ ಆರ ಕೂಡಲೇ ಆ ಇಬ್ಬರು ರಾಜರೂ ನಮ್ಮ ಸ್ವಾಮಿ ಹಾಗೂ ಅವರ ಪರಿವಾರಕ್ಕೆ ನೀರನ್ನು ಕೊಟ್ಟು, ಜಂಗಮರ ಪಂಕ್ತಿಯಲ್ಲೇ ಎಲೆಗಳನ್ನು ಹಾಕಿ, ಊಟ ಬಡಿಸಿ, ತಮ್ಮ ಬಿಡದಿಗೆ ಪ್ರಯಾಣಮಾಡುತ್ತಾರೆ. ಈ ಏಳು ಜನ ಜಂಗಮರ ನಿಜವನ್ನು ಅರಿಯಲು ನಿರ್ಧರಿಸಿದ ನಮ್ಮ ಸ್ವಾಮಿ ಊಟ ಮಾಡುತ್ತಿರುವ ತನ್ನ ಎಂಜಲ ಕೈಯಲ್ಲೇ ಜಂಗಮರ ಲಿಂಗಗಳನ್ನು ಮುಟ್ಟಿ ಬಿಡುತ್ತಾರೆ, ಕೋಪಗೊಂಡ ಜಂಗಮರು ರಾಜರಲ್ಲಿಗೆ ಬಂದು
"ನಮ್ಮ ಲಿಂಗಗಳನ್ನು ಎಂಜಲು ಕೈಯಲ್ಲಿ ಮುಟ್ಟಿದ ಈ ಧೂರ್ತ ಸ್ವಾಮಿಯನ್ನು ಈ ರಾತ್ರಿ ಇಲ್ಲೇ ಇಟ್ಟುಕೊಂಡಿದ್ದು, ಬೆಳಿಗ್ಗೆ ಆತನ ಜೋಳಿಗೆಗೆ ವಿಷದ ಕಜ್ಜಾಯಗಳನ್ನು ಹಾಕಿ ಕಳಿಸಿಬಿಡಿ" ಎನ್ನುತ್ತಾರೆ. ರಾಜರಿಬ್ಬರೂ ಜಂಗಮರು ಹೇಳಿದಂತೆಯೇ ಕೇಳಿಬಿಡುತ್ತಾರೆ.

ಕಜ್ಜಾಯಗಳನ್ನು ಹೊತ್ತುಕೊಂಡು ಬಹಳ ದೂರ ಬಂದ ಸ್ವಾಮಿ, ಎಲ್ಲ ಭಕ್ತರನ್ನೂ ಸೇರಿಸಿಕೊಂಡು, ತನ್ನ ಬಿರುದು ಭಿಕ್ಷೆಗಳನ್ನೆಲ್ಲಾ ಕಳೆದಿಟ್ಟು ಪಾತಾಳ ಗಂಗೆಯಲ್ಲಿ ಮಿಂದು, ವಿಭೂತಿ ಧರಿಸಿ, ಕಂಡುಗ ಕರ್ಪೂರ ಹಾಗೂ ಸಾಂಬ್ರಾಣಿಗಳನ್ನು ಉರಿಸಿ, ಎಲ್ಲ ಶರಣರಿಗೂ ಉಪದೇಶ ಮಾಡಿ, ತಾವು ಪೂಜೆ ಮುಗಿಸಿ, ತಂದಿರುವ ಭಿಕ್ಷೆಯನ್ನು ಬಿಚ್ಚಿ ನೆರೆದಿರುವವರೆಲ್ಲರಿಗೂ ಐದೈದು ವಿಷದ ಕಜ್ಜಾಯಗಳನ್ನು ಬಡಿಸುತ್ತಾರೆ. ಎಲ್ಲರೂ ಪ್ರೀತಿಯಿಂದ ಊಟ ಮಾಡಲು ತೊಡಗುತ್ತಾರೆ.

