7. ರಾಚಪ್ಪಯ್ಯನವರಿಗೆ ಶುಭ ವಿವಾಹ
ವಿಜಯನಗರದಿಂದ ಹೊರಟು ಕಾಗನೆಲೆಗೆ ಬಂದ ಪರಂಜ್ಯೋತಿಯವರು ರಾಚಪ್ಪಯ್ಯನವರಿಗೆ ಈಗಿಂದೀಗಲೇ ವಿವಾಹ ಮಾಡಿಬಿಡಬೇಕು ಎಂದು ತೀರ್ಮಾನಕ್ಕೆ ಬಂದು, ಒಂದು ಶುಭಮುಹೂರ್ತವನ್ನು ಗುರುತಿಸುತ್ತಾರೆ. ಕಾಗಿನೆಲೆಯ ರಾಜ ಬಸವಲಿಂಗಯ್ಯನವರಿಗೆ ಕಲ್ಯಾಣಮ್ಮನೆಂಬ ಯೋಗ್ಯ ಮಡದಿ ಇವರಿಗೆ ಗಂಡು ಸಂತಾನವೇ ಇಲ್ಲದೇ ಒಂದೇ ಒಂದು ಹೆಣ್ಣು ಸಂತಾನ ಮಾತ್ರವಿದೆ" ಇವರ ಅರಮನೆಯ ಬಾಗಿಲಿಗೆ ನಮ್ಮ ಸ್ವಾಮಿ ಭಿಕ್ಷೆಗಾಗಿ ಬಂದು, ತಮ್ಮ ಡ೦ಗೂರಗಳನ್ನು ಬಹಳ ವೇಗದಲ್ಲಿ ಬಾರಿಸುತ್ತಾರೆ. "ಭಿಕ್ಷೆ ನೀಡಿ ತಾಯಿ"__ ಎಂದು ಬೇಡುತ್ತಾರೆ.
ಬಾಗಿಲಿಗೆ ಯತಿ, ಬಂದಿರುವುದನ್ನು ಕಂಡ ಕಲ್ಯಾಣಮ್ಮ ಮುತ್ತು ರತ್ನಗಳ ದಾನವನ್ನು ನೀಡುತ್ತಾಳೆ. ಸ್ವಾಮಿ ಅದನ್ನು ತಿರಸ್ಕರಿಸುತ್ತಾರೆ ಆಗ ಆಕೆ "ನಿಮಗೆ ಬೇರೆ ಯಾವ ಭಿಕ್ಷೆ ಬೇಕು, ಸ್ವಾಮಿ" ಎಂದು ಕೇಳುತ್ತಾಳೆ. ಸ್ವಾಮಿ ಮತ್ತೆ ಡಂಗೂರ ಬಡಿದು "ಮಗಳೇ, ನಿನ್ನ ಕರುಳಿನ ಒಂದೇ ಒಂದು ಕಂದಮ್ಮನನ್ನು ನೀವು ಗಂಡಹೆಂಡಿರು ಪ್ರೀತಿಯಿಂದ ಒಪ್ಪಿ ನನ್ನ ನಾಲ್ಕು ಪಾದದ ಜೋಳಿಗೆಗೆ ಹಾಕಿ" ಎನ್ನುತ್ತಾರೆ. ಇದರಿಂದ ಖಿನ್ನಳಾದ ಕಲ್ಯಾಣಮ್ಮ ಗಂಡನ ಬಳಿಗೆ ಬಂದು ಯೋಗಿ ಹೇಳಿದ ವಿಚಾರ ತಿಳಿಸುತ್ತಾಳೆ. ಬಸವಲಿಂಗಯ್ಯನಿಗೆ ಕೋಪ ಅತಿಯಾಗಿ ಬಂದು "ಆ ಯೋಗಿ ನಾವು ಗಂಡಿಗಿಂತಲೂ ಹೆಚ್ಚಿನ ಪ್ರೀತಿಯಲ್ಲಿ ಸಾಕಿರುವ ಮಗುವನ್ನು ಕೇಳಿದನೇ_ ಅವನ ಕತ್ತಿನಮೇಲೆ ಗುದ್ದಿ, ಅವನನ್ನು ಆಚೆಗೆ ನೂಕಿ ಬಿಡಿ" ಎಂದು ಬಿಡುತ್ತಾನೆ, ಆ ಕೂಡಲೇ ಸ್ವಾಮಿ ಲಗುಬಗೆಯಿಂದ ತನ್ನ ಜೋಳಿಗೆಯ ಕಪ್ಪನ್ನು ತೆಗೆದು, ಆ ಹೆಣ್ಣು ಮಗುವಿನ ಮೈಮೇಲೆ ಚೆಲ್ಲಿ ಮರೆಯಾಗಿಬಿಡುತ್ತಾರೆ.
ಮಗುವಿಗೆ ಯಮಚಳಿಜ್ವರ ಬಂದು ಕ್ಷಣದಲ್ಲೇ ಸತ್ತು ಹೋಗುತ್ತದೆ ಪರದೇಶಿ ಯೋಗಿ ಕೊಂದ ಮಗುವನ್ನು ತೊಳೆದು ಸಿಂಗಾರ ಮಾಡಿ ಪಲ್ಲಕ್ಕಿಯ ಮೇಲೆ ಮಲಗಿಸಿಕೊಂಡು ಮಸಣಕ್ಕೆ ಬಂದು, ವಿಧಿವತ್ತಾಗಿ ಹೂತ ಅರಮನೆಗೆ ಹಿಂದಿರುಗಿ ದುಃಖತಪ್ತರಾಗಿ ತೂಗುಮಂಚದಮೇಲೆ ಕುಳಿತು ರೋದಿಸತೊಡಗುತ್ತಾರೆ, ಇದೇ ಸಮಯ ಕಾದಿದ್ದ ಪರಂಜ್ಯೋತಿ ಮಸಣಕ್ಕೆ ಬಂದು, ಕಪ್ಪುಧೂಳಿತವನ್ನು ಗೋರಿಯ ಮೇಲೆ ಪ್ರೋಕ್ಷಣೆಮಾಡಿ, "ಏಳು ಮಗಳೇ, ನಿನಗೆ ಜಯವಾಗುತ್ತದೆ" ಎಂದು ಹೇಳುತ್ತಿರುವಂತೆ ಮಗು ನಗುನಗುತ್ತಾ ಸಮಾಧಿಯಿಂದ ಒಡೆದು ಮೂಡಿ ನಿಲ್ಲುತ್ತಾಳೆ. ಆ ಮಗಳಿಗೆ ಹರಿವ ನದಿಯಲ್ಲಿ ಸ್ನಾನಮಾಡಿಸಿ. ಕಾವಿಯ ದೇವಾಂಗ ಉಡಿಸಿ, ವಿಭೂತಿ ಧರಿಸಿ. ಕಪ್ಪನ ಬೊಟ್ಟನ್ನು ಇಟ್ಟು, ನಾಗ ಬೆತ್ತವನ್ನು ಕೈಗೆಕೊಟ್ಟು, ಅವರ ತಂದೆತಾಯಿಗಳ ಸನ್ನಿಧಿಗೆ ಕರೆದು ತರುತ್ತಾರೆ. ತಂದೆತಾಯಿಗಳು ಮಗುವನ್ನು ತಬ್ಬಿ ಮುದ್ದಾಡುತ್ತಾರೆ. ಸ್ವಾಮಿ ಸಿಡಿಲಾಗಿ ಎರಗಿ ಹೇಳುತ್ತಾರೆ: "ಈ ಮಗಳು ನಿಮ್ಮದೇ ಆದರೆ ನೀವೇ ಕರ್ಕೊಳ್ಳಿ."
ಆದರೆ ಆ ಮಗಳು ತನ್ನ ವಸ್ತು ಹೋದಾಗಲೇ ತನಗೂ ತಾಕಕರಿಗೂ ಇರುವ ಸಂಬಂಧ ತಪ್ಪಿತೆಂದುಹೇಳಿ ನಾನು ನನ್ನ ಪರಂಜ್ಯೋತಿಯ ಪಾದ ಸನ್ನಿಧಿಯಲ್ಲಿ ನೆಲೆಸುತ್ತೇನೆ_ಎನ್ನುತ್ತಾಳೆ. ಆಗ ಸ್ವಾಮಿ ಆ ದಂಪತಿಗಳನ್ನು ಕುರಿತು "ನೀವು ಇನ್ನು ದುಃಖ ಪಡಬೇಡಿ_ಈ ಮಗಳನ್ನು ನಾವು ದೇವತೆಯಾಗಿ ಪರಿವರ್ತಿಸಿದ್ದೇವೆ. ಈಕೆಯ ಆಡಳಿತದಲ್ಲಿ ಮಠವೊಂದನ್ನು ಕಟ್ಟಿ ಕೊಡುತ್ತೇವೆ. ಆಕೆ ಪೂಜಾದಿಗಳನ್ನು ನೀವೇ ಮಾಡಿಕೊಂಡು, ಬರುವ ಉ೦ಬಳಿಯನ್ನು ಉಪಯೋಗಿಸಿಕೊಂಡು ಜೀವಿಸುತ್ತಾ ಬನ್ನಿ. ಈ ಮಗುವಿನ ಕ್ಷೇತ್ರ ಮುಂದೆ ಮಹಾ ಮಹಿಮಾನ್ವಿತ ಕ್ಷೇತ್ರವಾಗಿ, ನಿಮ್ಮ ಬದುಕನ್ನು ಭವ್ಯವಾಗಿ ಮಾಡುಗಳು," ಎನ್ನುತ್ತಾರೆ.