ಈ ಸಮಯಕ್ಕೆ ಸರಿಯಾಗಿ ಗಬಳಾಪುರಕ್ಕೆ ವ್ಯಾಸಂಗಕ್ಕಾಗಿ ಹೋಗಿದ್ದ ಸಕ್ಕರೆ ಪಟ್ಟಣದ ಅರಸರ ಇಬ್ಬರು ಮಕ್ಕಳು ಹಿಂದಿರುಗುತ್ತಾ ಇದು ಹಸಿವಾಗಿದ್ದುದರಿಂದ ನಮ್ಮ ಸ್ವಾಮಿಯ ಬಳಿಗೆ ಬಂದು, ನಮಸ್ಕಾರ ಮಾಡಿ ಕಜ್ಜಾಯ ಕೊಡಿರೆಂದು ಕೇಳಿ ಪಡೆದು ತಿನ್ನುತ್ತಾ ತಿನ್ನುತ್ತಾ ಅರಮನೆಯ ಬಾಗಿಲವರೆಗೂ ಬಂದೂ ಬಾಗಿಲಲ್ಲಿ ಬಂದು ಸತ್ತುಬೀಳುತ್ತಾರೆ, ಮಕ್ಕಳು ಸತ್ತು ಬಿದ್ದುದನ್ನು ಕಂಡ ರಾಜರಿಬ್ಬರೂ ಪರಿಪರಿಯಲ್ಲಿ ತಪ್ಪಿಸುತ್ತಾರೆ 'ನಾವು ದಿನವೂ ಏಳುಜನ ಜಂಗಮರಿಗಾದರು ದಾಸೋಹ ನಡೆಸಿ ಖುಜು ಮಾರ್ಗದಲ್ಲಿ ಸಾಗುತ್ತಿದ್ದೇವೆ ನಮ್ಮಂಥ ಸಾತ್ವೀಕರಿಗೆ ಇಂತಹ ಶಿಕ್ಷೆ ಸರಿಯೋ ಶಿವನೇ ಎಂದು ನೊಂದುಕೊಳ್ಳುತ್ತಿರುವ ಕಾಲಕ್ಕೆ ಸ್ವಾಮಿಗಳು ತಮ್ಮೆಲ್ಲರ ಊಟಾದಿಗಳನ್ನು ತೀರಿಸಿಕೊಂಡು, ತಮ್ಮ ಪರಿವಾರದೊಡನೆ ಮತ್ತೆ ಅರಮನೆಗೆ ಬರುತ್ತಾರೆ. ಯಾವ ಯತಿಯ ಆಗಮನ ವೇಳೆಯಲ್ಲಿ ತಮ್ಮ ಮಕ್ಕಳು ಸತ್ತಾವೋ, ಅದೇ ಯತಿ ಮತ್ತೆ ಭಿಕ್ಷೆಗೆ ಎಂದು ಬಂದುದನ್ನು ಕಂಡು ರೇಗಿ "ತೊಲಗು ಆಚೆ, ಏ ಪರದೇಶಿಯೆ_ ನಿನ್ನಿಂದಾಗಿ ನನ್ನ ಭಾಗ್ಯವೇ ನಂದಿಹೋಯಿತು" ಎಂದು ಕೂಗಾಡುತ್ತಾರೆ. ಆಗ ಸ್ವಾಮಿ "ಇದರಲ್ಲಿ ನನ್ನದೇನೂ ತಪ್ಪಿಲ್ಲ-ಅವರು ಹಸಿದು ಕಜ್ಜಾಯ ಕೇಳಿದರು, ನೀವು ನಮಗೆ ನೀಡಿದ್ದ ಕಜ್ಜಾಯವನ್ನು ಅವರಿಗೆ ನೀಡಿದೆವು. ನಾವು ಮಾಡಿದ ಫಲಾದಿಗಳು ನಮ್ಮ ಮಕ್ಕಳಿಗೆ ತಟ್ಟಿಯೇ ತೀರಬೇಕಲ್ಲ" ಎಂದು ಹೇಳುತ್ತಾರೆ. ರಾಜರಿಬ್ಬರಿಗು ತಾವು ಮಾಡಿದ ಅಪರಾಧದ ಅರಿವಾಗಿ, ಅವರು ಸ್ವಾಮಿ ಪಾದದಲ್ಲಿ ತಮ್ಮ ತಲೆಯನ್ನು ಚೆಲ್ಲಿ "ನಮ್ಮನ್ನು ಮನ್ನಿಸಿ ಹರಸು" ಎಂದು ಬೇಡುತ್ತಾರೆ. ಆಗ ಸ್ವಾಮಿ ನಿಮ್ಮ ಇಚ್ಛೆಯಂತೆ ನಿಮ್ಮ ಮಕ್ಕಳ ಪ್ರಾಣವನ್ನು ಹಿಂದಿರುಗಿಸುತ್ತೇನೆ. ಆದರೆ, ಅವರನ್ನು ನಮ್ಮ "ಶಿಷ್ಯ ಪರಿವಾರಕ್ಕೆ ಬಿಟ್ಟುಕೊಡಬಿಡಬೇಕು" ಎಂದು ಹೇಳುತ್ತಾರೆ. ಆಗ ರಾಜರಿಬ್ಬರೂ ನಾವು ಈ ಮಕ್ಕಳಿಗೆ ರಾಜ್ಯಗಳನ್ನೇ ಕೊಡಲು ತೀರ್ಮಾನಿಸಿದ್ದೇವೆ. ನೀವು ಈ ಮಕ್ಕಳನ್ನು ಕರೆದೊಯ್ದು ಏನನ್ನೂ ಕೊಡುವಿರಿ?" ಎಂದು ಕೇಳುತ್ತಾರೆ.

ಪ್ರಭು ಉತ್ತರಿಸುತ್ತಾರೆ: "ಬಸವನ ಬೆಟ್ಟವ ಬೆಳ್ಳಿಯನ್ನಾಗಿ ಮಾಡಿಕೊಡುತ್ತೇವೆ; ಕುಂದೂರು ಬೆಟ್ಟವ ಚಿನ್ನವನ್ನಾಗಿ ಮಾಡಿಕೊಡುತ್ತೇವೆ; ನಮ್ಮನ್ನು ಸ್ಮರಿಸಿ ಪೂಜೆ ಮಾಡುವ, ಮರ್ತ್ಯರಿಗೆ ಭೋಧೆ ಮಾಡುವ ಗುರುಗಳನ್ನಾಗಿ ಮಾಡುತ್ತೇನೆ."

  ಎಲ್ಲರೂ ಒಪ್ಪುತ್ತಾರೆ. ನಿದ್ದೆಯಿಂದ ಎದ್ದವರಂತೆ ಮಕ್ಕಳು ಸ್ವಾಮಿಗಳು ಭಸ್ಮವನ್ನು ಪ್ರೋಕ್ಷಣೆಮಾಡಿದ ಕಾರಣದಿಂದಾಗಿ ಮೇಲೇಳುತ್ತಾರೆ. ಪರಂಜ್ಯೋತಿಯವರು ಅವರನ್ನು ಹೊಳಗೆ ಕರೆದುತಂದು ಸ್ನಾನಾದಿಗಳನ್ನೂ ಮಾಡಿಸಿ ಕರಿಯ ಕಂಬಳಿಯ ಗದ್ದುಗೆಯ ಮೇಲೆ ಕೂರಿಸಿ, ಕಳಸವನ್ನು ಸ್ಥಾಪನೆ ಮಾಡಿ, ಅಕ್ಷತೆಯನ್ನು ಪ್ರೋಕ್ಷಿಸಿ, ಕಾವಿಯನು ಧರಿಸಿ, ಮುಂಗೈಗೆ ಗುರುಕಂಕಣ ಕಟ್ಟಿ, ಆರತಿ ಬೆಳಗಿ, ಸದ್ಬೋದೆಯನ್ನು ಮಾಡಿ, ಲಿಂಗಧಾರಣೆ ಮಾಡಿಸಿ ಅವರಿಬ್ಬರಿಗೂ ಧರ್ಮಗುರುವಿನ ಪಟ್ಟವನ್ನು ಕಟ್ಟುತ್ತಾರೆ, ಹಿರಿಯಾಸನಹಿರಿ ಗುರುವನ್ನು ಬಸವರಾಜೇಂದ್ರಸ್ವಾಮಿ ಎಂದೂ ಕಿರಿಯವನನ್ನು ಕಿರಿಗುರು ರಾಜಪಟ್ಟದ ವೀರಭದ್ರಸ್ವಾಮಿ ಎಂದೂ ನಾಮಕರಣ ಮಾಡುತ್ತಾರೆ.