ಆ ಮಾತನ್ನು ಕೇಳಿ ಸಂತೋಷ ಚಿತ್ತರಾದ ಬಸವಲಿಂಗಯ್ಯ ಮತ್ತು ಕಲ್ಯಾಣಮ್ಮ ಸ್ವಾಮಿಗೂ ಆತನ ಜೊತೆಯ ಶರಣರಿಗೂ, ಕಾವಿಧರಿಸಿ ನಿಂತಿರು ಮಗಳಿಗೂ ನಮಸ್ಕಾರ ಮಾಡುತ್ತಾರೆ.
ಮುಂದೆ ನಿರ್ಣಯವಾಗಿದ್ದ ಶುಭ ಮುಹೂರ್ತದಲ್ಲಿ ರಾಚಪ್ಪಾಜಿಯ ವಿವಾಹ ನಡೆದು ಹೋಗುತ್ತದೆ.
ಮುಂದುವರಿಯುತ್ತದೆ ..
ಓದಿದ ಗುರುತಾಗಿ ಒಂದು ಲೈಕ್ ಮತ್ತು ಶೇರ್ ಮಾಡಿ.
ನಿಮ್ಮ ಪ್ರೋತ್ಸಾಹವಿರಲಿ.. ಧನ್ಯವಾದಗಳು 🙏
👇ಮುಂದಿನ ಸಂಚಿಕೆಯಲ್ಲಿ (೨ ದಿನಗಳಲ್ಲಿ)
8. ಬಸವನ ಬೆಟ್ಟವ ಬೆಳ್ಳಿಯ ಮಾಡುತ್ತೇವೆ; ಕುಂತೂರು ಬೆಟ್ಟವ ಚಿನ್ನವ ಮಾಡುತ್ತೇವೆ.
👈 ಹಿಂದಿನ ಸಂಚಿಕೆ:
6. ಕಲ್ಯಾಣಬಿಟ್ಟು ಪರಂಜ್ಯೋತಿಸ್ವರೂಪರು ಕೊಡೆಕಲ್ಲಿಗೆ ಬಿಜಯ ಮಾಡಿಸುತ್ತಾರೆ.
ನಮ್ಮ ಬ್ಲಾಗ್ ನಲ್ಲಿ ಓದಲು:
👉 https://goo.gl/cvLS2f
ಹಿಂದಿನ ಸಂಚಿಕೆ ನಮ್ಮ ವೆಬ್ಸೈಟ್ ನಲ್ಲಿ ಓದಲು:
👉 https://goo.gl/8sKEiu
ಹಿಂದಿನ ಸಂಚಿಕೆ ನಮ್ಮ ಫೇಸ್ಬುಕ್ ಪೇಜಲ್ಲಿ ಓದಲು:
👉 https://goo.gl/PXEbFH
<-------------------------->
Website: Siddappaji.com
Email: Lordsiddappaji@gmail.com
Find us: Siddappaji Lord (Admin)
Www.facebook.com/lord.siddappaji
Www.facebook.com/sri.manteswamy
Also on Twitter, Instagram & Google+
ಸಂಪೂರ್ಣ ಕಥೆ ತಿಳಿಯುವ ಆಸಕ್ತರು 👇 ಲಿಂಕ್ ಓಪನ್ ಮಾಡಿ
📓Read: https://goo.gl/aBBDN1 https://goo.gl/QYVt7o
🔊listen: https://goo.gl/hXvMdD https://goo.gl/BuXToJ https://goo.gl/e4hWAh
No comments:
Post a Comment