ಊರಿಗೆ ಊರೇ ಹೊಸ ಗುರುವನ್ನು ಸ್ವಾಗತಿಸುತ್ತಿರುವಾಗ ಕುಂತೂರಿನ ಬೆಟ್ಟ ಚಿನ್ನದ್ದಾದರೆ ಬಸವನಬೆಟ್ಟ ಬೆಳ್ಳಿಯದಾಗುತ್ತದೆ.
ಎಲ್ಲರೂ ಉಘೇ ಉಘೇ ಎನ್ನುತ್ತಿರುತ್ತಾರೆ.

ಮುಂದುವರಿಯುತ್ತದೆ ..
ಓದಿದ ಗುರುತಾಗಿ ಒಂದು ಲೈಕ್ ಮತ್ತು ಶೇರ್ ಮಾಡಿ.
ನಿಮ್ಮ ಪ್ರೋತ್ಸಾಹವಿರಲಿ.. ಧನ್ಯವಾದಗಳು 🙏

👇ಮುಂದಿನ ಸಂಚಿಕೆಯಲ್ಲಿ (೨ ದಿನಗಳಲ್ಲಿ)
9. ಕೂರ್ಮಗೆರೆ ರಾಚಯ್ಯನವರು ಭಕ್ತರಾದುದು. ಪರಮ ಪರಂಜ್ಯೋತಿಯವರು ಮಂಟೇ ಸ್ವಾಮಿಯಾದರು ಮತ್ತು ಮಾರಳ್ಳಿ ಹಾಳಾಗುತ್ತದೆ; ಮಳವಳ್ಳಿ ಏಳಿಗೆಯಾಗುತ್ತದೆ.  

👈 ಹಿಂದಿನ ಸಂಚಿಕೆ:
7. ಶ್ರೀ ರಾಚಪ್ಪಯ್ಯನವರಿಗೆ ಶುಭ ವಿವಾಹ.
ನಮ್ಮ ಬ್ಲಾಗ್ ನಲ್ಲಿ ಓದಲು:
👉 https://goo.gl/dz1VdB
ಹಿಂದಿನ ಸಂಚಿಕೆ ನಮ್ಮ ವೆಬ್ಸೈಟ್ ನಲ್ಲಿ ಓದಲು:
👉 https://goo.gl/P9uBN2
ಹಿಂದಿನ ಸಂಚಿಕೆ ನಮ್ಮ ಫೇಸ್ಬುಕ್ ಪೇಜಲ್ಲಿ ಓದಲು:
👉 https://goo.gl/KesMnm
<-------------------------->
Website: Siddappaji.com
Email: Lordsiddappaji@gmail.com

Find us: Siddappaji Lord (Admin)
Www.facebook.com/lord.siddappaji
Www.facebook.com/sri.manteswamy
Also on Twitter, Instagram & Google+

ಸಂಪೂರ್ಣ ಕಥೆ ತಿಳಿಯುವ ಆಸಕ್ತರು 👇 ಲಿಂಕ್ ಓಪನ್ ಮಾಡಿ
📓Read: https://goo.gl/aBBDN1 https://goo.gl/QYVt7o
🔊listen: https://goo.gl/hXvMdD https://goo.gl/BuXToJ https://goo.gl/e4hWAh

No comments:

Post a Comment